ಕಾಂಗ್ರೆಸ್ ಜೆಡಿಎಸ್ ನ 17 ಶಾಸಕರು ರಾಜೀನಾಮೆ ಕೊಟ್ಟ ಪರಿಣಾಮ ಕುಮಾರಸ್ವಾಮಿ ಸಿಎಂ ಕುರ್ಚಿಕಳೆದುಕೊಂಡ್ರು.. ನಂತರ ಆ ಶಾಸಕರ ರಾಜೀನಾಮೆ ಅಂಗೀಕಾರವಾಗದೆ ಅನರ್ಹರಾದ್ರು. ಆ ಅನರ್ಹ ಶಾಸಕರ ಬಲಿದಾನ ಫಲವೇ ಬಿಎಸ್ ಯಡಿಯೂರಪ್ಪ ಸಿಎಂ ಆಗಿರೋದು.. ಬಿಜೆಪಿ ಪಾಲಿಗೆ 17 ಶಾಸಕರೂ ಇಂಪಾರ್ಟೆಂಟ್ ಅದರಲ್ಲಿ ಹೀರೆಕೆರೂರು ಕ್ಷೇತ್ರದ ಬಿ.ಸಿ ಪಾಟೀಲ್ ಕೂಡ ಒಬ್ರು..
ಅನರ್ಹಗೊಂಡ ಶಾಸಕರ ಗುಂಪಿನಲ್ಲಿ ಹೀರೆಕೆರೂರು ಕಾಂಗ್ರೆಸ್ ಶಾಸಕರಾಗಿದ್ದ ಬಿ,ಸಿ ಪಾಟೀಲ್ ಕೂಡ ಇದ್ದಾರೆ. ಇದೀಗ ಉಪ ಚುನಾವಣೆಯಲ್ಲಿ ಸಹಜವಾಗಿ ಸುಪ್ರೀಂ ಕೋರ್ಟ್ ಕ್ಲಿಯರೆನ್ಸ್ ಕೊಟ್ರೆ ಬಿ.ಸಿ ಪಾಟೀಲ್ ಬಿಜೆಪಿ ಅಭ್ಯರ್ಥಿಯಾಗಲಿದ್ದಾರೆ.. ಕಳೆದ ಬಾರಿ ಹೀರೆಕೆರೂರು ಕ್ಷೇತ್ರದಲ್ಲಿ ಬಿಜೆಪಿಯಿಂದ ಸ್ಪರ್ಧೇ ಮಾಡಿದ್ದ ಮಾಜಿ ಶಾಸಕ ಯು.ಬಿ ಬಣಕಾರ್ ನಾಯಕರ ವಿರುದ್ಧ ಬಂಡೆದಿದ್ದಾರೆ.. ಅಷ್ಟಕ್ಕೂ ಬಿ.ಸಿ ಪಾಟೀಲ್ ಹಾಗೂ ಯು.ಬಬಿ ಬಣಕಾರ್ ರಾಜಕೀಯ ಇತಿಹಾಸ ನೋಡೋದಾದ್ರೆ ಯು.ಬಿ ಬಣಕಾರ್ ರಾಜಕಾರಣದಲ್ಲಿ ಸೀನಿಯರ್.. 1994ರಲ್ಲಿ ರಾಜ್ಯದಲ್ಲಿ ಬಿಜೆಪಿಯಿಂದ ಗೆಲುವು ಸಾಧಿಸಿದ ಕೆಲವೇ ಕೆಲವು ಶಾಸಕರಲ್ಲಿ ಯು.ಬಿ ಬಣಕಾರ್ ಕೂಡ ಒಬ್ಬರು ಹಾಗೆ ನೋಡಿದ್ರೆ ಆರ್. ಅಶೋಕ್, ಸಿಟಿ ರವಿ, ಗೋವಿಂದ ಕಾರಜೋಳ ಇವರೆಲ್ಲರಿಗಿಂತ ಬಿಜೆಪಿಯಲ್ಲಿ ಸೀನಿಯರ್ ರಾಜಕಾರಣಿ.. 1999ರ ಚುನಾವಣೆಯಲ್ಲಿ ಬಿಜೆಪಿಯಿಂದ ಎರಡನೇ ಬಾರಿ ಸ್ಪರ್ಧೆ ಮಾಡುವ ಬಣಕಾರ್ ಪಕ್ಷೇತರ ಅಭ್ಯರ್ಥಿ ಬನ್ನಿಕೋಡ್ ವಿರುದ್ಧ ಸೋಲು ಕಾಣ್ತಾರೆ.. ನಂತರ ಸಿನಿಮಾ, ಪೊಲೀಸ್ ಇಲಾಖೆಯಲ್ಲಿ ತುಂಬಾ ಹೆಸರು ಗಳಿಸಿದ್ದ ಬಿ.ಸಿ ಪಾಟೀಲ್ 2004ರಲ್ಲಿ ಜೆಡಿಎಸ್ ಪಕ್ಷದಿಂದ ಬಿಜೆಪಿಯ ಯು.ಬಿ ಬಣಕಾರ್ ವಿರುದ್ಧ ಗೆಲುವು ಸಾಧಿಸ್ತಾರೆ. ನಂತರ 2008ರ ಚುನಾವಣೆಯಲ್ಲಿ ಬಿ.ಸಿ ಪಾಟೀಲ್ ಜೆಡಿಎಸ್ ತೊರೆದು ಕಾಂಗ್ರೆಸ್ ಸೇರಿ ಎರಡನೇ ಬಾರಿ ಆಯ್ಕೆ ಆಗ್ತಾರೆ. ಯು.ಬಿ ಬಣಕಾರ್ ಈ ಬಾರಿ ಪಕ್ಷೇತರವಾಗಿ ಸ್ಪರ್ಧೇ ಮಾಡಿ ಸೋಲು ಕಾಣ್ತಾರೆ.. ನಂತರ 2014ರಲ್ಲಿ ಬದಲಾದ ರಾಜಕೀಯ ಸನ್ನಿವೇಶದಲ್ಲಿ ಬಿಜೆಪಿ ತೊರೆದು ಕೆಜೆಪಿ ಸೇರುವ ಯು.ಬಿ ಬಣಕಾರ್ ಬಿ.ಸಿ ಪಾಟೀಲ್ ಹ್ಯಾಟ್ರಿಕ್ ಗೆಲುವಿಗೆ ತಡೆಹಾಕಿ ಗೆಲುವು ಸಾಧಿಸ್ತಾರೆ.. ನಂತರ 2018ರ ಚುನಾವಣೆಯಲ್ಲಿ ಬಿಜೆಪಿಗೆ ವಾಪಸ್ ಬರುವ ಯು.ಬಿ ಬಣಕಾರ್ ಮತ್ತೆ ಕಾಂಗ್ರೆಸ್ ನ ಬಿ.ಸಿ ಪಾಟೀಲ್ ವಿರುದ್ಧ ಸೋಲು ಕಾಣ್ತಾರೆ.. ಕಳೆದ 25 ವರ್ಷಗಳಿಂದ ಬಿಜೆಪಿಯೊಂದಿಗೆ ಇರುವ ಬಣಕಾರ್ ಇದೀಗ ಬಿ,ಸಿ ಪಾಟೀಲ್ ಎಂಟ್ರಿಯಿಂದ ತನ್ನ ತವರು ಪಕ್ಷದಲ್ಲೇ ಟಿಕೆಟ್ ಇಲ್ಲದ ಸ್ಥಿತಿ ನಿರ್ಮಾಣ ವಾಗಿದೆ.. ಮೂರು ಬಾರಿ ಬಿ.ಸಿ ಪಾಟೀಲ್ ವಿರುದ್ಧ ಸೋತು, ಒಂದು ಬಾರಿ ಗೆಲುವು ಕಂಡಿರುವ ಯು.ಬಿ ಬಣಕಾರ್ ಇದೀಗ ತನ್ನ ಅಸ್ಥಿತ್ವ ಉಳಿಸಿಕೊಳ್ಳುವ ಸಲುವಾಗಿ ಬಂಡಾಯವೆದ್ದಿದ್ದಾರೆ.. ಇದನ್ನೇ ಕಾಂಗ್ರೆಸ್ ನಾಯಕರು ಬಂಡವಾಳ ಮಾಡಿಕೊಂಡಿದ್ದು ಬಣಕಾರ್ ಮನೆ ಬಾಗಿಲಲ್ಲಿ ಬಂದು ನಿಂತಿದ್ದಾರೆ.
ಹೀರೆಕೆರೂರು ಕ್ಷೇತ್ರದಲ್ಲಿ ತನ್ನದೇ ವೋಟ್ ಬ್ಯಾಂಕ್ ಹೊಂದಿದ್ದು ಬಿ.ಸಿ ಪಾಟೀಲ್ ಬಿಜೆಪಿಯಿಂದ ಚುನಾವಣೆಗೆ ನಿಂತರೂ ಗೆಲುವು ಸುಲಭವಲ್ಲ. ಬಣಕಾರ್ ಬೆಂಬಲಿಗರನ್ನ ಮನವೊಲಿಸಿ ಪಕ್ಷದ ಪರವಾಗಿ ಪ್ರಚಾರ ಮಾಡಿದ್ರೆ ಬಿ.ಸಿ ಪಾಟೀಲ್ ಹಾದಿ ಸುಗಮವಾಗಲಿದೆ.. ಇಲ್ಲದಿದ್ರೆ ಕೌರವನ ಹಾದಿ ಕಷ್ಟ ಕಷ್ಟ..
ನಿಮ್ಮ ಪ್ರಕಾರ ಹೀರೆಕೆರೂರು ಕ್ಷೇತ್ರದಲ್ಲಿ ಯಾವ ಪಕ್ಷ ಗೆಲುವು ಸಾಧಿಸುತ್ತೆ..? ನಿಮ್ಮ ಅಭಿಪ್ರಾಯ ಕಾಮೆಂಟ್ ಮಾಡಿ