Saturday, July 27, 2024

Latest Posts

ಪ್ರಜಾಪ್ರಭುತ್ವದ ಹಕ್ಕು ಚಲಾಯಿಸಿದ ಪ್ರಜ್ವಲ್, ಶ್ರೇಯಸ್, ಮಹಾರಾಜ ಯದುವೀರ್, ಚಂದನ್ ಗೌಡ..

- Advertisement -

Political News: ಹಾಸನದ ಹರದನಹಳ್ಳಿ ಈಶ್ವರ ದೇವಾಲಯದಲ್ಲಿ ಪ್ರಜ್ವಲ್ ರೇವಣ್ಣ ಪೂಜೆ ನೆರವೇರಿಸಿ, ಪ್ರಜಾಪ್ರಭುತ್ವದ ಹಕ್ಕನ್ನ ಚಲಾವಣೆ ಮಾಡಿದ್ದಾರೆ.

ನೂರಕ್ಕೆ ನೂರು ಭಾಗ ಗೆಲ್ತೀವಿ. ಬಿಜೆಪಿ ಜೆಡಿಎಸ್ ಕಾರ್ಯಕರ್ತರು ಒಟ್ಟಾಗಿ ಕೆಲಸ ಮಾಡಿದ್ದಾರೆ. 8.30 ರ ವೇಳೆಗೆ ದೇವೇಗೌಡ ರು ಮತದಾನ ಮಾಡುವರು. ಈ ಬಾರಿ ಮೊದಲ ಹಂತದಲ್ಲಿ 14 ಕ್ಕೆ 14 ಸ್ಥಾನವನ್ನೂ ಗೆಲ್ಲುತ್ತೇವೆ ಎಂದು ಪ್ರಜ್ವಲ್ ರೇವಣ್ಣ ಹೇಳಿದ್ದಾರೆ.

ಇನ್ನೊಂದೆಡೆ ಹಾಸನದ ಕಾಂಗ್ರೆಸ್ ಲೋಕಸಭಾ ಅಭ್ಯರ್ಥಿಯಾಗಿರುವ ಶ್ರೇಯಸ್ ಪಟೇಲ್ ಹಕ್ಕು ಚಲಾವಣೆ ಮಾಡಿದ್ದಾರೆ. ಪತ್ನಿ, ತಾಯಿ ಮತ್ತು ಮಾವನ ಜೊತೆ ಬಂದ ಶ್ರೇಯಸ್, ಹೊಳೆನರಸೀಪುರ ಸರ್ಕಾರಿ ಪ್ರೌಢಶಾಲೆಯಲ್ಲಿ ಬಂದು ಮತಗಟ್ಟೆ ಸಂಖ್ಯೆ 282 ರಲ್ಲಿ ಕೈ ಅಭ್ಯರ್ಥಿ ಮತ ಚಲಾಯಿಸಿದ್ದಾರೆ.

ಇನ್ನು ಮೌಸೂರಿನ ಬಿಜೆಪಿ ಅಭ್ಯರ್ಥಿ ಯದುವೀರ್ ರಾಜಮಾತೆ ಪ್ರಮೋದಾದೇವಿ, ರಾಣಿ ತ್ರಿಶಿಕಾ ಜೊತೆ ಆಗಮಿಸಿ, ಮತಗಟ್ಟೆ ಸಂಖ್ಯೆ 176ರಲ್ಲಿ ಮತದಾನ ಮಾಡಿದ್ದಾರೆ. ಅಗ್ರಹಾರದ ಶ್ರೀಕಾಂತ ಶಾಲೆಯ ಮತಗಟ್ಟೆಯಲ್ಲಿ ತ್ರಿಶಿಕಾ, ಯದುವೀರ್, ರಾಜಮಾತೆ ಪ್ರಮೋದಾದೇವಿ ಸರತಿ ಸಾಲಿನಲ್ಲಿ ನಿಂತು ಮತದಾನ ಮಾಡಿದ್ದಾರೆ.

ಇನ್ನು ಮಂಡ್ಯ ಜಿಲ್ಲೆಯಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿಗೆ ಪೈಪೋಟಿ ನೀಡುತ್ತಿರುವ ಪಕ್ಷೇತರ ಅಭ್ಯರ್ಥಿ ಚಂದನ್ ಗೌಡ ಕೂಡ ಪತ್ನಿ ಮತ್ತು ನಟಿ ನವ್ಯಾ ಗೌಡ ಜೊತೆ ಬಂದು ಮತಚಲಾಯಿಸಿದ್ದಾರೆ. ಹೊನ್ನೇನಹಳ್ಳಿ ಕೃಷ್ಣರಾಜಪೇಟೆ ಬೂತ್‌ನಲ್ಲಿ ಪತಿ ಪತ್ನಿ ಓಟ್ ಮಾಡಿದ್ದಾರೆ.

ನನ್ನ ಮಗಳ ಸಾವಿಗೆ ಫಯಾಝ್ ಸಾವು ನ್ಯಾಯವಾಗಬೇಕು: ನಿರಂಜನಯ್ಯ ಆಗ್ರಹ..!

120 ದಿನದಲ್ಲಿ ನ್ಯಾಯ ಕೊಡಸ್ತಿವಿ, ನಿರಂಜನಯ್ಯ ಕುಟುಂಬದ ಜೊತೆಗಿದ್ದೇವೆ: ಸಿಎಂ ಸಿದ್ಧರಾಮಯ್ಯ

ನೇಹಾ ಮನೆಗೆ ಸಿಎಂ ಸಿದ್ಧರಾಮಯ್ಯ ಭೇಟಿ: ಕುಟುಂಬಸ್ಥರಿಗೆ ಸಾಂತ್ವನ

- Advertisement -

Latest Posts

Don't Miss