Friday, December 5, 2025

Latest Posts

BREAKING: ಬೆಲೆ ಏರಿಕೆಯಿಂದ ತತ್ತರಿಸಿರೋ ಜನತೆಗೆ ಮತ್ತೊಂದು ಶಾಕ್: ‘ವಿದ್ಯುತ್ ದರ’ ಪ್ರತಿ ಯೂನಿಟ್ ಗೆ 35 ಪೈಸೆ ಹೆಚ್ಚಳ

- Advertisement -

ಬೆಂಗಳೂರು: ಕೊರೋನಾ ತಂದಿಟ್ಟಂತ ಆರ್ಥಿಕ ಸಂಕಷ್ಟದಿಂದ ಜನತೆ ತತ್ತರಿಸಿಹೋಗಿದ್ದಾರೆ. ಇದೇ ಸಂದರ್ಭದಲ್ಲಿ ಬೇಸಿಗೆಯ ಹೊತ್ತಿನಲ್ಲಿಯೇ ರಾಜ್ಯದ ಜನತೆಗೆ ಕರ್ನಾಟಕ ವಿದ್ಯುಚ್ಛಕ್ತಿ ನಿಯಂತ್ರಣ ಆಯೋಗವು ಪ್ರತಿ ಯೂನಿಟ್ ಗೆ 35 ಪೈಸೆ ದರ ಹೆಚ್ಚಳ ಮಾಡಿ ಬಿಗ್ ಶಾಕ್ ನೀಡಿದೆ.

ಇಂದು ಸುದ್ದಿಗೋಷ್ಠಿ ನಡೆಸಿ ಮಾಹಿತಿ ನೀಡಿದಂತ ಕ ಇ ಆರ್ ಸಿಯು, ವಿದ್ಯುತ್ ಸರಬರಾಜು ಕಂಪನಿಗಳ ಪ್ರಸ್ತಾವನೆಗಳನ್ನು ಪರಿಗಣಿಸಿ, ಆಯೋಗವು ಆರ್ಥಿಕ ವರ್ಷ 2023ಕ್ಕೆ ವಿದ್ಯುತ್ ಸರಬರಾಜು ಕಂಪನಿಗಳ 2159 ಕೋಟಿ ರೂಪಾಯಿಗಳ ಕೊರತೆಯನ್ನು ನೀಗಿಸುವ ನಿಟ್ಟಿನಲ್ಲಿ ವಿದ್ಯುತ್ ದರ ಹೆಚ್ಚಳದ ಕ್ರಮ ಕೈಗೊಂಡಿದೆ.

ಪ್ರತಿ ಯೂನಿಟ್ ಗೆ ರೂ.5 ಪೈಸೆಗಳಷ್ಟು ಇಂಧನ ಶುಲ್ಕ ಹಾಗೂ ಪ್ರತಿ ಹೆಚ್ ಪಿ, ಕಿ.ವ್ಯಾ, ಕೆವಿಎಗೆ ರೂ.10ರಿಂದ 30 ರೂವರೆಗೆ ನಿಗದಿತ ಶುಲ್ಕಗಳ ಹೆಚ್ಚಳವನ್ನು ಅನುಮೋದಿಸಿದೆ.

ಆರ್ಥಿಕ ವರ್ಷ 2023ಕ್ಕೆ ಒಟ್ಟಾರೆ ಸರಾಸರಿಯಾಗಿ ಪ್ರತಿ ಯೂನಿಟ್ ಗೆ 35 ಪೈಸೆಯನ್ನು ಹೆಚ್ಚಳ ಮಾಡಿರೋದಾಗಿ ತಿಳಿಸಿದೆ.

ಇನ್ನೂ ವಿದ್ಯುತ್ ಸರಬರಾಜು ಕಂಪನಿಗಳು ರೂ.11320 ಕೋಟಿಗಳ ಕಂದಾಯ ಕೊರತೆಗೆ ಪ್ರತಿ ಯೂನಿಟ್ ಗೆ ಸರಾಸರಿ 185 ಪೈಸೆ ಅಂದ್ರೇ ಶೇ.23.83ರಷ್ಟು ಹೆಚ್ಚಳ ಕೋರಿರುತ್ತವೆ. ಆದ್ರೇ 35 ಪೈಸೆ ಹೆಚ್ಚಳ ಮಾಡಿ ಅಂದ್ರೇ ಶೇ. 4.33ರಷ್ಟು ದರ ಹೆಚ್ಚಳ ಮಾಡಲಾಗಿದೆ ಎಂದು ತಿಳಿಸಿದೆ.

- Advertisement -

Latest Posts

Don't Miss