ರೋರಿಂಗ್ ಸ್ಟಾರ್ ಶ್ರೀಮುರುಳಿಗಿಂದು ಹುಟ್ಟುಹಬ್ಬ ಸಂಭ್ರಮ. ಬರ್ತ್ ಡೇ ಖುಷಿಯಲ್ಲಿರೋ ಉಗ್ರಂ ಹೀರೋಗೆ ಮದಗಜ ಟೀಂನಿಂದ ಬಿಗ್ ಸರ್ ಪ್ರೈಸ್ ಸಿಕ್ಕಿದೆ. ಶ್ರೀಮುರುಳಿ ನಟಿಸ್ತಿರೋ ಮದಗಜ ಸಿನಿಮಾದ ಫಸ್ಟ್ ಲುಕ್ ಟೀಸರ್ ರಿಲೀಸ್ ಮಾಡಲಾಗಿದೆ. ಕೆಜಿಎಫ್ ಕರ್ತೃ ನಿರ್ದೇಶಕ ಪ್ರಶಾಂತ್ ನೀಲ್ ರಿಲೀಸ್ ಮಾಡಿರೋ ಮದಜಗ ಫಸ್ಟ್ ಲುಕ್ ಟೀಸರ್ ಯೂಟ್ಯೂಬ್ ನಲ್ಲಿ ಧೂಳ್ ಎಬ್ಬಿಸ್ತಿದೆ.
1:42 ಸೆಕೆಂಡ್ ಇರುವ ಟೀಸರ್ ರಿಲೀಸ್‌ನಲ್ಲಿ ರೋರಿಂಗ್ ಸ್ಟಾರ್ ಶ್ರೀ ಮುರುಳಿ ಸಖತ್ ಖಡಕ್ ಲುಕ್ ನಲ್ಲಿ ಕಾಣಿಸಿಕೊಂಡಿದ್ದಾರೆ. ಪಂಚ್ ಡೈಲಾಗ್ಸ್, ಖಡಕ್ ಲುಕ್, ಭರ್ಜರಿ ಆಕ್ಷನ್ ಮೂಲಕ ಮತ್ತೊಮ್ಮೆ ರೌದ್ರವತಾರ ತೋರಿಸಿದ್ದಾರೆ ರೋರಿಂಗ್ ಸ್ಟಾರ್.
ವಾರಾಣಸಿಯಲ್ಲಿ ಶೂಟಿಂಗ್ ಮಾಡಿದ್ದ ಸೀನ್ಸ್ ಅಂತೂ ಅದ್ಭುತವಾಗಿ ಮೂಡಿಬಂದಿದ್ದು, ಸುಡುವ ಹೆಣಗಳ ಮಧ್ಯೆ ಚಿಲ್ಲಂ ಸೇದುವ ಮುರಳಿ ಕೂತು ಸ್ಲೋ ಮೋಶನ್ ಶಾಟ್ ಅಂತೂ ಅಭಿಮಾನಿಗಳಿಗೆ ಕಿಕ್ ಕೊಡ್ತಿದೆ.
ಇನ್ನೂ ಅಯೋಗ್ಯ ಬಳಿಕ ನಿರ್ದೇಶಕ ಮಹೇಶ್ ಕುಮಾರ್ ನಿರ್ದೇಶನ ಮತ್ತೊಮ್ಮೆ ಇಲ್ಲಿ ಅನಾವರಣಗೊಂಡಿದ್ದು, ಶ್ರೀಮುರುಳಿ ಅಭಿಮಾನಿಗಳಿಗಂತೂ ಹಬ್ಬದ ಊಟ ಬಡಿಸಿದಂತಿದೆ. ಉಮಾಪತಿ ಫಿಲ್ಸ್ಮ್ ಬ್ಯಾನರ್ನಡಿ ಉಮಾಪತಿ ಶ್ರೀನಿವಾಸ್ ಗೌಡ ಮದಗಜ ಸಿನಿಮಾ ನಿರ್ಮಿಸ್ತಿದ್ದು, ರೋರಿಂಗ್ ಸ್ಟಾರ್ ಶ್ರೀಮುರುಳಿಗೆ ಜೋಡಿಯಾಗಿ ಆ್ಯಪಲ್ ಬ್ಯೂಟಿ ಆಶಿಕಾ ರಂಗನಾಥ್ ಬಣ್ಣ ಹಚ್ಚಿದ್ದಾರೆ. ಇನ್ನೂಳಿದಂತೆ ಟಿಟೌನ್ ಖಡಕ್ ವಿಲನ್ ಜಗಪತಿಬಾಬು ಶ್ರೀಮುರುಳಿ ಎದುರು ತೊಡೆತಟ್ಟಿ ನಿಲಲ್ಲಿದ್ದಾರೆ.
-ಮೇಘ