ಸಿನಿಮಾ ಸುದ್ದಿ: ಪ್ರಭಾಸ್ ಅವರು ಬಾಹುಬಲಿ ನಂತರ ಸಾಲು ಸಾಲು ಸಿನಿಮಾ ಸೋತರೂ ಅವರ ಪ್ಯಾನ್ಸ್ ಬೇಸ್ ಕ್ರೇಜ್ ಕಡಿಮೆಯಾಗಿಲ್ಲ ಅನ್ನುವುದಕ್ಕೆ ಮುಂಬರುವ ಅವರ ಚಿತ್ರಗಳೇ ಸಾಕ್ಷಿ. ಕಲ್ಕಿ 2898 ಸಿನಿಮಾ ಜೊತೆಗೆ ಮತ್ತೊಂದು ಪ್ಯಾನ್ ಇಂಡಿಯಾ ಸಿನಿಮಾ ಮಾಡಲು ಪ್ರಾಜೆಕ್ಟ್ ಕೆ ಸಿನಿಮಾ ದಲ್ಲಿ ನಟಿಸುತ್ತಿದ್ದಾರೆ. ಆದರೆ ರಾಜ್ ಡಿಲಕ್ಸ್ಸಿನಿಮಾದಲ್ಲಿ ನಟ ಪ್ರಭಾಸ್ ಅವರ ಜೊತೆ ನಟಿ ಅನುಷ್ಕಾ ರನ್ನು ನೋಡಲು ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದಾರೆ.
ಪ್ರಭಾಸ್ ಪ್ರಸ್ತುತ ಪ್ಯಾನ್ ಇಂಡಿಯಾ ಚಿತ್ರಗಳಲ್ಲಿ ಸತತವಾಗಿ ಬ್ಯುಸಿಯಾಗಿದ್ದಾರೆ. ಅದರ ಭಾಗವಾಗಿ ಪ್ರಭಾಸ್ ಮತ್ತೊಂದು ದೊಡ್ಡ ಸಿನಿಮಾ ಕಲ್ಕಿ 2898 ಮಾಡುತ್ತಿದ್ದಾರೆ. ಸದ್ಯ ಈ ಸಿನಿಮಾದ ಶೂಟಿಂಗ್ ನಡೆಯುತ್ತಿದೆ. ಅಂದಹಾಗೆ ಚಿತ್ರದ ಶೇ.80ಕ್ಕೂ ಹೆಚ್ಚು ಚಿತ್ರೀಕರಣ ಈಗಾಗಲೇ ಮುಗಿದಿದೆ. ನಾಗ್ ಅಶ್ವಿನ್ ನಿರ್ದೇಶನದಲ್ಲಿ ಪ್ಯಾನ್ ವರ್ಲ್ಡ್ ಚಿತ್ರವಾಗಿ ಬರುತ್ತಿರುವ ಈ ಚಿತ್ರದ ಬಗ್ಗೆ ಪ್ರೇಕ್ಷಕರು ಭಾರೀ ನಿರೀಕ್ಷೆ ಇಟ್ಟುಕೊಂಡಿದ್ದಾರೆ. ಈ ಚಿತ್ರದಲ್ಲಿ ಪ್ರಭಾಸ್ ಗೆ ನಾಯಕಿಯಾಗಿ ದೀಪಿಕಾ ಪಡುಕೋಣೆ ನಟಿಸಿದ್ದಾರೆ. ಬಾಲಿವುಡ್ ಬಿಗ್ ಬಿ ಅಮಿತಾಬ್ ಬಚ್ಚನ್ ಪ್ರಮುಖ ಪಾತ್ರದಲ್ಲಿ ನಟಿಸುತ್ತಿದ್ದಾರೆ.
ಈ ಹಿಂದೆ ಮಾಡಿರುವ ಸಿನಿಮಾಗಳು ಸೋತಿವೆ ಆದರೆ ಮುಂಬರುವ ಹೈ ಬಜೆಟ್ ಸಿನಿಮಾಗಳೂ ಹೇಗಿರಲಿವೆ ಈ ಸಿನಿಮಾಗಳು ನಟ ಪ್ರಭಾಸ್ ಅವರ ಕೈ ಹಿಡಿಯಲಿವೆಯಾ ಎಂಬುದನ್ನು ಕಾದು ನೋಡಬೇಕಿದೆ.
S.Muniswamy: ಕಾಂಗ್ರೇಸ್ ಪಕ್ಷ ದೇಶ ವಿರೋದಿ ಚಟುವಟಿಕೆ ಮಾಡುವರು ಪರ ನಿಂತಿದೆ




