Political News: Hubli News: ವಾಲ್ಮಿಕಿ ಹಗರಣದಲ್ಲಿ ಸಿದ್ದರಾಮಯ್ಯ ಮತ್ತು ಡಿಕೆಶಿ ಅವರು ಭಾಗಿ ಆಗಿದ್ದಾರೆ. ಪ್ರಕರಣವನ್ನ ಮುಚ್ಚಿ ಹಾಕುವ ಪ್ರಯತ್ನ ನಡಿತಾ ಇದೆ ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಹೇಳಿದ್ದಾರೆ.
ಎಸ್ ಐ ಟಿ ಅವರು ಒಂದು ನೋಟಿಸ್ ಕೊಟ್ಟಿಲ್ಲ, ವಿಚಾರಣೆಗೆ ಕರೆದಿರಲಿಲ್ಲ. ಸದ್ಯ ಶಾಸಕ ದದ್ದಲ್ ನನ್ನನ್ನು ಬಂಧಿಸಿ ಅಂತ ಕೂತಿದ್ದಾರೆ. ಸಿಎಂ ಸಿದ್ದರಾಮಯ್ಯ ಅವರ ಆಶ್ರಯದಲ್ಲಿ ಅರೆಸ್ಟ್ ಆಗಿದ್ದಾರೆ. ಟ್ರಜರಿಯಿಂದ ಹಣ ಹೋಗಿದೆ. ಸಿಎಂ ಅವರು ಅವರ ಶಿಷ್ಯರ ಬಗ್ಗೆ ಹತಾಶ ಭಾವನೆಯಿಂದ ಮಾತನಾಡುತ್ತಿದ್ದಾರೆ. ಸಿದ್ದರಾಮಯ್ಯ ಅವರು ತಲೆಯಲ್ಲಿ ಬುದ್ದಿ ಕಾಲಿಯಾಗಿದೆ. ಇಗ ದುಡ್ಡು ನುಂಗಿ ನೀರು ಕುಡದಿದ್ದೀರಿ. ಸಿಎಂ ಅವರಿಗೆ ಎಲ್ಲವೂ ಗೊತ್ತು ಅವರು ಭಾಗಿಯಾಗಿದ್ದಾರೆ.
ಹಿಂದೆನೂ ತೆಲಂಗಾಣಕ್ಕೆ ಹಣ ಸಂಗ್ರಹ ಮಾಡಿ ಕಳಸಿದ್ರು. ಇವತ್ತು ನೇರವಾಗಿ ಸಿಕ್ಕಿದ್ದಾರೆ. ಮುಡಾ ಹಗರಣದಲ್ಲಿ ಸಿಎಂ ಸಿಕ್ಕಿದ್ದಾರೆ. 2003 ರಲ್ಲಿ ಸಿಎಂ ಅವರ ಶ್ರಿಮತಿ ಅವರ ತಮ್ಮನ ಹೆಸರಲ್ಲಿ ಅಕ್ರಮ ಆಗಿದೆ. 2010 ರವರಗೆ ಮುಡಾ ಹೆಸರಲ್ಲಿತ್ತು. ಸಿಎಂ ಪತ್ನಿ ಪಾರ್ವತಿ ಅವರ ಹೆಸರಿಗೆ ಅವರ ತಮ್ಮ ದಾನಾ ಕೊಟ್ಟಿದ್ದಾನೆ. ಮುಡಾ ಅವರಿಗೆ ಡೆವೆಲೆಪ್ ಮಾಡಿ ಕೊಟ್ಟಿದ್ದಾನೆ. 2013ರ ಚುಣಾವಣೆಯಲ್ಲಿ ಸಿಎಂ ಅಫಿಡವಿಟ್ ಹಾಕಿಲ್ಲ. 2018 ಕ್ಕೆ 25 ಲಕ್ಷ ತೋರಿಸಿಕ್ಕೊಂಡಿದ್ದಾರೆ. 2023ರ ಚುಣಾವಣೆಯಲ್ಲಿ 8 ಕೋಟಿ 62 ಲಕ್ಷ ತೋರಿಸಿದ್ದಾರೆ. ಸಿಎಂ ಅವರು ಸೇರಿದಂತೆ ಎಲ್ಲರೂ ದೊಡ್ಡ ಕಳ್ಳರು ಎಂದು ಜೋಶಿ ವಾಗ್ದಾಳಿ ನಡೆಸಿದ್ದಾರೆ.
ನೀಟ್ ನಲ್ಲಿ ಅಕ್ರಮವಾಗಿತ್ತು ಅದಕ್ಕೆ ಮೋದಿ ಅವರು ರಾಜಿನಾಮೆ ಕೊಡಲಿ ಎಂದಿದ್ದ ಸಚಿವ ಲಾಡ್ ಗೆ ಜೋಶಿ ತಿರುಗೇಟು ಕೊಟ್ಟಿದ್ದು, ಲಾಡ್ ಮೋದಿ ಅವರ ಬಗ್ಗೆ ಮಾತನಾಡಿದ್ದು ನಾನಸೆನ್ಸ್ ಆರ್ಗಿಮೆಂಟ್ ಅದು. ತಪ್ಪು ಮಾಡಿದವರನ್ನ ಕೇಂದ್ರ ಸರಕಾರ ಶಿಕ್ಷೆ ಮಾಡುತ್ತೆ. ಆದರೆ ವಾಲ್ಮಿಕಿ ಹಗರಣದಲ್ಲಿ ಟ್ರಜರಿಯಿಂದ ಹಣ ಹೋಗಿದೆ. ಬಾಯಿಗೆ ಬಂದಂಗ ಮಾತನಾಡಬೇಡಿ. ಲಾಡ್ ಅವರು ಯುನೈಟೆಡ್ ಸೆಕೆರೆಟರ್ ಮತ್ತು ಜೋ ಬೈಡನ್ ರಾಜಿನಾಮೆ ಕೊಡಬೇಕು ಅಂತ ಹೇಳಿಲ್ಲ, ಎಂದು ಜೋಶಿ ತಮಾಷೆ ಮಾಡಿದ್ದಾರೆ.
ಇಲೆಕ್ಟ್ರೋ ಬಾಂಡ್ ನಲ್ಲಿ ಕಾಂಗ್ರೆಸ್ ಪಕ್ಷಕ್ಕೆ 1600 ಕೋಟಿ ಹಣ ಬಂದಿದೆ. ಆ ಹಣ ಎಲ್ಲಿಂದ ಬಂತು, ವೈಟ್ ಇತ್ತು ಆ ಹಣ ಆದರೆ ಯಾರು ಎಷ್ಟ ತುಗೊಂಡಾ ಎಲ್ಲ ಗೊತ್ತಿದೆ. ದುಡ್ಡಿಲ್ಲದೆ ನಿವೆನೂ ಚುಣಾವಣೆ ಮಾಡಿಲ್ಲವೆ..? ಕಾರ್ಮಿಕ ಇಲಾಖೆಯಲ್ಲಿ ಬ್ರಷ್ಟಾಚಾರ ನಡೆದಿದೆ. ಕಾರ್ಮಿಕ ಇಲಾಖೆಯಲ್ಲಿ ಬಹಳ ಬ್ರಷ್ಟಾಚಾರ ಆಗಿದೆ ಎಂದ ಕೇಂದ್ರ ಸಚಿವ ಜೋಶಿ ಹೇಳಿದ್ದಾರೆ.