ಹುಬ್ಬಳ್ಳಿ : ಹುಬ್ಬಳ್ಳಿಯಲ್ಲಿ ಮಾಜಿ ಸಚಿವ ಶಂಕರ್ ಪಾಟೀಲ್ ಮುನೇನಕೊಪ್ಪ ಅವರು ಸುದ್ದಿಗೋಷ್ಠಿ ನಡೆಸಿ ಬಿಜೆಪಿ ತೊರೆದು ಕಾಂಗ್ರೆಸ್ ಸೇರಲಿದ್ದಾರೆ ಎಂಬ ಸುದ್ದಿ ಹರಡಿದ ವಿಷಯದ ಕುರಿತು ಕೇಂದ್ರ ಸಚಿವ ಪ್ರಲ್ಹಾದ್ ಜೋಶಿಯವರು ಮಾತನಾಡಿದ್ದಾರೆ.
ಶಂಕರ್ ಪಾಟೀಲ್ ಮುನೇನಕೊಪ್ಪ ಪಕ್ಷ ಬಿಟ್ಟು ಹೋಗಲ್ಲ ಅಂದುಕೊಂಡಿದ್ದೆನೆ. ನನಗಿರೋ ಮಾಹಿತಿ ಪ್ರಕಾರ ಪಕ್ಷ ಬಿಟ್ಟು ಹೋಗಲ್ಲ ಎನ್ನುತ್ತಲೆ ಪಕ್ಷ ಬಿಡುವ ಆಲೋಚನೆಯಲ್ಲಿರುವರಿಗೆ ತತ್ವ ಸಿದ್ಧಾತ ವಿಚಾರಕ್ಕೆ ಬದ್ದರಾಗಿರೋ ಎಲ್ಲ ಪಕ್ಷದಲ್ಲಿ ಇರ್ತಾರೆ. ಆಪರೇಶನ್ ಹಸ್ತದ ಬಗ್ಗೆ ನಾನು ಹೇಳುತ್ತೇನೆ ಎಂದು ವಾರ್ನಿಂಗ್ ಕೊಟ್ಟರು.
ಪಕ್ಷವನ್ನು ಬದಲಾಯಿಸುತ್ತಿರುವವರು ಕೆಲವರು ಅಧಿಕಾರಕ್ಕಾಗಿ ಕಾಂಗ್ರೆಸ್ ಗೆ ಹೋಗತ್ತಿದ್ದಾರೆ ಇದು ಅವರ ದೌರ್ಭಾಗ್ಯ ಆದರೆ ಇದನ್ನು ನಾನು ಮುನೇನಕೊಪ್ಪ ವಿಚಾರವಾಗಿ ಹೇಳುತ್ತಿಲ್ಲ ಎಂದು ಮಾತನ್ನು ಸಮರ್ತಿಸಿಕೊಂಡರು.
ಪಕ್ಷ ನಿಷ್ಠೆ ಇರುವವರಿಗೆ ಅವಕಾಶ ಕೊಟ್ಟಿದೆ.ನಮ್ಮ ಪಕ್ಷ ಪರಿವಾರವಾದಿ ಪಕ್ಷ ಅಲ್ಲ ನಾನು ಮುನೇನಕೊಪ್ಪ ಅವರು ಜೊತೆಗೆ ಮಾತನಾಡಿದ್ದೇನೆ ಅವರು ಇಂದಿನ ಸುದ್ದಿಗೋಷ್ಠಿಯಲ್ಲಿ ಒಳ್ಳೆಯದನ್ನೇ ಮಾಡ್ತಾರೆ ಎಂದು ಹೇಳಿದರು.
Pressmeet :ಶಂಕರಪಾಟೀಲ್ ಮುನೇನಕೊಪ್ಪ ಸುದ್ದಿಗೋಷ್ಠಿ; ಕುತೂಹಲ ಕೆರಳಿಸಿದ ನಡೆ..!
Shankar Patil Munenakoppa: ಮಹತ್ವದ ತಿರುವು ಪಡೆಯಲಿದೆಯಾ ಮುನೇನಕೊಪ್ಪ ಸುದ್ದಿಗೋಷ್ಠಿ.?