Hubli News: ಜೋಶಿ ಟ್ವಿಟ್ ಗೆ ಎಂ ಬಿ ಪಾಟೀಲ್ ರಿಯಾಕ್ಷನ್ ವಿಚಾರವಾಗಿ ಜೋಶಿ ಪ್ರತಿಕ್ರಿಯೆ ನೀಡಿದ್ದಾರೆ. ಬಡವರ ಬಗ್ಗೆ ಯಾರಿಗೆ ಎಷ್ಟು ಕಾಳಜಿ ಇದೆ ಎಂಬುದನ್ನು ಜನ ಮುಂದಿನ ದಿನಗಳಲ್ಲಿ ತೀರ್ಮಾನ ಮಾಡ್ತಾರೆ. ಇಡೀ ದೇಶದಲ್ಲಿ ಕಾಂಗ್ರೆಸ್ ಪಾರ್ಟಿ ಪರಿಸ್ಥಿತಿ ಏನಿದೆ ಅಂತ ಅರ್ಥ ಮಾಡ್ಕೊಳಿ. ಅಕ್ಕಿ ಕೊಡ್ತೀವಿ ಅಂತ ನಾವು ಕೊಡ್ತಾ ಇರುವ ಅಕ್ಕಿಯನ್ನು ತಮ್ಮದು ಅಂತ ಹೇಳ್ಕೋತಿದ್ದಾರೆ.
ಮೋದಿ ಸರ್ಕಾರ 5 ಕೆಜಿ ಅಕ್ಕಿ ಕೊಡ್ತಾ ಇದೆ. ಯುವ ಶಕ್ತಿಗೆ ಇದುವರೆಗೂ ನಯಾಪೈಸೆ ಕೊಡುವುದರ ಬಗ್ಗೆ ಮಾತಾಡಿಲ್ಲ. ವಿದ್ಯುತ್ ಬಿಲ್ ಜಾಸ್ತಿ ಮಾಡಿದ್ದಾರೆ ಇದು ಬಡವರ ಪರವಾಗಿನಾ, ವಿರುದ್ಧವಾಗಿನಾ?. ಎಂ ಬಿ ಪಾಟೀಲರು ಆದಷ್ಟು ಬೇಗ ಮುಖ್ಯಮಂತ್ರಿ ಆಗಬೇಕು ಅಂತ ಜಾಸ್ತಿ ಬಿಜೆಪಿಗೆ ಬೈತಾ ಇದ್ದಾರೆ. ಬಿಜೆಪಿಗೆ ಬೈಯೋದ್ರಿಂದ ಅವರು ಮುಖ್ಯಮಂತ್ರಿ ಆಗೋದಾದ್ರೆ ಅವರು ಆಗ್ಲಿ ಅಂತ ಹಾರೈಸುತ್ತೇನೆ ಎಂದರು.
Amaranath yathra : ವಿಪರೀತ ಮಳೆಯ ಕಾರಣ 80 ಜನ ಕನ್ನಡಿಗರು ಸಿಲುಕಿರುವ ಮಾಹಿತಿ ಇದೆ : ಜೋಶಿ
Vishwa keerthi : ವಿಶ್ವವಿಖ್ಯಾತವಾಗಲಿ ವಿಶ್ವಕೀರ್ತಿಯ ಸಾಧನೆ: ಎಳೆಯ ವಯಸ್ಸಿನಲ್ಲಿಯೇ ಬಹುದೊಡ್ಡ ಸಾಧನೆ ಮಾಡಿದ ಸಾಧಕಿ