Monday, December 23, 2024

Latest Posts

Prahlad Joshi : ಆರೋಪಿಯನ್ನು ರಕ್ಷಿಸಲು ಪ್ರಯತ್ನ ಪಡ್ತಾರೆ ಅಂದ್ರೆ ಇದು ಆಘಾತಕಾರಿ : ಜೋಶಿ

- Advertisement -

Hubli News: ಜೈನ ಮುನಿ ಹತ್ಯೆ ವಿಚಾರವಾಗಿ ಪ್ರಹ್ಲಾದ್ ಜೋಶಿ ಹೇಳಿಕೆಯನ್ನು ನೀಡಿದ್ದಾರೆ. ಹುಬ್ಬಳ್ಳಿಯಲ್ಲಿ ಮಾಧ್ಯಮದೊಂದಿಗೆ ಮಾತನಾಡಿದ್ದಾರೆ.

ಜೈನ ಮುನಿ ಹತ್ಯೆ ಅತ್ಯಂತ ಆಘಾತ ಮಾಡಿದೆ. ಮುನಿಗಳ ಹತ್ಯ ಊಹಿಸಿಕೊಳ್ಳಲು ಅಸಾಧ್ಯ. ಅಭಯ ಪಾಟೀಲ ಅವರು ಹೇಳಿದಂತೆ ಆರಂಭದಲ್ಲಿ ಅಲ್ಲಿ ಸಿಕ್ಕ ಆರೋಪಿಯನ್ನು ರಕ್ಷಣೆಗೆ ಸರ್ಕಾರ ಪ್ರಯತ್ನ ಮಾಡ್ತು ಅಂತ .ಇದು ಅದರಕ್ಕಿಂತ ದೊಡ್ಡ ಆಘಾತಕಾರಿ ಸಂಗತಿ. ಅದರ ಬಗ್ಗೆ ಕೂಲಂಕುಷ ತನಿಖೆ ಮಾಡಬೇಕು. ಅಪರಾಧಿಗಳ ರಕ್ಷಣೆಗೆ ಪ್ರಯತ್ನ ಮಾಡಬಾರದು. ಸರ್ವಸಂಗ ಪರಿತ್ಯಾಗ ಮಾಡಿದಂತ ಸ್ವಾಮಿಗಳ ಹತ್ಯೆ ಇದು. ಇದರ ಬಗ್ಗೆ ಸರ್ಕಾರ ಅತ್ಯಂತ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು. ಆರೋಪಿಯನ್ನು ರಕ್ಷಿಸಲು ಪ್ರಯತ್ನ ಪಡ್ತಾರೆ ಅಂದ್ರೆ ಇದು ಆಘಾತಕಾರಿ. ವರೂರು ಸ್ವಾಮಿಗಳ ಸತ್ಯಾಗ್ರಹ ಅನ್ಯಾಯದ ವಿರುದ್ಧ ಮಾಡ್ತೇನೆ ಅಂದಿದ್ದಾರೆ ನಾನು ಅವರೊಂದಿಗೆ ಮಾತಾಡ್ತೇನೆ. ಯಾವಾಗಲೂ ಈ ಪ್ರಗತಿಪರರು ಸಾಮಾನ್ಯವಾಗಿ ಒಂದು ಸಮುದಾಯದ ಪರವಾಗಿ ತುಷ್ಟಿಕರಣದ ಪರವಾಗಿ ಮಾತಾಡ್ತಾರೆ. ಆದ್ದರಿಂದ ಅವರಿಗೆ ಈಗ ಮಾತನಾಡಲು ಧೈರ್ಯವಿಲ್ಲ. ನಾನು ಸ್ಪಷ್ಟವಾಗಿ ಹೇಳುತ್ತೇನೆ ಯಾವುದೇ ವ್ಯಕ್ತಿ ಹಾಗೂ ಧಾರ್ಮಿಕ ಮುಖಂಡರ ಕೊಲೆಯನ್ನು ಸಹಿಸಲು ಸಾಧ್ಯವಿಲ್ಲ. ಅದರಲ್ಲೂ ಜೈನ ಮುನಿಗಳು ಸರ್ವಸಂಘ ಪರಿತ್ಯಾಗಿಗಳಾಗಿರುತ್ತಾರೆ. ಅವರನ್ನು ತುಂಡು ತುಂಡಾಗಿ ಮಾಡಿರುವಂಥದ್ದು ಅಲ್ಲಿಯೂ ಸಹ ತುಷ್ಟಿಕರಣದ ರಾಜಕಾರಣ ಕಂಡು ಬರುತ್ತಿದೆ. ಇದು ಬಹಳಷ್ಟು ಜನರಿಗೆ ಆಘಾತವನ್ನು ತಂದಿದೆ. ಅದೇ ಕಾರಣಕ್ಕೆ ಗುಣ ಮಹಾರಾಜರು ಹೋರಾಟಕ್ಕೆ ಇಳಿಯುತ್ತೇನೆ ಎಂಬ ಎಚ್ಚರಿಕೆಯನ್ನು ಕೊಟ್ಟಿದ್ದಾರೆ.

Amaranath yathra : ವಿಪರೀತ ಮಳೆಯ ಕಾರಣ 80 ಜನ ಕನ್ನಡಿಗರು ಸಿಲುಕಿರುವ ಮಾಹಿತಿ ಇದೆ : ಜೋಶಿ

Prahlad Joshi : ಎಂ ಬಿ ಪಾಟೀಲರು ಆದಷ್ಟು ಬೇಗ ಮುಖ್ಯಮಂತ್ರಿ ಆಗಬೇಕು ಅಂತ ಜಾಸ್ತಿ ಬಿಜೆಪಿಗೆ ಬೈತಾ ಇದ್ದಾರೆ..! :ಜೋಶಿ

Vishwa keerthi : ವಿಶ್ವವಿಖ್ಯಾತವಾಗಲಿ ವಿಶ್ವಕೀರ್ತಿಯ ಸಾಧನೆ: ಎಳೆಯ ವಯಸ್ಸಿನಲ್ಲಿಯೇ ಬಹುದೊಡ್ಡ ಸಾಧನೆ ಮಾಡಿದ ಸಾಧಕಿ

- Advertisement -

Latest Posts

Don't Miss