- Advertisement -
ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಹಾಗೂ ಸಂತೋಷ್ ಆನಂದ್ ರಾಮ್ ಕಾಂಬಿನೇಷನ್ ನ ಮೋಸ್ಟ್ ಅಪ್ ಕಮ್ಮಿಂಗ್ ಸಿನಿಮಾ ಯುವರತ್ನ ತೆರೆಗೆ ಬರೋದಿಕ್ಕೆ ರೆಡಿಯಾಗಿದೆ. ಈ ನಡುವೆ ಅಪ್ಪು ಕಾಶ್ಮೀರಕ್ಕೆ ಹೊರಟಿದ್ದಾರೆ. ಅಷ್ಕಕ್ಕೂ ಪುನೀತ್ ಕಾಶ್ಮೀರಕ್ಕೆ ಪ್ರಯಾಣ ಬೆಳೆಸ್ತಿರುವುದು ಜೇಮ್ಸ್ ಸಿನಿಮಾ ಶೂಟಿಂಗ್ ಗಾಗಿ.

ಈಗಾಗ್ಲೇ ಉತ್ತರಕರ್ನಾಟಕದ ಹಲವು ಭಾಗಗಳಲ್ಲಿ ಶೂಟಿಂಗ್ ಮುಗಿಸಿರುವ ಜೇಮ್ಸ್ ಟೀಂ ಕಾಶ್ಮೀರದಲ್ಲಿ ಶೂಟಿಂಗ್ ಗಾಗಿ ಹೊರಟಿದ್ದಾರೆ. ನಾಳೆ ಶೂಟಿಂಗ್ ಆರಂಭವಾಗ್ತಿದ್ದು, ಸಾಂಗ್ಸ್ ಹಾಗೂ ಆ್ಯಕ್ಷನ್ ಸೀನ್ಸ್ ಶೂಟಿಂಗ್ ಕಾಶ್ಮೀರದಲ್ಲಿ ಮಾಡಲಾಗುತ್ತದೆಯಂತೆ.

ಅಂದಹಾಗೇ ಜೇಮ್ಸ್ ಸಿನಿಮಾಕ್ಕೆ ಚೇತನ್ ಕುಮಾರ್ ಆ್ಯಕ್ಷನ್ ಕಟ್ ಹೇಳಿದ್ದು, ಪುನೀತ್ ಗೆ ಜೋಡಿಯಾಗಿ ಪ್ರಿಯಾ ಆನಂದ್ ನಟಿಸಿದ್ದಾರೆ.
- Advertisement -