Thursday, June 19, 2025

Latest Posts

ಪ್ರಭಾಸ್ `ಸಲಾರ್’-ಮೈಸೂರ್ ಮಧ್ಯೆ ಪ್ರಶಾಂತ್ ಇಟ್ಟಿರುವುದ್ದೆಂತಾ ಲಿಂಕ್…!?

- Advertisement -

www.karnatakatv.netಸಲಾರ್‌ಗೂ-ಮೈಸೂರ್‌ಗೂ ನಂಟಿದೆ ಅನ್ನೋ ಸುದ್ದಿ ಕೇಳೋದಕ್ಕೇನೆ ಒಂದು ರೀತಿಯ ಖುಷಿ. ಕೆಜಿಎಫ್ ಸಾರಥಿ ಪ್ರಶಾಂತ್ ನೀಲ್ ಅವರು ಗಡಿದಾಟಿದರೂ ಕೂಡ ನಮ್ಮ ನಾಡು-ನುಡಿ ಸಂಸ್ಕೃತಿಗೆ ನಂಟು ಬೆಸೆದು ಪರಭಾಷೆಯಲ್ಲಿ ಸಿನಿಮಾ ಡೈರೆಕ್ಟ್ ಮಾಡ್ತಿದ್ದಾರೆ ಎನ್ನುವ ಸುದ್ದಿ ಕೇಳಿದ್ರೇನೆ ಹೆಮ್ಮೆಯಾಗುತ್ತಿದೆ. ಅಂದ್ಹಾಗೇ, ಸಲಾರ್ ನಿರ್ದೇಶಕ ಪ್ರಶಾಂತ್ ನೀಲ್ ಹಾಗೂ ಡಾರ್ಲಿಂಗ್ ಪ್ರಭಾಸ್ ಜುಗಲ್‌ಬಂಧಿಯಲ್ಲಿ ತಯ್ಯಾರಾಗ್ತಿರುವ ಮೋಸ್ಟ್ ಎಕ್ಸ್ ಪೆಕ್ಟೆಡ್ ಸಿನಿಮಾ. ಕನ್ನಡ ಹಾಗೂ ತೆಲುಗು ಭಾಷೆಯಲ್ಲಿ ಏಕಕಾಲಕ್ಕೆ ನಿರ್ಮಾಣಗೊಳ್ತಿರುವ ಈ ಚಿತ್ರದ ಮೇಲೆ ಬೆಟ್ಟದಷ್ಟು ನಿರೀಕ್ಷೆಗಳಿವೆ. ಅದಕ್ಕೆ ಕಾರಣ ಪ್ಯಾನ್ ಇಂಡಿಯಾ ಸ್ಟಾರ್ ಜೊತೆಗೆ ಪ್ಯಾನ್ ಇಂಡಿಯಾ ಮೂವೀ ಡೈರೆಕ್ಟರ್ ಫಸ್ಟ್ ಟೈಮ್ ಜೊತೆಯಾಗಿರುವುದು. ಪವರ್‌ಪ್ಯಾಕ್ಡ್ ಆಕ್ಷನ್-ಥ್ರಿಲ್ಲರ್ ಚಿತ್ರಕ್ಕೆ ಹೊಂಬಾಳೆಯಂತಹ ಅದ್ದೂರಿ ನಿರ್ಮಾಣ ಸಂಸ್ಥೆ ಬಂಡವಾಳ ಹೂಡುತ್ತಿರುವುದು, ಭುವನ್ ಕ್ಯಾಮೆರಾ ಕೈಚಳ, ರವಿ ಬಸ್ರೂರ್ ಸಂಗೀತ ಇದೆಲ್ಲವೂ ಕೂಡ `ಸಲಾರ್’ ಮೇಲಿನ ನಿರೀಕ್ಷೆಯನ್ನು ದುಪ್ಪಟ್ಟು ಮಾಡಿವೆ.

ಅಂದ್ಹಾಗೇ, ಸೆಟ್ಟೇರಿದಾಗಿನಿಂದಲೂ ಒಂದಲ್ಲ ಒಂದು ಕಾರಣಕ್ಕೆ ಬಜಾರ್‌ನಲ್ಲಿ ಸೌಂಡ್ ಮಾಡುತ್ತಲೇ ಇದೆ. ಸದ್ಯ ಕೊರೊನಾ ಲಾಕ್‌ಡೌನ್ ಮುಗಿಸಿಕೊಂಡು ಮತ್ತೆ ಚಿತ್ರೀಕರಣಕ್ಕೆ ಹಾಜರಾಗಿರುವ ಸಲಾರ್' ಸಿನಿಮಾ ಅಖಾಡದಿಂದ ನಯಾ ಸಮಾಚಾರವೊಂದು ತೂರಿಬಂದಿದೆ. ಚಿತ್ರೀಕರಣ ಭರದಿಂದ ಸಾಗುತ್ತಿದ್ದು, ಶೂಟಿಂಗ್ ಸೆಟ್‌ನ ಫೋಟೋಗಳು ಕದ್ದುಮುಚ್ಚಿ ಲೀಕ್ ಆಗಿವೆ. ಅದರಲ್ಲಿ ಡಾರ್ಲಿಂಗ್ ರೈಡ್ ಮಾಡುವ ಬೈಕ್ಸಲಾರ್’ ಚಿತ್ರಕ್ಕೂ ಮೈಸೂರಿಗೂ ಇರುವ ನಂಟಿನ ಹಿಂಟ್ ಬಿಟ್ಟುಕೊಡ್ತಿದೆ

ಕೆಜಿಎಫ್ ಚಿತ್ರದಲ್ಲಿ ರಾಕಿಗೋಸ್ಕರ ಸ್ಪೆಷಲ್ ಬೈಕ್‌ನ ರೆಡಿಮಾಡಿಸಲಾಗಿತ್ತು. ಆದ್ರೀಗ ಪ್ರಭಾಸ್‌ಗೋಸ್ಕರ ವಿಂಟೇಜ್ ಬೈಕ್‌ನ ತರಿಸಿದ್ದಾರೆ. ಆ ಬೈಕ್ ಏರಿ ಪ್ರಭಾಸ್ ಸವಾರಿ ಹೊರಟಿದ್ದಾರೆ. ಸದ್ಯಕ್ಕೆ ಆ ಫೋಟೋ ವೈರಲ್ ಆಗಿದ್ದು, ಎಂಇಸಿ-6987 ನಂಬರ್ ಪ್ಲೇಟ್ ಇರುವ ವಿಂಟೇಜ್ ಬೈಕ್ ಎಲ್ಲರ ಗಮನ ಸೆಳೆಯುತ್ತಿದೆ. ಈ ಸಿನಿಮಾದ ಕಥೆ ಮೈಸೂರಿನಲ್ಲಿ ನಡೆಯಲಿದ್ದು, 1970 ರ ಕಾಲಘಟ್ಟದಲ್ಲಿ ಕಥೆ ಸಾಗಲಿದೆಯಂತೆ. ಇಂತಹದ್ದೊಂದು ಸುದ್ದಿ ಟಿಟೌನ್ ಅಂಗಳದಲ್ಲಿ ಸುನಾಮಿ ಎಬ್ಬಿಸಿದೆ. ಆ ಸುದ್ದಿ ಗಾಂಧಿನಗರ ಮುಟ್ಟಿದ್ದು, ಪ್ರಶಾಂತ್ ನೀಲ್ ಫ್ಯಾನ್ಸ್ ಜೈಕಾರ ಹಾಕ್ತಿದ್ದಾರೆ. ನಮ್ಮ ಬಾಸ್ ಗಡಿದಾಟಿದ್ರೂ ಕನ್ನಡತನ ಬಿಟ್ಟುಕೊಡಲ್ಲ ಅಂತಿದ್ದಾರೆ. ಅಂದ್ಹಾಗೇ, ಕೆಜಿಎಫ್ ಸಿನಿಮಾವನ್ನು ರೆಟ್ರೋ ಸ್ಟೈಲ್‌ನಲ್ಲಿ ನೀಲ್ ಅದ್ಬುತವಾಗಿ ಕಟ್ಟಿಕೊಟ್ಟಿದ್ದರು, ಇದೀಗ ಸಲಾರ್ ಚಿತ್ರದ ಶೂಟಿಂಗ್ ಸೆಟ್, ಬ್ಯಾಕ್‌ಡ್ರಾಪ್, ಡಾರ್ಲಿಂಗ್ ಲುಕ್, ವಿಂಟೇಜ್ ಬೈಕ್ ನೋಡ್ತಿದ್ರೆ ಸಲಾರ್ ರೆಟ್ರೋ ಸ್ಟೈಲ್‌ನಲ್ಲಿ ಅದ್ದೂರಿಯಾಗಿ ನಿರ್ಮಾಣಗೊಳ್ಳೋದು ಪಕ್ಕಾ.ಕೆಜಿಎಫ್ ಚಿತ್ರದ ತಂತ್ರಜ್ಞರು ಸಲಾರ್‌ಗಾಗಿ ಬೆವರು ಹರಿಸುತ್ತಿದ್ದಾರೆ, ಈ ಚಿತ್ರದ ಮೂಲಕ ಪ್ರಭಾಸ್ ಕನ್ನಡಕ್ಕೆ ಡೆಬ್ಯೂ ಮಾಡ್ತಿದ್ದಾರೆ. ಡಾರ್ಲಿಂಗ್‌ಗೆ ಶ್ರುತಿಹಾಸನ್ ಜೋಡಿಯಾಗಿದ್ದಾರೆ. ಅದ್ದೂರಿ ತಾರಾಬಳಗ ಸಲಾರ್ ಪ್ಯಾನ್ ಇಂಡಿಯಾ ಲೆವೆಲ್‌ನಲ್ಲಿ ತಯ್ಯಾರಾಗ್ತಿದೆ.

ಎಂಟರ್‌ಟೈನ್ಮೆಂಟ್ ಬ್ಯೂರೋ ಕರ್ನಾಟಕ ನ್ಯೂಸ್

- Advertisement -

Latest Posts

Don't Miss