Chikkaballapur News : ಚಿಕ್ಕಬಳ್ಳಾಪುರ ಕ್ಷೇತ್ರದ ಶಾಸಕ ಪ್ರದೀಪ್ ಈಶ್ವರ್ ಕ್ಷೇತ್ರ ಸಂಚಾರ ಮಾಡುತ್ತಿರುವ ವೇಳೆ, ಚಿಕ್ಕಬಳ್ಳಾಪುರ ಕ್ಷೇತ್ರದ ಮಹಿಳೆಯರಿಗೆ ಸೀರೆಗಳ ಉಡುಗೊರೆ ನೀಡಿದ್ದಾರೆ. ವರಮಹಾಲಕ್ಷ್ಮಿ ಹಬ್ಬದ ಹೆಸರಲ್ಲಿ ಮಹಿಳೆಯರಿಗೆ ಬಾಗಿನ ಕೊಟ್ಟಿದ್ದಾರೆ.
ಮನೆ-ಮನೆಗೆ ತೆರಳಿ ಮಹಿಳೆಯರಿಗೆ ಸೀರೆ, ಬಳೆ, ಹರಿಶಿನ, ಕುಂಕಮ ಬಾಗಿನ ಕೊಟ್ಟಿದ್ದಾರೆ. ಹಳ್ಳಿ-ಹಳ್ಳಿಗೂ ತೆರಳಿ ಸೀರೆ ವಿತರಣೆ ಮಾಡಲಿದ್ದಾರೆ. ಜೊತೆಗೆ 20 ಸಾವಿರ ಶಾಲಾ ಮಕ್ಕಳಿಗೆ ಬಟ್ಟೆ ನೀಡುವ ಕಾರ್ಯಕ್ರಮಕ್ಕೂ ಚಾಲನೆ ಕೊಟ್ಟಿದ್ದಾರೆ.
ಈ ವೇಳೆ ಮಾತನಾಡುತ್ತಾ ಪ್ರದೀಪ್ ಈಶ್ವರ್, ನಾನೂ ಕೊಟ್ಟ ಮಾತಿನಂತೆ ನಡೆದುಕೊಳ್ಳುತ್ತೇನೆ. ಆದ್ದರಿಂದ 60 ಸಾವಿರ ಮನೆಗಳಿಗೆ ಸೀರೆ, 20 ಸಾವಿರ ಶಾಲೆ ಮಕ್ಕಳಿಗೆ ಬಟ್ಟೆ ಕೊಡುತ್ತಿದ್ದೇನೆ. ಐದು ವರ್ಷವೂ ಇದು ಮುಂದುವರಿಯುತ್ತೆ ಎಂಬ ಭರವಸೆ ನೀಡಿದ್ದಾರೆ.
Dog : ಸತ್ತ ನಾಯಿಯನ್ನು ತೆರವುಗೊಳಿಸದೆ ತಂಗುದಾಣದಲ್ಲಿ ಮಣ್ಣು ಸುರಿದ ಸ್ಥಳೀಯ ಪಂಚಾಯತ್…!
Naleen Kumar Kateel : ಉಡುಪಿ ಕಾಲೇಜು ವಿಚಾರ : ಮಂಗಳೂರಿನಲ್ಲಿ ಬಿಜೆಪಿ ಬೃಹತ್ ಪ್ರತಿಭಟನೆ

