- Advertisement -
Mumbai News:
ಇತ್ತೀಚೆಗೆ ಮುಂಬೈನಲ್ಲಿ ನಡೆದ ಅಪಘಾತಕ್ಕೆ ಸೀಟ್ ಬೆಲ್ಟ್ ಹಾಕದಿರುವುದೇ ಕಾರಣ ಎಂಬ ಆರೋಪ ಕೇಳಿಬಂದಿತ್ತು.ಇದೀಗ ಈ ವಿಚಾಋವಾಗಿ ನಟಿ,ನಿರ್ದೇಶಕಿ ಪೂಜಾ ಭಟ್ ಟ್ವೀಟ್ ಮೂಲಕ ಸರಕಾರಕ್ಕೆ ಬಿಸಿ ಮುಟ್ಟಿಸಿದ್ದಾರೆ. ಹೌದು ರಸ್ತೆಗಳ ದುರಸ್ತಿ ಬಗ್ಗೆ ಇವರು ಧ್ವನಿ ಎತ್ತಿದ್ದಾರೆ . ಪೂಜಾ ಟ್ವೀಟ್ ಗೆ ಎಲ್ಲೆಡೆ ಬೆಂಬಲ ವ್ಯಕ್ತವಾಗಿದೆ.
ಪೂಜಾ ಟ್ವೀಟ್ ಮೂಲಕ ಈ ರೀತಿ ಹೇಲಿದ್ದಾರೆ. ‘ಎಲ್ಲರೂ ಸೀಟ್ ಬೆಲ್ಟ್ ಹಾಗೂ ಏರ್ಬ್ಯಾಗ್ ಬಗ್ಗೆ ಮಾತನಾಡುತ್ತಾರೆ. ಮುಖ್ಯವೇ? ಖಂಡಿತವಾಗಿಯೂ ಮುಖ್ಯ. ಆದರೆ, ದೋಷಪೂರಿತ ರಸ್ತೆ ಹಾಗೂ ಗುಂಡಿಗಳನ್ನು ಮುಚ್ಚುವುದು ಕೂಡ ಅಷ್ಟೇ ಮುಖ್ಯ. ರಸ್ತೆ, ಹೆದ್ದಾರಿ ನಿರ್ಮಿಸಲು ಕಳಪೆ ವಸ್ತುಗಳನ್ನು ಬಳಸಿದರೆ ಅದು ಅಪರಾಧವೆಂದು ಪರಿಗಣಿಸಲ್ಪಡುವುದು ಯಾವಾಗ? ಒಮ್ಮೆ ನಿರ್ಮಿಸಿದ ರಸ್ತೆಗಳನ್ನು ನಿರ್ವಹಿಸುವುದು ಕೂಡ ಮುಖ್ಯ’ ಎಂದು ಹೇಳಿದ್ದಾರೆ.
- Advertisement -