ಹಾಸನ:ಹಾಸನ ಜಿಲ್ಲೆ ಹೊಳೆನರಸೀಪುರ ತಾಲ್ಲೂಕಿನ ಹಂಗರಹಳ್ಳಿ ಗ್ರಾಮದಲ್ಲಿ ಈ ಸೇತುವೆ ಕಳಪೆ ಕಾಮಗಾರಿಯಿಂದ ಸುದ್ದಿಯಾಗಿದ್ದ ಹಂಗರಹಳ್ಳಿ ರೈಲ್ವೇ ಮೇಲ್ ಸೇತುವೆಯ ತಡೆ ಗೋಡೆ ಮತ್ತೊಮ್ಮೆ ಕುಸಿದು ಅಪಾಯದ ಅಂಚಿಗೆ ತಲುಪಿದೆ.
ಹಾಸನ ಮೈಸೂರು ಮಾರ್ಗದಲ್ಲಿ ವಾಹನ ಸಂಚಾರಕ್ಕೆ ಆಡಚಣೆಯಾಗಿದ್ದ ರೈಲ್ವೆ ಹಳಿಗೆ ಅಡ್ಡಲಾಗಿ ಈ ಮೇಲ್ ಸೇತುವೆ ನಿರ್ಮಾಣ ಮಾಡಲಾಗಿತ್ತು.ನಿರ್ಮಾಣ ಹಂತದಲ್ಲಿ ಕಳಪೆ ಕಾಮಗಾರಿಯಿಂದಾಗಿ ಸುದ್ದಿಯಾಗಿದ್ದ ಪ್ಲೈ ಓವರ್ ತಡೆ ಗೋಡೆ. ಮತ್ತೊಮ್ಮೆ ಕುಸಿದು ಬಿದ್ದು ಪ್ರಯಾಣಿಕರಿಗೆ ಆತಂಕ ಎದುರಾಗಿದೆ.
ಸೇತುವೆ ಕುಸಿದ ಭಾಗದ ರಸ್ತೆಯಲ್ಲಿ ವಾಹನಗಳ ಒತ್ತಡ ಬೀಳದಂತೆ ರಸ್ತೆಗೆ ಅಲ್ಲಲ್ಲಿ ಕಲ್ಲುಗಳನ್ನು ಇಟ್ಟು ರೈಲ್ವೆ ಇಲಾಖೆ ಕೈ ತೊಳೆದುಕೊಂಡಿದೆ.ಅಪಾಯದ ಅಂಚಿಗೆ ತಲುಪಿರುವ ಈ ಮೇಲ್ ಸೇತುವೆಯ ಒಂದು ಭಾಗದಲ್ಲಿ ವಾಹನಗಳು ಸಂಚರಿಸುತ್ತಿವೆ.
ನಾಗರಾಜ್ ಕರ್ನಾಟಕ ಟಿವಿ
ಹಾಸನ
School wall fell down :ಸತತ ಮಳೆಗೆ ಶಾಲೆ ಗೋಡೆ ಕುಸಿತ ತಪ್ಪಿದ ಭಾರಿ ಅನಾಹುತ