ಹುಬ್ಬಳ್ಳಿ: ಮೋದಿ ಸರ್ಕಾರ ಡಿಪಿಎಆರ್ ಗೆ ಅನುಮತಿ ನೀಡಿದೆ. ಮಹದಾಯಿ ನೋಟಿಫಿಕೇಶನ್ ನಾವೇ ಮಾಡಿಸಿದೆವು. ಪರಿಸರ ವಿನಾಯಿತಿಯನ್ನು ಕೊಡಿಸಿದೆವು. ಗೆಜೆಟ್ ನೋಟಿಫಿಕೇಶನ್ ಜೊತೆ ಡಿಪಿಎಆರ್ ಅಪ್ರುವಲ್ ಮಾಡಿದ್ದೇವೆ. ಆದರೇ ಟೈಗರ್ ಕಾರಿಡಾರ್ ಮತ್ತು ಇಕೋ ಸೆನ್ಸಿಟಿವ್ ಝೋನ್ ಕಾರಣಕ್ಕೆ ಮಹದಾಯಿ ವಿಳಂಬವಾಗಿದೆ ಎಂದು ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಹೇಳಿದರು.
ನಗರದಲ್ಲಿಂದು ಮಹದಾಯಿ ಹೋರಾಟದ ಮನವಿ ಸ್ವೀಕರಿಸಿದ ಬಳಿಕ ಮಾಧ್ಯಮದ ಜೊತೆಗೆ ಮಾತನಾಡಿದ ಅವರು, ಹಸಿರು ನ್ಯಾಯಾಧಿಕರಣದ ಅನುಮತಿ ಸಿಗಬೇಕಿದೆ. ಕೇಂದ್ರದ ಅರಣ್ಯ ಮತ್ತು ಪರಿಸರ ಇಲಾಖೆ ಕೆಲ ಸ್ಪಷ್ಟೀಕರಣ ಕೇಳಿದೆ. ರಾಜ್ಯಮಟ್ಟದಲ್ಲಿ ವೈಲ್ಡ್ ಲೈಫ್ ಗೆ ಅನುಮತಿ ಕೊಟ್ಟು ಕೇಂದ್ರಕ್ಕೆ ಕಳಿಸಬೇಕಿದೆ. ರಾಜ್ಯ ಸರ್ಕಾರ ಅನುಮತಿ ಕೊಡುವುದು ಬಾಕಿ ಇದೆ. ಕಳಸಾ ಬಂಡೂರಿ ಯೋಜನೆ ವಿಚಾರದಲ್ಲಿ ಕೇಂದ್ರ ಸರ್ಕಾರ ಸ್ಪಷ್ಟ ನಿಲುವು ಹೊಂದಿದೆ ಎಂದರು.
ಯೋಜನೆ ಜಾರಿಗೆ ನಾವು ಎಲ್ಲ ರೀತಿಯ ತಯಾರಿಯಲ್ಲಿದ್ದೇವೆ.ಟ್ರಿಬ್ಯುನಲ್ ಆದೇಶದ ವಿರುದ್ಧ ಕರ್ನಾಟಕ ಸರ್ಕಾರದ ಜೊತೆ ಗೋವಾ ಸರ್ಕಾರವು ಸುಪ್ರೀಂಕೋರ್ಟ್ ಮೊರೆ ಹೋಗಿದೆ. ನಾವು ಡಿಪಿಎಆರ್ ಅನುಮತಿ ನೀಡಿದ್ದನ್ನು ಗೋವಾ ಸರ್ಕಾರ ಆಕ್ಷೇಪಿಸಿದೆ. ಇದರಲ್ಲಿ ರಾಜಕೀಯದ ಪ್ರಶ್ನೆಯೇ ಇಲ್ಲ. ಸುಪ್ರೀಂ ಕೋರ್ಟ್ ನಲ್ಲಿ ಸಮರ್ಥವಾಗಿ ವಾದ ಮಂಡಿಸಲು ರಾಜ್ಯ ಸರ್ಕಾರಕ್ಕೂ ವಿನಂತಿಸಿದ್ದೇನೆ. ಕರ್ನಾಟಕ ವೈಲ್ಡ್ ಲೈಫ್ ಬೋರ್ಡ್ ನಲ್ಲಿ ಶಿಫಾರಸು ಮಾಡಬೇಕು. ಇದನ್ನು ಕೇಂದ್ರಕ್ಕೆ ಕಳಿಸಿದರೆ ನಾವು ಖಂಡಿತ ಅನುಮತಿ ನೀಡುತ್ತೇವೆ ಎಂದು ಅವರು ಹೇಳಿದರು.
ಕೇಂದ್ರದಿಂದ ಯಾವುದೇ ಮೀನಾ ಮೇಷ ನಡೆಯುತ್ತಿಲ್ಲ. ಗ್ರೀನ್ ಟ್ರಿಬ್ಯುನಲ್ ಅಸ್ತಿತ್ವಕ್ಕೆ ಬಂದ ನಂತರ ಇದಕ್ಕೆ ನಿಬಂಧನೆಗಳು ಹೆಚ್ಚಾಗಿವೆ. ಯೋಜನೆ ಅನುಷ್ಠಾನಕ್ಕೆ ಎಲ್ಲ ರೀತಿಯ ಪ್ರಯತ್ನ ಮಾಡ್ತೇವೆ. ಮಹದಾಯಿ ಯೋಜನೆ ಜಾರಿಗೆ ನಾವು ಬದ್ಧರಿದ್ದೇವೆ ಎಂದು ಹೋರಾಟಗಾರರ ಭೇಟಿಯ ನಂತರ ಪ್ರಹ್ಲಾದ್ ಜೋಶಿ ಹೇಳಿದರು.
Mahadayi Protest: ಮಳೆಯಲ್ಲಿಯೇ ಮಹದಾಯಿ ಹೋರಾಟ: ನೀರಿಗಾಗಿ ಕಿಚ್ಚು ಹೊತ್ತುವುದು ನಿಶ್ಚಿತ…!
Mahadayi River : ಮಹದಾಯಿ ಕಾಮಗಾರಿ ಕೂಡಲೇ ಆರಂಭಿಸುವಂತೆ ಕೇಂದ್ರ ಸಚಿವರ ಮನೆ ಮುಂದೆ ಪ್ರತಿಭಟನೆ..!
Gruha Laxmi ಆಗಸ್ಟ್ 30ಕ್ಕೆ ಮೈಸೂರಿನಲ್ಲಿ ಗೃಹ ಲಕ್ಷ್ಮಿ ಯೋಜನೆಗೆ ಚಾಲನೆ: ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್