ಹುಬ್ಬಳ್ಳಿ: ಕಾಂಗ್ರೆಸ್‌ನಲ್ಲಿ ಭ್ರಷ್ಟಾಚಾರ, ಅಭಿವೃದ್ಧಿ ಹಿನ್ನಡೆ, ಗ್ಯಾರಂಟಿಗಳ ಗೊಂದಲವಿದೆ. ಇದೇ ಕಾರಣಕ್ಕೆ ವಿಷಯ ಡೈವರ್ಟ್ ಮಾಡುತ್ತಿದ್ದಾರೆ. ಕಾಂಗ್ರೆಸ್ ಪಾರ್ಟಿಯವರು ಇತಿಹಾಸ ತಿಳಿದುಕೊಳ್ಳಲಿ. ಈ ಹಿಂದೆ ಮಣಿಪುರ ಸೇರಿದಂತೆ ಈಶಾನ್ಯ ಭಾರತದಲ್ಲಿ ಸಾಕಷ್ಡು ಗಲಭೆಗಳಾಗಿವೆ. ಒಂದೇ ಗಲಭೆಯಲ್ಲಿ ಏಳು ನೂರು ಜನರು ಸಾವನ್ನಪ್ಪಿರುವ ಇತಿಹಾಸವಿದೆ.
ಒಬ್ಬರು ಸತ್ತರೂ ನಾವು ಸಂವೇದನಾಶೀಲವಾಗಿ ನೋಡುತ್ತೇವೆ. ಅವರ ಸರ್ಕಾರವಿದ್ದಾಗ ಪಿಎಮ್, ಹೋಮ್ ಮಿನಿಸ್ಟರ್ ಯಾರೂ ಹೋಗಿರಲಿಲ್ಲ. ನಮ್ಮ ಗೃಹಮಂತ್ರಿ ಮೂರು ದಿನ ಮಣಿಪುರದಲ್ಲೇ ಇದ್ದು, ಪರಿಸ್ಥಿತಿ ನಿಯಂತ್ರಣಕ್ಕೆ ಪ್ರಯತ್ನಿಸಿದ್ದಾರೆ. ಅಲ್ಲಿ ಅಹಾರ ಕೊರತೆಯಾಗಿಲ್ಲ, ಕಾನೂನು ಮತ್ತು ಸುವ್ಯವಸ್ಥೆ ಕಾಪಾಡಲು ಯತ್ನಿಸಲಾಗುತ್ತಿದೆ. ಮಹತ್ವದ ಬಿಲ್‌ಗಳು ಇದ್ದಾಗ ಕಾಂಗ್ರೆಸ್ ಚರ್ಚೆಯಲ್ಲಿ ಭಾಗವಹಿಸಿಲ್ಲ. ಹಳೇ ಯುಪಿಎ ಟೀಮ್ ಚರ್ಚೆಯಲ್ಲಿ ಭಾಗವಹಿಸಿಲ್ಲ, ಇದು ಘಮಂಡಿ ಘಟಬಂಧನ ದೆಹಲಿಯಲ್ಲಿ ಕಾಂಗ್ರೆಸ್ ಪಕ್ಷದ ಕಾಲದಲ್ಲಿ ಇದ್ದ ಆಡಳಿತ ಈಗಲೂ ನಡೆಯುತ್ತಿದೆ.
ಕೇಂದ್ರಾಡಳಿತ ಪ್ರದೇಶವಾದ ದೆಹಲಿ ನಿಯಮಗಳು ಅಲ್ಲಿ ನಡೆಯುತ್ತಿವೆ. ಕೋರ್ಟ್ ಕೂಡ ಅದನ್ನೇ ಹೇಳಿದೆ. ಕಾಂಗ್ರೆಸ್ ಮಾಡಿದ್ದ ನಿಯಮವನ್ನು ನಾವು ಕಾನೂನ ಮಾಡಿದ್ದೇವೆ. ಕೇಜ್ರಿವಾಲ್ ಅಧಿಕಾರ ದಾಹದಿಂದ ವರ್ತಿಸುತ್ತಿದ್ದಾರೆ. ಘಮಂಡಿ ಘಟಬಂಧನ ಉಳಿಸಿಕೊಳ್ಳಲು ಕಾಂಗ್ರೆಸ್ ಬೇಜವಾಬ್ದಾರಿಯಿಂದ ವರ್ತಿಸುತ್ತಿದೆ. ಕಾಂಗ್ರೆಸ್ ಪಾರ್ಟಿ ಬೌದ್ಧಿಕ ದಿವಾಳಿತನ ಎದುರಿಸುತ್ತಿದೆ ಎಂದು ಕೆಂದ್ರ ಸಚಿವರಾದ ಪ್ರಹ್ಲಾದ್ ಜೋಷಿ ಹೇಳಿದರು.
Vikrama (Chandrayana-3) ಬಾಹ್ಯಾಕಾಶ ನೌಕೆಯಿಂದ ಯಶಸ್ವಿಯಾಗಿ ಪ್ರತ್ಯೆಕವಾದ ಚಂದ್ರಯಾನ-3
Gas tanker: ಸೇತುವೆ ಕೆಳಗೆ ಸಿಲುಕಿಕೊಂಡ ಟ್ಯಾಂಕರ್: ಟ್ಯಾಂಕರ್ ನಲ್ಲಿ ಗ್ಯಾಸ್ ಖಾಲಿ ಆಗುವವರೆಗೆ ರಸ್ತೆ ತಡೆ..!
Protest : ಸೌಜನ್ಯಾ ಕೊಲೆ ಪ್ರಕರಣ ಕುರಿತು ಶ್ರೀ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಅಭಿಮಾನಿ ಬಳಗದ ವತಿಯಿಂದ ಪ್ರತಿಭಟನೆ