Tuesday, October 28, 2025

Latest Posts

ವಾಸವಿರದ ಪ್ರದೇಶದಿಂದಲೇ ಮತದಾನ: 61ನೇ ವಾರ್ಡಿನಲ್ಲಿ ಬಹುದೊಡ್ಡ ಯಡವಟ್ಟು…!

- Advertisement -

www.karnatakatv.net : ಹುಬ್ಬಳ್ಳಿ: ಆ ಪ್ರದೇಶದಲ್ಲಿ ಜನರು ಇಲ್ಲ, ಮನೆಗಳು ಸಹ ಇಲ್ಲ. ಆ‌ ಪ್ರದೇಶದಲ್ಲಿದ್ದ ಜನರು ಮನೆ ತೊರೆದು‌ ದಶಕವೇ ಕಳೆದಿದೆ. ಹೀಗೆ ಜನರು ವಾಸವಿಲ್ಲದಿದ್ದರೂ ಅಲ್ಲಿನ‌ ಮತದಾರರ ಪಟ್ಟಿಯಲ್ಲಿ ಸಾವಿರಾರು ಜನರ ಹೆಸರಿದೆ. ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆ ಚುನಾವಣೆ ಹಿನ್ನೆಲೆಯಲ್ಲಿ ಜಿಲ್ಲಾಡಳಿತ ಬಿಡುಗಡೆ ಮಾಡಿರುವ ಮತದಾರರ ಪಟ್ಟಿಯಲ್ಲಿ ಇತಂಹ ನಕಲಿ ವೋಟ್ ಗಳ ಪಟ್ಟಿಯೇ ಇರುವುದು ಇದೀಗ ಬೆಳಕಿಗೆ ಬಂದಿದೆ.

ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಯ ಚುನಾವಣೆಗೆ ದಿನಗಣನೆ ಶುರುವಾಗಿದೆ. ಚುನಾವಣಾ ಆಯೋಗ ಯಾವುದೇ ಕ್ಷಣದಲ್ಲಾದರೂ ದಿನಾಂಕ ಪ್ರಕಟ ಮಾಡಲು ಸಿದ್ಧವಾಗಿದೆ. ಈ ಹಿನ್ನೆಲೆಯಲ್ಲೆ ಧಾರವಾಡ ಜಿಲ್ಲಾಡಳಿತ ಈಗಾಗಲೇ 82 ವಾರ್ಡಗಳ ಮತದಾರರ ಪಟ್ಟಿಯನ್ನ ಬಿಡುಗಡೆ ಮಾಡಿದೆ. ಆದ್ರೆ ಮಹಾನಗರ ಪಾಲಿಕೆ‌ ಚುನಾವಣೆಗೆ ಮುಹೂರ್ತ ಸಿದ್ದವಾಗುವ ದಿನ ಹತ್ತಿರ ಬರುತ್ತಿದ್ದಂತೆ, ಮತದಾರರ ಪಟ್ಟಿಯಲ್ಲಿನ ಲೋಪದೋಷಗಳು ಒಂದೋದಾಗಿ ಬಯಲಾಗುತ್ತಿವೆ. ಹೌದು, ಪಾಲಿಕೆ‌ ಚುನಾವಣೆಗೆ ಹೊಸದಾಗಿ ಬಿಡುಗಡೆ ಮಾಡಿರುವ ಮತದಾರರ ಪಟ್ಟಿಯಲ್ಲಿ ಜನರು ವಾಸವಿಲ್ಲದಿದ್ದರೂ, ದಶಕದ ಹಿಂದಯೇ ಮನೆ ತೊರೆದು ಹೋಗಿದ್ರು ವಾಸವಿರದ ಪ್ರದೇಶದಲ್ಲಿ ಸಾವಿರಾರು ಜನರ ಮತದಾನದ ಹಕ್ಕು ಇರೋದು ಸಾಕಷ್ಟು ಅನುಮಾನಗಳಿಗೆ ಎಡೆಮಾಡಿ ಕೊಟ್ಟಿದೆ. ಜನರೇ ವಾಸವಿಲ್ಲದಿದ್ದರೇ ಮತದಾನದ ಹಕ್ಕನ್ನ ಚಲಾವಣೆ ಮಾಡ್ತಿರೋದಕ್ಕೆ ಹಲವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ರೈಲ್ವೆ ಕಾರ್ಯಾಗಾರದ ಹಿಂಭಾಗದಲ್ಲಿನ ಡೌನ್ ಚಾಳ, ಸಿಮೆಂಟ್ ಚಾಳ ಹಾಗೂ ವಿದ್ಯಾರಣ್ಯನಗರದ ನಿವಾಸಿಗಳನ್ನ 2012 ರಲ್ಲೆ ಅಲ್ಲಿಂದ ತೆರವುಗೊಳಿಸಲಾಗಿದೆ. ನೈರುತ್ಯ ರೈಲ್ವೆ ಇಲಾಖೆಯ ಜಾಗವನ್ನ ಅತಿಕ್ರಮಣ ಮಾಡಿ‌ ಮನೆ ನಿರ್ಮಿಸಲಾಗಿದೆ ಎಂದು 500ಕ್ಕೂ ಅಧಿಕ ಮನೆಗಳನ್ನ ತೆರವುಗೊಳಿಸಿ ದಶಕವೇ ಕಳೆದಿದೆ. ಆದ್ರೆ ಮನೆ ತೊರೆದು ಬೇರೆಡೆ ವಾಸವಿರುವ ಸಾವಿರಾರು ಮತದಾರರ ಹೆಸರನ್ನ ಇನ್ನೂ ಹುಬ್ಬಳ್ಳಿಯ 61 ನೇ ವಾರ್ಡನಲ್ಲೆ ಇರಿಸಿರುವುದು ಅನುಮಾನಕ್ಕೆ‌ ಕಾರಣವಾಗಿದೆ. ಅಲ್ಲದೇ ಮನೆ ಇಲ್ಲದಿದ್ದರೂ, ಮತದಾರರು ಆ ವಾರ್ಡನಲ್ಲಿ ವಾಸವಿಲ್ಲದಿದ್ದರೂ ಮತದಾರರ ಪಟ್ಟಿಯಲ್ಲಿ ಸಾವಿರಾರು ಜನರ ಹೆಸರು ಇರೋದು ನಕಲಿ ಮತದಾನ ಮಾಡೋಕೆ ಮಾಡಿದ ಪ್ಲ್ಯಾನ್ ಅನ್ನೋ‌ ಅನುಮಾನ ಮೂಡಿದೆ. ಹೀಗಾಗಿ 61ನೇ ವಾರ್ಡನಲ್ಲಿ ಈ ತರಹದ‌ ಯಡವಟ್ಟು ಆಗಿರುವ ಬಗ್ಗೆ ಪಾಲಿಕೆ ಆಯುಕ್ತರನ್ನ ಪ್ರಶ್ನೆ ಮಾಡಿದ್ರೆ ಅವರು ಹೇಳೋದೇ ಬೇರೆ‌ ನೋಡಿ.

61ನೇ ವಾರ್ಡನಲ್ಲಿ ಮನೆ ಇಲ್ಲದಿದ್ದರೂ, ಜನರು ವಾಸ ಇರದಿದ್ದರೂ ಮತದಾರರ ಪಟ್ಟಿಯಲ್ಲಿ ಬೇರೆಡೆ ವಾಸ ಇರೋ ಸಾವಿರಾರು ಜನರ ಹೆಸರು ಇರೋದು ಸಾಕಷ್ಟು ಅನುಮಾನಕ್ಕೆ ಕಾರಣವಾಗಿದೆ. ಅಲ್ಲದೇ 2018 ರ ವಿಧಾನಸಭೆ ಚುನಾವಣೆಯ ವೇಳೆಯಿಂದ ಮತದಾರರ ಪಟ್ಟಿಯಿಂದ ಸ್ಥಳಾಂತರಗೊಂಡವರ ಹೆಸರನ್ನ ಕೈ ಬಿಡುವಂತೆ ಮನವಿ ಮಾಡಿದ್ರು ಮತ್ತೆ ಮತ್ತೆ ಆ ಮತದಾರರ ಹೆಸರುಗಳನ್ನ ಆ ವಾರ್ಡನಲ್ಲಿ ಮುಂದು ವರೆಸಿರುವುದು ಜಿಲ್ಲಾಡಳಿತದ ಯಡವಟ್ಟಿಗೆ ಸಾಕ್ಷಿಯಾಗಿದೆ. ಅಲ್ಲದೇ ಉಸ್ತುವಾರಿ ಸಚಿವ ಜಗದೀಶ ಶೆಟ್ಟರ್ ಗಮನಕ್ಕೂ ಈ ವಿಚಾರದ ಬಂದ್ರು ಸರಿಯಾಗದಿರುವುದು ನಿಜಕ್ಕೂ ದುರ್ದೈವವಾಗಿದೆ.‌

- Advertisement -

Latest Posts

Don't Miss