Political News : ಡಾ.ಕೆ.ಸುಧಾಕರ್ ಮತ್ತು ಶಾಸಕ ಪ್ರದೀಪ್ ಈಶ್ವರ್ ನಡುವಿನ ಸಮರ ಜೋರಾಗಿದ್ದು, ಕಾಂಗ್ರೆಸ್ ಶಾಸಕ ಪ್ರದೀಪ್ ಈಶ್ವರ್, ಸುಧಾಕರ್ ವಿರುದ್ಧ ಕಿಡಿ ಕಾರಿದ್ದಾರೆ.
ಚಿಕ್ಕಬಳ್ಳಾಪುರದಲ್ಲಿ ಮಾತನಾಡಿದ ಪ್ರದೀಪ್ ಈಶ್ವರ್, ಚಿಕ್ಕಬಳ್ಳಾಪುರದಲ್ಲಿ ಮಾಜಿ ಸಚಿವ ಡಾ.ಕೆ.ಸುಧಾಕರ್ ಬೆಂಬಲಿಗರು ಬಾಲ ಬಿಚ್ಚಿದ್ರೆ ಕಟ್ ಮಾಡುತ್ತೇನೆ. ಬೇಕಾದ್ರೆ ಟ್ರೈ ಮಾಡುವುದಕ್ಕೆ ಹೇಳಿ ನೋಡೋಣ ಎಂದು ಸವಾಲು ಹಾಕಿದರು.
ನಾನು ದ್ವೇಷ ರಾಜಕಾರಣ, ಗೂಂಡಾಗಿರಿ ರಾಜಕಾರಣ ಮಾಡಲ್ಲ, ಆದ್ರೆ ಗೂಂಡಾಗಿರಿ ರಾಜಕಾರಣ ಮಾಡುವರನ್ನು ಬಿಡಲ್ಲ. ಕ್ಷೇತ್ರದಲ್ಲಿ ನನಗೆ ಸಿಕ್ಕ ಜನ ಬೆಂಬಲ ನೋಡಿ ಸಹಿಸಿಕೊಳ್ಳಲು ಆಗುತ್ತಿಲ್ಲ. ಡಾ.ಕೆ.ಸುಧಾಕರ್ ಸುಳ್ಳು ದೂರು ಕೊಡಿಸಿ ಗಲಭೆ ಸೃಷ್ಟಿಸುತ್ತಿದ್ದಾರೆ.
ಐದು ವರ್ಷದಲ್ಲಿ ಚಿಕ್ಕಬಳ್ಳಾಪುರವನ್ನು ಮಾದರಿ ಕ್ಷೇತ್ರ ಮಾಡುತ್ತೇನೆ. ಸುಧಾಕರ್ ರೀತಿಯಲ್ಲಿ ನಾನು ತಪ್ಪು ಮಾಡಲ್ಲ. ಪರ, ವಿರೋಧ ದೂರು ನೀಡಿದ್ದಾರೆ, ತನಿಖೆ ಆಗಿ ಸತ್ಯ ತಿಳಿಯಲಿ ಎಂದು ಸುಧಾಕರ್ ವಿರುದ್ಧ ಮತ್ತೆ ಶಾಸಕ ವಾಗ್ದಾಳಿಯ ಸುರಿಮಳೆಯನ್ನೆ ಸುರಿಸಿದ್ದಾರೆ.
S.Muniswamy: ಕಾಂಗ್ರೆಸ್ ಪಕ್ಷ ದೇಶ ವಿರೋಧಿ ಚಟುವಟಿಕೆ ಮಾಡುವವರ ಪರ ನಿಂತಿದೆ
Protection: ಮಾಜಿ ಸಚಿವ ಜಯಚಂದ್ರಗೆ ಸೂಕ್ತ ಭದ್ರತೆ- ಕಾನೂನು ಸಚಿವ ಎಚ್ ಕೆ ಪಾಟೀಲ್