- Advertisement -
www.karnatakatv.net : ಮೂವೀ ಆರ್ಟಿಸ್ಟ್ ಅಸೋಸಿಯೇಷನ್ ಚುನಾವಣೆಯಲ್ಲಿ ಅಧ್ಯಕ್ಷ ಸ್ಥಾನಕ್ಕೆ ನಟ ವಿಷ್ಣು ಮಂಚು ಮತ್ತು ಪ್ರಕಾಶ್ ರಾಜ್ ಭಾಗವಹಿಸಿದ್ರು.
ತೆಲುಗು ಚಿತ್ರರಂಗದ ಚುನಾವಣೆಯಯ ಫಲಿತಾಂಶವು ಹೊರಬಿದ್ದಿದ್ದು, ವಿಷ್ಣು ವಿರುದ್ಧ ಪ್ರಕಾಶ್ ರಾಜ್ 400 ಮತಗಳ ಅಂತರದಲ್ಲಿ ಸೋಲುಂಡಿದ್ದಾರೆ. ಅಧ್ಯಕ್ಷ ಸ್ಥಾನದ ಫಲಿತಾಂಶ ಘೋಷಣೆಯಾಗುತ್ತಿದ್ದಂತೆ ಪ್ರಕಾಶ ರಾಜ್, ಫಲಿತಾಂಶವನ್ನು ನಾನು ಗೌರವಿಸುತ್ತೆನೆ ಮತ್ತು ವಿಷ್ಣುವಿಗೆ ಅಭಿನಂದನೆಯನ್ನು ಸಲ್ಲಿಸುತ್ತೆನೆ ಎಂದು ತಿಳಿಸಿದ್ದಾರೆ. ಇಷ್ಟೇ ಅಲ್ಲದೆ, ಸೋಲು ಗೆಲುವನ್ನೂ ಮೀರಿ ಚಿತ್ರರಂಗದ ಹಿತಕ್ಕಾಗಿ ಒಗ್ಗಟ್ಟಿನಿಂದ ಕೆಲಸವನ್ನು ಮಾಡಬೇಕು ಎಂದು ಹೇಳಿದರು.
ಅದರಲ್ಲೂ ಪ್ರಕಾಶ್ ಮೂಲತಃ ತೆಲುಗು ನಟ ಅಲ್ಲ ಹಾಗಾಗಿ ಅವರು ಚುನಾವಣೆಯಲ್ಲಿ ಸ್ಪರ್ಧಿಸಬಾರದು ಎಂದು ವಿರೋಧ ವ್ಯಕ್ತಪಡಿಸಿದ್ದರು. ಹಲವಾರು ನಟರು ಪ್ರಕಾಶ್ ಅವರ ಪರ ಇದ್ದರೂ ಸಹ ಅವರು ಸೋಲನ್ನು ಅನುಭವಿಸಬೇಕಾಯಿತು.
- Advertisement -