Raichur news
ಇಂದು ನಗರದಲ್ಲಿರುವ ರಾಯಚೂರು ಗ್ರಾಮೀಣ, ಬಿಜೆಪಿ ಕಾರ್ಯಾಲಯದಲ್ಲಿ ಮಮದಾಪುರ ಗ್ರಾಮದ 60 ಕ್ಕೂ ಹೆಚ್ಚು ಯುವಕರು ಕಾಂಗ್ರೆಸ್ ಪಾರ್ಟಿ ತೊರೆದು, ಬಿಜೆಪಿ ಸೇರ್ಪಡೆಯಾದರು. ಮಮದಾಪುರ ಗ್ರಾಮದ ಬಿಜೆಪಿ ಮುಖಂಡ ಬಸನಗೌಡ ಹಾಗೂ ನೆಲಹಾಳ ಬಿಜೆಪಿ ಮುಖಂಡ ರಾಜಪ್ಪ ಅವರ ಮುಂದಾಳತ್ವದಲ್ಲಿ, ಮಮದಾಪುರ ಗ್ರಾಮದಿಂದ ಬೈಕ್ ರಾಲಿಯಲ್ಲಿ ಬಂದ ಯುವಕರು ಮಾಜಿ ಶಾಸಕ ತಿಪ್ಪರಾಜು ಸಮ್ಮುಖದಲ್ಲಿ ಭಾರತೀಯ ಜನತಾ ಪಾರ್ಟಿಗೆ ಸೇರ್ಪಡೆಗೊಂಡರು. ನೆರೆದಿದ್ದ ಮುಖಂಡರಾದ ಮಲ್ಲಿಕಾರ್ಜುನ, ರಂಗಪ್ಪ ನಾಯಕ,ಈರಯ್ಯಸ್ವಾಮಿ,,ಬೂದಿಬಸವ
ಅವರನ್ನು ಪಕ್ಷದ ಶಾಲು ಹೊದಿಸಿ, ಬರಮಾಡಿಕೊಂಡ ತಿಪ್ಪರಾಜು ಅವರು, ಪಕ್ಷ ಸೇರಿದ ಯುವಕರೆಲ್ಲರನ್ನು ಸ್ವಾಗತಿಸುತ್ತಾ ಈ ಬಾರಿ ಕಮಲದ ಚಿನ್ಹೆಗೆ ಮತ ನೀಡಿ ಗೆಲ್ಲಿಸುವಂತೆ ಕರೆ ನೀಡಿದರು. ಈ ಸಂದರ್ಭದಲ್ಲಿ ಬಿಜೆಪಿ ರಾಯಚೂರು ಗ್ರಾಮೀಣ ಮಂಡಲ ಅಧ್ಯಕ್ಷರಾದ ಶ್ರೀ ಶಂಕರಗೌಡ ಮಿರ್ಜಾಪುರ, ಉಪಾಧ್ಯಕ್ಷ ಸಂಗಮೇಶ ಕಲ್ಮಲ ಸೇರಿದಂತೆ, ಹಲವು ಮುಖಂಡರು ಹಾಜರಿದ್ದರು.