Thursday, December 12, 2024

Latest Posts

ಟಿಕೇಟ್ ಕೊಡಿಸುವುದಾಗಿ ವಂಚನೆ ಆರೋಪ ಕೇಸ್ ಬಗ್ಗೆ ಪ್ರಹ್ಲಾದ್ ಜೋಶಿ ಮೊದಲ ರಿಯಾಕ್ಷನ್

- Advertisement -

Political News: ಚುನಾವಣೆಗೆ ಟಿಕೇಟ್ ಕೊಡಿಸುವುದಾಗಿ ಕೋಟಿ ಕೋಟಿ ಹಣ ಪಡೆದು ವಂಚನೆ ಮಾಡಿರುವುದಾಗಿ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಸಹೋದರ, ಸಹೋದರಿ ವಿರುದ್ಧ ಆರೋಪ ಕೇಳಿ ಬಂದಿದೆ.

ಇದಕ್ಕೆ ಪ್ರತಿಕ್ರಿಯೆ ನೀಡಿರುವ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ, ನನಗೆ ಸಹೋದರಿ ಇದ್ದಾರೆ ಎಂದು ಆರೋಪಿಸಿದ್ದಾರೆ. ಆದರೆ ನನಗೆ ಸಹೋದರಿಯೇ ಇಲ್ಲ. ಗೋಪಾಲ ಜೋಶಿ ನನ್ನ ಸಹೋದರನಾಗಿದ್ದರೂ, ಅವರಿಂದ ನಾನು ಬೇರೆಯಾಗಿ 35 ವರ್ಷವಾಗಿದೆ. ನಮ್ಮಿಬ್ಬರ ಮಧ್ಯೆ ಯಾವುದೇ ಸಂಬಂಧ ಉಳಿದಿಲ್ಲ. ತಪ್ಪು ಮಾಡಿದವರ ವಿರುದ್ಧ ಧಾರಾಳವಾಗಿ ಕಠಿಣ ಶಿಕ್ಷೆ ಕೈಗೊಳ್ಳಬಹುದು ಎಂದು ಜೋಶಿ ಸ್ಪಷ್ಟನೆ ನೀಡಿದ್ದಾರೆ.

ನಾವು ನಾಲ್ವರು ಸಹೋದರರು ಅದರಲ್ಲಿ ಓರ್ವ ತೀರಿಹೋಗಿದ್ದಾನೆ. ಇನ್ನೋರ್ವ ಗೋಪಾಲ್ ಜೋಶಿ. ಕಳೆದ ಬಾರಿ ಇವರ ಮೇಲೆ ಇಂಥದ್ದೇ ಆರೋಪ ಕೇಳಿ ಬಂದಿತ್ತು. ಪದೇ ಪದೇ ನನ್ನ ಸಹೋದರನ ಜೊತೆ ನನ್ನ ಹೆಸರು ಥಳಕು ಹಾಕಲಾಗುತ್ತದೆ. ನನ್ನ ಜೊತೆ ನನ್ನ ಸಹೋದರನ ಹೆಸರು ಥಳಕು ಹಾಕದಂತೆ ಕೋರ್ಟ್‌ನಿಂದ ತಡೆ ತರಲಾಗಿದೆ.

ಅಲ್ಲದೇ, ನಿನ್ನೆ ನನ್ನ ಮೇಲೆ ಮತ್ತು ಸಹೋದರನ ಮೇಲೆ ಎಫ್‌ಐಆರ್ ಹಾಕಿದ್ದು, ಇಂದು ಕಾಂಗ್ರೆಸ್ಸಿಗರು ಪ್ರತಿಭಟನೆ ನಡೆಸುತ್ತಿದ್ದಾರೆ. ನನಗೆ ಸಹೋದರಿ ಇದ್ದಾಳೆಂದು ಆರೋಪಿಸಿದ್ದಾರೆ. ನನಗೆ ಸಹೋದರಿಯೇ ಇಲ್ಲ. ವಿಜಯಲಕ್ಷ್ಮೀ ಯಾರು ಎಂಬುದು ನನಗೆ ಗೊತ್ತಿಲ್ಲ. ನಾನು ಸಾರ್ವಜನಿಕ ಜೀವನದಲ್ಲಿ ಇರುವ ಕಾರಣ, ನನ್ನ ಜೊತೆ ಜನರು ಬಂದು ಫೋಟೋ ತೆಗೆಸಿಕೊಳ್ಳುತ್ತಿರುತ್ತಾರೆ. ಯಾರಾದರೂ ನನ್ನ ಜೊತೆಗಿನ ಫೋಟೋ ತೋರಿಸಿ, ಮೋಸ ಮಾಡಿರಬಹುದು ಎಂದಿದ್ದಾರೆ.

ಅಲ್ಲದೇ, ನನ್ನ ಹೆಸರು ಕೇಳಿ, ಹಣ ಕಳೆದುಕೊಂಡಿರುವ ಬಗ್ಗೆ ನನಗೆ ಬೇಸರವಿದೆ. ಆದರೆ ಯಾರೋ ಮಾಡಿದ ತಪ್ಪಿಗೆ ನನ್ನನ್ನು ಬಂಧಿಸಬೇಕು ಎನ್ನುವುದು ಹಾಸ್ಯಾಸ್ಪದ. ಯಾರು ತಪ್ಪು ಮಾಡಿದ್ದಾರೋ ಅವರನ್ನು ಬಂಧಿಸಿ ಎಂದು ಕೇಂದ್ರ ಸಚಿವ ಪ್ರಹ್ಲಾದೋ ಜೋಶಿ ಹೇಳಿದ್ದಾರೆ.

- Advertisement -

Latest Posts

Don't Miss