- Advertisement -
Tumukur News:
ತುಮಕೂರಿನಲ್ಲಿ ಜನರು ಪೋಸ್ಟ್ ಸಿಗದೇ ಸಂಕಷ್ಟ ಎದುರಿಸುತ್ತಿದ್ದಾರೆ. ಇದಕ್ಕೆ ಕಾರಣ ಪೋಸ್ಟ್ ಆಫೀಸ್ ಇರದಿರುವುದಲ್ಲ ಬದಲಾಗಿ ಪೋಸ್ಟ್ ಮಾಸ್ಟರ್ ಎಣ್ಣೆ ಮಾಸ್ಟರ್ ಆಗಿರೋದು. ಹೌದು ತುಮಕೂರಿನ ನಾಗೇಂದ್ರ ಎಂಬುವವರು ಸದ್ಯ ಅಲ್ಲಿ ಪೋಸ್ಟ್ ಮಾಸ್ಟರ್ ಆಗಿದ್ದು ಇದೀಗ ಅವರು ನಿರಂತರವಾಗಿ ಎಣ್ಣೆ ಮತ್ತಿನಲ್ಲೇ ಇರುವ ಕಾರಣ ಊರಿನ ಜನತೆಗೆ ಅಗತ್ಯ ಸಮಯದಲ್ಲಿ ಪೋಸ್ಟ್ ಸಿಗದೇ ಇರುವುದರಿಂದ ಬಹಳಷ್ಟು ಸಂಕಷ್ಟ ಎದುರಿಸುತ್ತಿದ್ದಾರೆ. ಹೌದು ಪೋಸ್ಟ್ ಮಾಸ್ಟರ್ ನಿರಂತರವಾಗಿ ಎಣ್ಣೆ ಪಾನ ಮಾಡಿ ಮನೆಯಲ್ಲಿಯೇ ತಂಗಿರುತ್ತಾನೆ.ಈ ಕಾರಣದಿಂದ ಊರಿನವರಿಗೇ ಯಾವುದೇ ಪೋಸ್ಟ್ ಸಿಗುತ್ತಿಲ್ಲ ಬದಲಾಗಿ ಊರವರು ಪೋಸ್ಟ್ ಮಾಸ್ಟರ್ ಮನೆಗೇ ಹೋಗಿ ಪೋಸ್ಟ್ ಪಡೆಯುವಂತಾಗಿದೆ.ಈ ಕಾರಣದಿಂದ ಜನರು ಸಂಕಷ್ಟ ಎದುರಿಸುತ್ತಿದ್ದಾರೆ.
- Advertisement -