Friday, December 27, 2024

Latest Posts

1 ರೂಪಾಯಿಂದ 2 ಸಾವಿರದ ಮಡಿಕೆ ಪಾತ್ರೆಗಳು ಇಲ್ಲಿ ಸಿಗುತ್ತೆ..!

- Advertisement -

ಮಡಿಕೆ ಪಾತ್ರೆಗಳಲ್ಲಿ ಅಡುಗೆ ಮಾಡಿ ತಿಂದ್ರೆ ಆರೋಗ್ಯಕ್ಕೆ ತುಂಬಾ ಒಳ್ಳೇಯದು. ಹೀಗಂತ ಇತ್ತೀಚೆಗೆ ವೈದ್ಯರೂ ಸಹ ರೋಗಿಗಳಿಗೆ ಹೇಳ್ತಿದ್ದಾರೆ. ಅದ್ರಲ್ಲೂ ನಮ್ಮ ಪುರಾತನ ಕಾಲದಲ್ಲಿ, ಅಜ್ಜ, ಅಜ್ಜಿಯರು ಎಲ್ಲರೂ ಅಡುಗೆ ಮಾಡಲು, ಮನೆಯಲ್ಲಿ ಬಳಸುತಿದ್ದು ಮಡಿಕೆ ಪಾತ್ರೆಗಳೇ. ಹಾಗಾಗಿ ಅವರ ಆರೋಗ್ಯವೂ ಅಷ್ಟೇ ಗಟ್ಟಿ ಮುಟ್ಟಾಗಿರ್ತಿತ್ತು. ಅಷ್ಟಕ್ಕೂ ಈಗ ಮಡಿಕೆಗಳ ಬಗ್ಗೆ ಯಾಕೆ ಹೇಳ್ತಿದ್ದಾರೆ ಅಂದ್ಕೊಳ್ತಿದ್ದೀರಾ, ಹೌದು, ನಾವೀಗ ನಿಮಗೆ ಹೇಳ್ತಿರೋ ವಿಷಯ ಈ ಮಡಿಕೆಯ ಬಗ್ಗೆಯೇ ಆಗಿದೆ.

ಬೆಂಗಳೂರಿನಲ್ಲೇ ಅತಿ ಹೆಚ್ಚು ಮಡಿಕೆಗಳನ್ನ ತಯಾರಿಸೋ ಒಂದು ವಿಶೇಷ ಸ್ಥಳವಿದೆ. ಅದೇ “ಪಾಟರಿ ಟೌನ್”. ಬರೋಬ್ಬರಿ 125 ವರ್ಷಗಳ ಇತಿಹಾಸವಿರೋ ಈ ಮಡಿಕೆಯ ತಾಣದಲ್ಲಿ ಪ್ರತೀದಿನ ವ್ಯಾಪಾರ ಜೋರಾಗಿಯೇ ನಡೆಯುತ್ತಿರುತ್ತೆ. ಇಡೀ ರಾಜ್ಯದ ಮೂಲೆ ಮೂಲೆಗೂ ಮಡಿಕೆಗಳು ಈ ಸ್ಥಳದಿಂದಲೇ ರಫ್ತಾಗೋದು. ಚಿನ್ನರಾಜ ಒಡೆಯರ್ ಅವರು ಶುರು ಮಾಡಿದ ಈ ಮಡಿಕೆಯ ಮಳಿಗೆ ಈಗ ಬೃಹತ್ ಮಟ್ಟಕ್ಕೆ ವಿಸ್ತಾರವಾಗಿದೆ. ಇವರ ಬಳಿಕ ಪುತ್ರ ಬೋಜಿರಾಜ ಒಡೆಯರ್ ಮುಂದುವರೆಸಿದ್ದು, ಈಗ ಅವರ ಪುತ್ರ ಮುರುಳಿ ಬೋಜಿ ವ್ಯಾಪಾರ ನೋಡಿಕೊಳ್ತಿದ್ದಾರೆ.

ಇಲ್ಲಿ 1ರೂ ಇಂದ 2 ಸಾವಿರದವರೆಗೂ ಮಡಿಕೆಯ ಪಆತ್ರೆಗಳು ಸಿಗುತ್ತವೆ. ದೀಪಗಳು, ಮಡಿಕೆ ಬಟ್ಟಲು, ಮಡಿಕೆ ತಟ್ಟೆ, ಮಡಿಕೆ ಲೋಟ, ಮಡಿಕೆ ವಾಟರ್ ಬಾಟೆಲ್, ಮಡಿಕೆ ದೂಪ, ದೋಸೆ ಕಾವಲಿ, ಪಡ್ಡು ಕಾವಲಿ, ತಂದೂರಿ ಮಡಿಕೆಗಳು ಹೀಗೆ ಸಾಕಷ್ಟು ತರಹದ ವೆರೈಟಿ ವೆರೈಟಿ ಮಡಿಕೆಯ ಪಾತ್ರೆಗಳು ಇಲ್ಲಿ ಲಭ್ಯ. ಅದ್ರಲ್ಲೂ ಹೆಣ್ಣು ಮಕ್ಕಳಿಗೆ ಮಡಿಕೆಯ ಸುವಾಸನೆ ಬಲು ಇಷ್ಟ. ಹಾಗಾಗಿ ಶನಿವಾರ, ಭಾನುವಾರ ಈ ಪಾಟರಿ ಟೌನ್‌ಗೆ ಸಾಕಷ್ಟು ಜನರು ಬಂದು ಮಡಿಕೆಗಳನ್ನ ಕೊಂಡೊಯ್ಯುತ್ತಾರೆ ಅಂತ ಇಲ್ಲಿನ ಮಾಲೀಕರು ಕರ್ನಾಟಕ ಟಿವಿ ಜೊತೆ ಮಾತನಾಡಿದ್ದಾರೆ.

ನಳಿನಾಕ್ಷಿ ಕಾರಹಳ್ಳಿ, ಕರ್ನಾಟಕ ಟಿವಿ

- Advertisement -

Latest Posts

Don't Miss