ಅಂಬಿ ನಿಂಗ್ ವಯಸ್ಸಾಯ್ತೋ ಸಿನಿಮಾದ ಮೂಲಕ ಡೈರೆಕ್ಟರ್ ಕ್ಯಾಪ್ ತೊಟ್ಟ ಸ್ಯಾಂಡಲ್ ವುಡ್ ಯಂಗೆಸ್ಟ್ ಡೈರೆಕ್ಟರ್ ಗುರುದತ್ ಗಾಣಿಗ. ಮೊದಲ ಸಿನಿಮಾದ ಸಕ್ಸಸ್ ನಂತ್ರ ಗುರುದತ್ ನೆಕ್ಸ್ಟ್ ಪ್ರಾಜೆಕ್ಟ್ ಬಗ್ಗೆ ಕ್ಯೂರಿಯಾಸಿಟಿ ದುಪ್ಪಟ್ಟು ಮಾಡಿದ್ದಂತು ಸುಳ್ಳಲ್ಲ. ಈ ನಡುವೆಯೇ ಗುರುದತ್ ಯಂಗ್ ರೆಬಲ್ ಸ್ಟಾರ್ ಅಭಿಶೇಕ್ ಅಂಬರೀಶ್ ಗೆ ಆ್ಯಕ್ಷನ್ ಕಟ್ ಹೇಳ್ತಾರೆ ಅನ್ನೋ ಸುದ್ದಿ ಗಾಂಧಿನಗರದಲ್ಲಿ ಗಿರಕಿ ಹೊಡೆದಿತ್ತು. ಇದಕ್ಕೆ ರೆಕ್ಕೆ-ಪುಕ್ಕ ಎನ್ನುವಂತೆ ಟೈಟಲ್ ಕೂಡ ಫೈನಲ್ ಆಗಿದೆ ಅನ್ನೋ ಅಂತೇ-ಕಂತೇ ಹರಿದಾಡಿತ್ತು. ಈ ಅಂತೇ ಕಂತೇಗಳಿಗೆಲ್ಲವೂ ಈ ಬ್ರೇಕ್ ಬಿದ್ದಿದೆ.

ಡೈನಾಮಿಕ್ ಪ್ರಿನ್ಸ್ ಜೊತೆ ಯಂಗೆಸ್ಟ್ ಡೈರೆಕ್ಟರ್
ಗುರುದತ್ ಗಾಣಿಕ ತಮ್ಮ ಎರಡನೇ ಸಿನಿಮಾವನ್ನು ಡೈನಾಮಿಕ್ ಪ್ರಿನ್ಸ್ ಪ್ರಜ್ವಲ್ ದೇವರಾಜ್ ಜೊತೆ ಮಾಡಲಿದ್ದಾರೆ. ಇದೊಂದು ಆ್ಯಕ್ಷನ್ ಥ್ರಿಲ್ಲರ್ ಕಥೆಯಾಗಿದ್ದು, ಮಾನವ ಕಳ್ಳ ಸಾಗಾಣಿಕಯಲ್ಲಿ ನಾಯಕ ಹೇಗೆ ಕೆಲಸ ಮಾಡುತ್ತಾನೆ ಎಂಬುದು ಚಿತ್ರದ ಮುಖ್ಯ ಥೀಮ್. ಅಂದಹಾಗೇ ಸಿನಿಮಾಕ್ಕೆ ಯುವಕರೇ ಕೆಲಸ ಮಾಡುತ್ತಿದ್ದಾರೆ. ಟೆಕ್ನಿಕಲ್ ಟೀಂ ಸೇರಿದಂತೆ ಯುವ ನಿರ್ಮಾಪಕ ಈ ಸಿನಿಮಾಕ್ಕೆ ಬಂಡವಾಳ ಹೂಡಲಿದ್ದಾರೆ.

ಹೊಸ ವರ್ಷಕ್ಕೆ ಫಸ್ಟ್ ಲುಕ್
ಟಗರು, ಸಲಗ ಸಿನಿಮಾಗಳಿಗೆ ಸಂಭಾಷಣೆ ಬರೆದಿರುವ ಮಾಸ್ತಿ ಈ ಸಿನಿಮಾದಲ್ಲೂ ಸಂಭಾಷಣೆ ಬರೆಯಲಿದ್ದಾರೆ ಎನ್ನಲಾಗ್ತಿದೆ. ಅಭಿನಂದನ್ ಸಿನಿಮಾಟೋಗ್ರಾಫಿ ಚಿತ್ರದಲ್ಲಿರಲಿದೆ. ಹೊಸ ವರ್ಷಕ್ಕೆ ಫಸ್ಟ್ ಲುಕ್ ರಿಲೀಸ್ ಮಾಡಲು ಚಿತ್ರತಂಡ ಪ್ಲಾನ್ ಹಾಕಿಕೊಂಡಿದೆಯಂತೆ.

