Tuesday, October 14, 2025

Latest Posts

ಧರ್ಮಸ್ಥಳ ಕೇಸ್‌ನಲ್ಲಿ ರಾಜಕೀಯ ಯುದ್ಧ!

- Advertisement -

ಧರ್ಮಸ್ಥಳ ಪ್ರಕರಣದ ತನಿಖೆಯನ್ನು ಎನ್‌ಐಎಗೇ ವಹಿಸಬೇಕು. ವಿಪಕ್ಷ ಬಿಜೆಪಿ-ಜೆಡಿಎಸ್ ಆಗ್ರಹ ಜೋರಾಗಿದೆ. ಕೇಂದ್ರ ಸರ್ಕಾರಕ್ಕೂ ಮನವಿ ಮಾಡಲು ದೋಸ್ತಿ ನಾಯಕರು ಸಜ್ಜಾಗಿದ್ದಾರೆ. ಇನ್ನೆರಡು ದಿನಗಳಲ್ಲಿ ಗೃಹ ಸಚಿವ ಅಮಿತ್‌ ಶಾರನ್ನು ಭೇಟಿಯಾಗಲು, ಹೆಚ್‌.ಡಿ. ಕುಮಾರಸ್ವಾಮಿ ತಯಾರಿ ಮಾಡಿಕೊಂಡಿದ್ದಾರೆ. ಆದರೆ, ಕಾಂಗ್ರೆಸ್ಸಿಗರು ಮಾತ್ರ ಎನ್‌ಐಎ ತನಿಖೆಯ ಅಗತ್ಯವಿಲ್ಲ ಅಂತಾ ಪದೇ ಪದೇ ಹೇಳ್ತಿದ್ದಾರೆ. ಆದರೆ ಧರ್ಮಸ್ಥಳ ಪ್ರಕರಣವನ್ನು ಎನ್‌ಐಎಗೆ ಕೊಡುವ ಅಗತ್ಯವಿಲ್ಲ ಅಂತಾ, ಮತ್ತೊಮ್ಮೆ ಡಿಸಿಎಂ ಡಿ.ಕೆ ಶಿವಕುಮಾರ್‌ ಮತ್ತು ಗೃಹ ಸಚಿವ ಜಿ. ಪರಮೇಶ್ವರ್‌ ಪುನರುಚ್ಚರಿಸಿದ್ದಾರೆ.

ಬಿಜೆಪಿಗರ ನಡವಳಿಕೆ ವಿರುದ್ಧ ಡಿಸಿಎಂ ಡಿ.ಕೆ. ಶಿವಕುಮಾರ್‌ ಗುಡುಗಿದ್ದಾರೆ. ಈಗ ಮಾಡಿರುವ ತನಿಖೆ ಅವರಿಗೆ ಸಮಾಧಾನ ಇಲ್ವಂತ. ಅವರೇ ಎಸ್‌ಐಟಿ ಬೇಕು ಅಂತಾ ಹೇಳಿದ್ದು. ಅವರೇ ಸ್ವಾಗತ ಮಾಡಿದ್ದು. ಆದರೆ ನ್ಯಾಯ ಕೊಡಬೇಕೆಂದು ಯಾವತ್ತೂ ಬಾಯಿ ಬಿಚ್ಚಲೇ ಇಲ್ಲ. ಅವರಲ್ಲೇ ಒಳಗೊಳಗೆ ಫೈಟಿಂಗ್‌ ಇದೆ. ಬಿಜೆಪಿಯಲ್ಲಿ 2 ಗುಂಪು ಇದೆ. ಅವರದ್ದೇ ಷಡ್ಯಂತ್ರ. ಬಿಜೆಪಿಯ ಮೂಲ ಕಾರ್ಯಕರ್ತರೇ ಈ ಎಲ್ಲಾ ವ್ಯವಸ್ಥೆ, ಷಡ್ಯಂತ್ರ ಮಾಡಿದ್ದಾರೆ. ಧರ್ಮಸ್ಥಳದ ಮೇಲೆ ಕೆಟ್ಟ ಹೆಸರು ತರಬೇಕೆಂದು ಮಾಡಿರೋದು ಎಲ್ಲಾ ಅವರೇ. ಈಗ ಎಲ್ಲಾ ನಾಟಕ ಆಡುತ್ತಿದ್ದಾರೆ ಅಂತಾ ಡಿಕೆಶಿ ಗುಡುಗಿದ್ರು.

ಎಸ್‌ಐಟಿ ಕೆಲಸ ಮಾಡುವಾಗ ಇನ್ನೊಂದು ಏಜೆನ್ಸಿಗೆ ಕೊಡುವ ಅಗತ್ಯವಿಲ್ಲ ಅಂತಾ, ಜಿ. ಪರಮೇಶ್ವರ್‌ ಮತ್ತೊಮ್ಮೆ ಕಡ್ಡಿ ಮುರಿದಂತೆ ಹೇಳಿದ್ದಾರೆ. ಈಗಾಗಲೇ ನಾನು ಹಲವು ಬಾರಿ ಹೇಳಿದ್ದೇನೆ. ಎನ್‌ಐಎಗೆ ಕೊಡುವ ಅಗತ್ಯವಿಲ್ಲ. ಎಸ್‌ಐಟಿಯನ್ನು ಮಾಡಿದ್ದೇವೆ. ಅದರ ಕೆಲಸ ಮಾಡ್ತಿದೆ. ಹೀಗಾಗಲೇ ಮುಖ್ಯಮಂತ್ರಿಗಳು ಹೇಳಿದ್ದಾರೆ. ದಿನನಿತ್ಯ ಈ ಪ್ರಕರಣವನ್ನು ಬೇರೆ ರೀತಿಯಲ್ಲಿ ತೆಗೆದುಕೊಂಡು ಹೋಗುತ್ತಿದ್ದಾರೆ. ಹೀಗಾಗಿ ಡಿಮ್ಯಾಂಡ್‌ ಮಾಡ್ತಾರೆ. ಎನ್‌ಐಎಗೆ ಕೊಡುವ ಅಗತ್ಯವಿಲ್ಲ ಅಂತಾ, ಪರಮೇಶ್ವರ್‌ ಹೇಳಿದ್ದಾರೆ.

ಮತ್ತೊಂದೆಡೆ ಬಿಜೆಪಿಗರ ಧರ್ಮಯಾತ್ರೆ ಬಗ್ಗೆ ಸಿಎಂ ಸಿದ್ದರಾಮಯ್ಯ ವ್ಯಂಗ್ಯವಾಡಿದ್ದಾರೆ. ಅವರದ್ದು ಧರ್ಮ ಯಾತ್ರೆ ಅಲ್ಲ ರಾಜಕೀಯ ಯಾತ್ರೆ. ಈಗ ಎಸ್‌ಐಟಿ ತನಿಖೆ ಮಾಡ್ತಿದೆ. ನಮ್ಮ ಪೊಲೀಸರ ಮೇಲೆ ನಂಬಿಕೆ ಇಲ್ಲ. ಎನ್‌ಐಎ ಮಾಡಿ ಅಂತಾ ಹೇಳ್ತಾರೆ. ಪ್ರಾರಂಭದಲ್ಲಿ ತನಿಖೆ ಮಾಡಿ ಅಂತಾ ಹೇಳಿದ್ರಾ?. ಸ್ವಲ್ಪ ದಿನದವರೆಗೆ ತನಿಖೆ ಮಾಡಲು ಹೇಳಲೇ ಇಲ್ಲ. ಆಮೇಲೆ ಮೃತದೇಹಗಳು ಸಿಗದಿದ್ದಾಗ ತನಿಖೆ ಮಾಡಿ ಅಂತಾ ಹೇಳ್ತಿದ್ದಾರೆ. ಹೀಗಂತ ಸಿಎಂ ಸಿದ್ದರಾಮಯ್ಯ ಟೀಕಿಸಿದ್ದಾರೆ.

- Advertisement -

Latest Posts

Don't Miss