ಬೇಕಾದಷ್ಟು ಸೌಲಭ್ಯಗಳು ಇಂದು ನಮಗೆ ಸುಲಭವಾಗಿ ಸಿಗುತ್ತಿದ್ದರು ಕೂಡ ಮನಸ್ಸಿಗೆ ನೆಮ್ಮದಿ ಇಲ್ಲ. ಈಗಿನ ಕಾಲದಲ್ಲಿ ಜನರು ಬಹಳ ಫಾಸ್ಟ್ ಇದ್ದಾರೆ. ಪ್ರೀತಿ, ಪ್ರೇಮ, ಅಂತ ಮದುವೆಯಾಗುತ್ತಾರೆ, ಅಷ್ಟೇ ಬೇಗನೆ ಡಿವೋರ್ಸ್ ಕೂಡ ಆಗುತ್ತಾರೆ. ನಮ್ಮವರ ಜೊತೆ ನಾವು ಸಂಬಂಧದ ಮೌಲ್ಯವನ್ನು ಮರೆತು ಬದುಕುತ್ತಿದ್ದೇವೆ ಮತ್ತು ಬಾಂಧವ್ಯವನ್ನು ಉಳಿಸಿಕೊಳ್ಳಲು ಆಗುತ್ತಿಲ್ಲ. ಇದೀಗ ಪವರ್ ಸ್ಟಾರ್ ಪತ್ನಿಯೂ ಎರಡನೇ ಮದುವೆಗೆ ಗ್ರೀನ್ ಸಿಗ್ನಿಲ್ ಕೊಟ್ಟಿದ್ದಾರೆ.
ಪವರ್ ಸ್ಟಾರ್ ಪವನ್ ಕಲ್ಯಾಣ್ ಅವರಿಂದ ರೇಣು ದೇಸಾಯಿ ಅವರು ಬೇರ್ಪಟ್ಟು ಸುಮಾರು 13 ವರ್ಷಗಳಾಗಿವೆ. ಬರೋಬ್ಬರಿ 13 ವರ್ಷಗಳ ಕಾಲ ಇನ್ನೂ ಒಂಟಿಯಾಗಿ ಜೀವನ ನಡೆಸುತ್ತಿದ್ದಾರೆ. ಅವರಿಗೆ ಇಬ್ಬರು ಮಕ್ಕಳಿದ್ದು ಮಗ ಅಕಿರಾ ನಂದನ್ ಮತ್ತು ಮಗಳು ಆಧ್ಯಾಳನ್ನು ನೋಡಿಕೊಳ್ಳುತ್ತಾ ಒಂಟಿ ಜೀವನ ನಡೆಸುತ್ತಿದ್ದಾರೆ. ಪವನ್ ಕಲ್ಯಾಣ ಅವರಿಗೆ ಡಿವೋರ್ಸ್ ಪಡೆದು ಬರೋಬ್ಬರಿ 13 ವರ್ಷಗಳ ಬಳಿಕ ಇದೀಗ ಎರಡನೇ ಮದುವೆ ಬಗ್ಗೆ ಪ್ರತಿಕ್ರಿಯಿಸಿದ್ದಾರೆ. ಈ ಕುರಿತು ಸಂದರ್ಶನವೊಂದರಲ್ಲಿ ಅವರು ಮಾತನಾಡಿ, ಎರಡನೇ ಮದುವೆಯಾಗಲು ಸಿದ್ಧಳಾಗಿದ್ದೇನೆ ಆದರೆ ಇನ್ನೂ ಕೆಲವು ದಿನ ಬೇಕು ಎಂದು ಹೇಳಿದ್ದಾರೆ.
ಮುಂದಿನ ಎರಡು ಮೂರು ವರ್ಷಗಳಲ್ಲಿ ಖಂಡಿತವಾಗಿಯೂ ಮದುವೆಯಾಗುವುದಾಗಿ ಸ್ಪಷ್ಟಪಡಿಸಿದ್ದಾರೆ. ಇನ್ನೂ ಇದೇ ವೇಳೆ ಇಷ್ಟು ವರ್ಷವಾದರೂ ಎರಡನೇ ಮದುವೆಯಾದೇ ಇರುವುದಕ್ಕೆ ಕಾರಣವನ್ನೂ ಸಹ ಬಹಿರಂಗಪಡಿಸಿದ್ದಾರೆ. ನಾನು ಮಕ್ಕಳ ಹಿತದೃಷ್ಟಿಯಿಂದ ಮದುವೆಯಾಗಲಿಲ್ಲ. ಒಂದು ಸಮಯದಲ್ಲಿ ಮದುವೆಯಾಗಲು ರೆಡಿಯಾಗಿ ನಿಶ್ಚಿತಾರ್ಥವೂ ಆಗಿತ್ತು. ಆದರೆ ಅದು ಕಾರಣಾಂತರಗಳಿಂದ ರದ್ದಾಯಿತು ಮತ್ತು ಮಕ್ಕಳ ಆರೈಕೆ ಮಾಡುವುದು ಅಗತ್ಯವಿತ್ತು. ಒಂದೊಳ್ಳೆ ಒಡನಾಟದ ಅಗತ್ಯವಿತ್ತು. ಈಗಾಗಲೇ ತಂದೆಯಿಂದ ದೂರವಾಗಿದ್ದಾರೆ, ನಾನು ಮದುವೆಯಾದರೇ ನನ್ನ ಮಕ್ಕಳು ಒಂಟಿಯಾಗುತ್ತಾರೆ ಎಂದು ಮದುವೆಯಾಗಿಲ್ಲ ಎಂದಿದ್ದಾರೆ ರೇಣು ದೇಸಾಯಿ.