Dharwad News: ರಾಜ್ಯದಲ್ಲಿ ಮಂಡನೆಯಾದ ಬಜೆಟ್ ಬಗ್ಗೆ ಸಚಿವ ಪ್ರಹ್ಲಾದ್ ಜ್ಯೋಶಿ ಮಾತನಾಡಿದರು. ಇದೊಂದು ಜನರ ಮೇಲೆ ಆರ್ಥಿಕ ಹೊರೆ ಬೀಳುವ ಬಜೆಟ್ ಎಂದು ಸಚಿವರು ನಮೂದಿಸಿದರು. ಇನ್ನು ಏನೇನು ಹೇಳಿದರು ನೋಡೋಣ …
ಧಾರವಾಡದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವರು ಸಿದ್ದರಾಮಯ್ಯ ಅವರು ಮಂಡಿಸುವ ಬಜೆಟ್ ನಲ್ಲಿ ಯಾವುದೇ ಯೋಜನೆಗಳು ಹಾಗೂ ವ್ಯವಸ್ಥಿತವಾಗಿ ಜಾರಿಗೊಳಿಸಿಲ್ಲ ಇದರಿಂದ ರಾಜ್ಯದ ಜನತೆಯ ಮೇಲೆ ಆರ್ಥಿಕ ಹೊರೆ ಬೀಳಲಿದೆ ಅಲ್ಲದೆ ಸಾಕಷ್ಟು ತೆರಿಗೆಯನ್ನು ವಿಧಿಸುವ ಮೂಲಕ ಜನಸಾಮಾನ್ಯರನ್ನು ಮತ್ತಷ್ಟು ಮತ್ತಷ್ಟು ಆರ್ಥಿಕ ಸಂಕಷ್ಟಕ್ಕೆ ದೂಡಿದೆ ಎಂದು ದೂರಿದರು ಮಾಡಿದ್ದಾರೆ .
ಈ ಬಜೆಟ್‌ನಿಂದ ರಾಜ್ಯ ಸಾಲದ ಕೂಪಕ್ಕೆ ಹೋಗುವ ಲಕ್ಷಣಗಳು ಕಾಣುತ್ತಿದೆ. ಪದೇ ಪದೇ ಭಾರತ ಸರ್ಕಾರದ ಮೇಲೆ ಮುಖ್ಯಮಂತ್ರಿಗಳು, ಸಚಿವರು ಆರೋಪ ಮಾಡುತ್ತಿದ್ದಾರೆ. ಆದರೆ ಜುಲೈ 1ಕ್ಕೆ ನೀಡಿರೋ ಅಕ್ಕಿಯೂ ಕೇಂದ್ರ ಸರ್ಕಾರದ್ದು. ಕರ್ನಾಟಕ ಸೇರಿ 80 ಕೋಟಿ ಜನರಿಗೆ ಅಕ್ಕಿ ವಿತರಿಸಲಾಗಿದೆ. ಈ ಅಕ್ಕಿಯನ್ನು ಕೇಂದ್ರ ಸರ್ಕಾರವೇ ಕೊಟ್ಟಿದೆ. ನೀವು ಅಕ್ಕಿಯನ್ನ ಕೊಟ್ಟಿಲ್ಲ ಅದನ್ನು ನೀವು ಒಪ್ಪಿಕೊಳ್ಳಲೇಬೇಕು. ಎಲ್ಲ ಯೋಜನೆಗೆ ಅನಗತ್ಯ ಷರತ್ತು ಹಾಕಲಾಗಿದೆ. ಗ್ಯಾರಂಟಿ ಯೋಜನೆಗಳಿಗೆ ಷರತ್ತು ವಿಧಿಸಲಾಗುತ್ತದೆ. ಆ ಮೂಲಕ ನೀವು ಜನರಿಗೆ ಮೋಸ ಮಾಡಿದ್ದೀರಿ. ಜನರಿಗೆ ಮೋಸ ಮಾಡುವ ಕೆಲಸ ಮುಂದುವರೆಸಿದ್ದೀರಿ. ವರ್ಗಾವಣೆಯಲ್ಲಿ ಅನೇಕ ಕಡೆ ವಸೂಲಿ ನಡೆದಿದೆ. ಒಂದೊಂದು ಪೋಸ್ಟಿಗೆ ನಾಲ್ಕಾಲ್ಕು ಶಿಫಾರಸ್ಸು ಪತ್ರ ಕೊಡುತ್ತಿದ್ದಾರೆ. ಅದರೊಂದಿಗೆ ವಸೂಲಿ ಕೂಡ ಶುರುವಾಗಿದೆ. ಭ್ರಷ್ಟಾಚಾರ ಅಂತಾ ಮಾತನಾಡಿ ಬಂದಿರಿ. ಈಗ ವಸೂಲಿ ಕೆಲಸ ಆರಂಭ ಮಾಡಿದ್ದಾರೆ. ನೀವು ಮಾಧ್ಯಮದವರು ಕೂಡ ಆಂತರಿಕ ತನಿಖೆ ಮಾಡಿ. ಯಾವ ರೀತಿ ವಸೂಲಿ ಆಗುತ್ತೆ ಅನ್ನೋದು ಗೊತ್ತಾಗುತ್ತೆ. ಕನಿಷ್ಠ ಆರು ತಿಂಗಳಾದರೂ ಕೆಲಸ ಸರಿಯಾಗಿ ಮಾಡಿ ಅಂತಾ ನಾನು ಸಲಹೆ ಕೊಡುತ್ತೇನೆ ಎಂದರು.
ಸಾರ್ವಜನಿಕರಿಗೆ ಹೊರೆಯಾಗದ ಬಜೆಟ್ ಸ್ವಾಗತಾರ್ಹ: ಕೆಸಿಸಿಐ ಅಧ್ಯಕ್ಷ ಅಭಿಮತ