Saturday, July 27, 2024

Latest Posts

Prajwal Pen drive case: ಒಂದು ಸಿದ್ದರಾಮಯ್ಯ ಇನ್ನೊಂದು ಶಿವಕುಮಾರ್ ಇನ್ವಿಸ್ಟಿಗೇಶನ್ ಟೀಂ: ಹೆಚ್ಡಿಕೆ

- Advertisement -

Political News: ಬೆಂಗಳೂರಿನಲ್ಲಿಂದು ಮಾಜಿ ಸಿಎಂ ಕುಮಾರಸ್ವಾಮಿ ಸುದ್ದಿಗೋಷ್ಠಿ ನಡೆಸಿದ್ದು, ಪ್ರಜ್ವಲ್ ರೇವಣ್ಣ ಪೆನ್‌ಡ್ರೈವ್ ಕೇಸ್‌ ಬಗ್ಗೆ ಮಾತನಾಡಿದ್ದಾರೆ.

ರಾಜ್ಯದಲ್ಲಿ ಇತ್ತಿಚೇಗೆ ನಡೆದ ಅತ್ಯಂತ ಕೆಟ್ಟ ರೀತಿಯ ಬೆಳವಣಿಗೆ. ಸಮಾಜದಲ್ಲಿ ಉತ್ತಮಬದುಕು ಕಾಣಬೇಕಾಗಿದೆ, ಅಂಥಹ ಬದುಕಿಗೆ ಯಾರ ರೀತಿ ಧಕ್ಕೆ‌ಉಂಟಾಗಿದೆ. ಇದು‌ ನೋವಿನ ಸಂಗತಿ. 21 ನೇ ತಾರೀಖು ಪೆನ್ ಡ್ರೈವ್ ಅನ್ನಾ ಈಡೀ ರಾಜ್ಯದಲ್ಲಿ ಹಂಚಿದ್ದಾರೆ. ಪೊಲೀಸ್ ಅಧಿಕಾರಿಗಳನ್ನು ಇಟ್ಕೊಂಡು‌ ಮಾಡಿದಾರೆ. ಮಂಡ್ಯ ಹಾಸನ ಬೆಂಗಳೂರು ಗ್ರಾಮಾಂತರದಲ್ಲಿ ಮಾಡಿದಾರೆ. 22 ನೇ ತಾರೀಖು ಹಾಸನ ಜೆಡಿಎಸ್ ಅಭ್ಯರ್ಥಿಯ ಎಲೆಕ್ಷನ್ ಏಜೆಂಟ್ ಪೂರ್ಣಚಂದ್ರ ಹಾಸನದ ಡಿಸಿಗೆ ಕಂಪ್ಲೈಂಟ್ ಕೊಟ್ಟಿದಾರೆ. ನಾನು ಎನ್ ಡಿಎ ಅಭ್ಯರ್ಥಿ ಪ್ರಜ್ವಲ್ ಅಂತಾ ಹೇಳಲ್ಲಾ. 21 ರಾತ್ರಿ ಪ್ರಜ್ವಲ್ ರೇವಣ್ಣ ವಿಡಿಯೋ ನೋಡಲು ಈ ವಾಟ್ಸಾಪ್ ಚಾನಲ್ ಫಾಲೋ‌ಮಾಡಿ. ಪ್ರಜ್ವಲ್ ರೇವಣ್ಣ ವಿಡಿಯೋ ದಿನಗಣನೆ‌ 8pm ಅಂತೆಲ್ಲಾ ಸಂದೇಶ ಕಳಿಸಲಾಗಿದೆ. ಈ ಬಗ್ಗೆ ಆತಂಕ ತಂದಿದೆ ಎಂದು ಕುಮಾರಸ್ವಾಮಿ ಹೇಳಿದ್ದಾರೆ.

ನಮ್ಮ ಸಂಬಂಧಿಕರ ಬಗ್ಗೆ ರಕ್ಷಣೆ ಕೊಡುವ ವ್ಯಕ್ತಿ ನಾನಲ್ಲಾ. ಈ ಪ್ರಕರಣದಲ್ಲಿ ಯಾರೇ ಭಾಗಿಯಾಗಿದ್ರೂ ಕಠಿಣ ಶಿಕ್ಷೆ ಆಗ್ಬೇಕು. ಇದರಲ್ಲಿ ಯಾವುದೇ ರಾಜೀ ಇಲ್ಲಾ. ಯಾವುದೇ ವ್ಯಕ್ತಿಯನ್ನು ರಕ್ಷಿಸುವ ಪ್ರಶ್ನೆ ಇಲ್ಲಾ. ವಿಡಿಯೋ ಬಿಡುಗಡೆ ಎಂದವನು‌ ನವೀನ್ ಗೌಡ. ನಮ್ಮ ಏಜೆಂಟ್ ಪೂರ್ಣಚಂದ್ರ ಕಂಪ್ಲೈಂಟ್ ಕೊಟ್ಟಿರೋದು 5 ಜನರ ಮೇಲೆ. ನವೀನ್ ಗೌಡ, ಕಾರ್ತಿಕ ಗೌಡ, ಪುಟ್ಟಿ ಆಲಿಯಾಸ್ ಪುಟ್ಟಗೌಡ. ಈ ಕ್ಷಣದವರೆಗೆ ಆ ಕಂಫ್ಲೈಂಟದ ಬಗ್ಗೆ ಆಕ್ಷನ್ ತಗೊಂಡಿಲ್ಲಾ ಎಂದು ಕಂಪ್ಲೆಂಟ್ ಕಾಪಿಯನ್ನು ಹೆಚ್ಡಿಕೆ ಮಾಧ್ಯಮದವರಿಗೆ ತೋರಿಸಿದ್ದಾರೆ.  23 ರಂದು ಸ್ವೀಕೃತಿ ಹಿಂಬರಹ ಕೂಡ ಕೊಟ್ಟಿದಾರೆ.  ರಾಜ್ಯಾದ್ಯಂತ 25 ಸಾವಿರ ಹಂಚಿಕೆ ಮಾಡಿದಾರೆ. ಇದ್ರಲ್ಲಿ ಪತ್ರಿಕೆಗಳಲ್ಲಿ ವರದಿ ಬಂದಿದೆ. ಕಂಪ್ಲೈಂಟ್ ಕೊಟ್ರು ಏನು ಆಕ್ಷನ್ ಆಗಿಲ್ಲಾ ಎಂದು ಕುಮಾರಸ್ವಾಮಿ ಆರೋಪಿಸಿದ್ದಾರೆ.

5 ಜನರ ಮೇಲೆ‌ ಆಕ್ಷನ್ ತಗೊಂಡ್ರಾ..? ಚುನಾವಣೆ ನಡೆಯುವ ಸಂದರ್ಭದಲ್ಲಿ ಮುಖ್ಯಮಂತ್ರಿಗಳು ನೂರು ಬಾರಿ ಹೇಳಿದ್ದಾರೆ. ಕುಮಾರಸ್ವಾಮಿ ಸೋಲಿನ ಭಯದಿಂದ ಮಂಡ್ಯಕ್ಕೆ ಬಂದಿದಾರೆ. ಮೂರು ಅಭ್ಯರ್ಥಿಗಳು, ಗ್ರಾಮಾಂತರ ಅಭ್ಯರ್ಥಿ ಸೋಲ್ತಾರೆ ಎಂದಿದ್ದಾರೆ. ಮಿಸ್ಟರ್ ಕುಮಾರಸ್ವಾಮಿ ಚುನಾವಣೆಯಲ್ಲಿ ಗೆಲ್ಲಲ್ಲಾ ಎಂದು ಡಿಕೆಶಿ ಹೇಳಿದ್ದಾರೆ. ಏನೋ ಗೊತ್ತಿಲ್ದೆ ಇರೋ ಹೆಣ್ಮಕ್ಕಳನ್ನು ಕರಕೊಂಡು ಬಂದು ಗೋ ಬ್ಯಾಕ್ ಕುಮಾರಸ್ವಾಮಿ ಅಂದ್ರು. 25 ನೇ ತಾರೀಖ್ ನಮ್ಮ‌ ನಾಗಲಕ್ಷ್ಮೀ ಚೌಧರಿ ಪತ್ರ ಬರೆದ್ರು. ವಿಶೇಷ ತನಿಖಾ ತಂಡ ಮಾಡಿ. ಅಶ್ಲೀಲ ವಿಡಿಯೋ ಮಾಡಿಕೊಂಡು ದುರ್ಬಳಕೆ‌‌ ಮಾಡಿದ್ದಾರೆ. ರಾಜಕಾರಣಿಗಳು ಎಂದು ಬರೆದಿದ್ದಾರೆ. ರಾಜಕಾರಣಿಗಳು 100 ಜನಾ ಇರ್ಬಹುದು. ವಿಡಿಯೋ ಮಾಡಿದವರು, ಹಾಗೂ ಹಂಚಿದವರ ವಿರುದ್ಧ ಕ್ರಮ ಕೈಗೊಳ್ಳಿ ಎಂದು. ಅವತ್ತೆ ಸಂಜೆ ಸಿಎಂ ಟ್ವಿಟ್ ಮಾಡಿದ್ರು. ಪತ್ರದಲ್ಲಿ ಪ್ರಜ್ವಲ್ ರೇವಣ್ಣ ಹೆಸರು ಇಲ್ಲಾ. ಆದ್ರೆ ಮುಖ್ಯಮಂತ್ರಿ ಟ್ವೀಟ್ ಮಾಡುವಾಗ ಪ್ರಜ್ವಲ್ ರೇವಣ್ಣ ಹೆಸರು ಬರೆಯುತ್ತಾರೆ. ಸಂಚು ಹೇಗಿದೆ ಅನ್ನೋದು ಗೊತ್ತಾಗುತ್ತದೆ ಎಂದು ಕುಮಾರಸ್ವಾಮಿ ಅಸಮಾಧಾನ ಹೊರಹಾಕಿದ್ದಾರೆ.

28 ರಂದು ಗಣಕಯಂತ್ರದ ಮೂಲಕ ಇಲ್ಲಿ ಕಂಪ್ಲೈಂಟ್ ರೆಡಿ ಮಾಡಿಸಿ ಹೊಳೆನರಸೀಪುರದಲ್ಲಿ fir ಮಾಡ್ಸಿದ್ರು ಮಲ್ಲೇಶ್ವರಂ‌ನಲ್ಲಿ ಕುಳಿತು ಮಾಡಿದ್ದಾರೆ. ಎಸ್ಐಟಿ ಗೆ ಕೊಟ್ಟಾಗ ಪಾರದರ್ಶಕವಾಗಿ ತನಿಖೆ ನಡೆಯಬಹುದು ಅಂದುಕೊಂಡಿದೆ. ಇದು ಸಿದ್ದರಾಮಯ್ಯ ಇನ್ವಿಸ್ಟಿಗೇಶನ್ ಟೀಂ. ಇನ್ನೊಂದು ಶಿವಕುಮಾರ್ ಇನ್ವಿಸ್ಟಿಗೇಶನ್ ಟೀಂ ಅಂತಾ ಆಮೇಲೆ ಗೊತ್ತಾಯ್ತು.  ಈಗಲೂ ನಾನು ಹೇಳುತ್ತೇನೆ. ಪ್ರಜ್ವಲ್ ರೇವಣ್ಣ ಅವರನ್ನು ನಾನು ವಹಿಸಿಕೊಳ್ಳುವುದಿಲ್ಲಾ. ಆದ್ರೆ ತನಿಖೆಯಾವ ರೀತಿ ಹೋಗ್ತಿದೆ ಅನ್ನೋದು‌ ಪ್ರಶ್ನೆ ಎಂದು ಕುಮಾರಸ್ವಾಮಿ ಹೇಳಿದ್ದಾರೆ.

ಮುಷ್ಕರ ಮುಂದೂಡಿದ ಸರ್ಕಾರಿ ಆ್ಯಂಬುಲೆನ್ಸ್ ಸಿಬ್ಬಂದಿಗಳು

ಪಿಓಕೆ ತಂಟೆಗೆ ಹೋದರೆ ಭಾರತದ ಮೇಲೆ ಅಣುಬಾಂಬ್ ಬೀಳುತ್ತೆ: ಫಾರೂಕ್ ಅಬ್ದುಲ್ಲಾ

ಮೇಲ್ಜಾತಿಯವರು ಪೇಪರ್ ಸೆಲೆಕ್ಟ್‌ ಮಾಡುವ ಕಾರಣಕ್ಕೆ ದಲಿತರು ಫೇಲ್ ಆಗುತ್ತಿದ್ದಾರೆ: ರಾಹುಲ್ ಗಾಂಧಿ

- Advertisement -

Latest Posts

Don't Miss