www.karnatakatv.net :ಬೆಂಗಳೂರು : ಸುಳ್ಳು ಹೇಳಿ ರಾಜ್ಯದ ಜನತೆಯನ್ನು ಮೂರ್ಖರನ್ನಾಗಿ ಮಾಡಿದ್ದ ಪ್ರತಾಪನನ್ನು ಒಳ್ಳೇ ಹುಡುಗ ಪ್ರಥಮ್ ಭೇಟಿಯಾಗಿದ್ದಾರೆ. ಡ್ರೋಣ್ ಕುರಿತು ಹೊಸದೊಂದು ಆವಿಷ್ಕಾರ ಮಾಡಿದ್ದೇನೆ, ಇದರಿಂದ ದೇಶಕ್ಕೆ ಹೆಮ್ಮೆ ತಂದಿದ್ದೇನೆಂದು ಸುಳ್ಳು ಹೇಳಿಕೊಂಡು ಸಿಕ್ಕಾಪಟ್ಟೆ ಫೇಮ್ ಗಿಟ್ಟಿಸಿಕೊಂಡಿದ್ದ ಪ್ರತಾಪನ ಕಥೆ ಸಿನಿಮಾ ಆಗ್ತಿದೆ. ಬಿಗ್ ಬಾಸ್ ಖ್ಯಾತಿಯ ಪ್ರಥಮ್ , ಡ್ರೋಣ್ ಪ್ರತಾಪನ ಕಥೆಯನ್ನ ಸಿನಿಮಾ ಮಾಡ್ತಿದ್ದಾರೆ. ಈ ಹಿನ್ನೆಲೆಯಲ್ಲಿ ನಿನ್ನೆ ಪ್ರಥಮ್, ಪ್ರತಾಪನನ್ನು ಭೇಟಿಯಾಗಿದ್ದಾರೆ.
ಸಿನಿಮಾಕ್ಕಾಗಿ ಈಗಾಗಲೇ ಪ್ರತಾಪನ ಮ್ಯಾನರಿಸಂ ಸ್ಟಡಿ ಮಾಡ್ತಿರೋ ಪ್ರಥಮ್, ಪ್ರತಾಪನನ್ನ ಭೇಟಿಯಾಗಿ ಮತ್ತಷ್ಟು ಇಂಟರೆಸ್ಟಿಂಗ್ ವಿಚಾರಗಳನ್ನ ಸಂಗ್ರಹಿಸಿದ್ದಾರೆ ಎನ್ನಲಾಗಿದೆ. ಪ್ರತಾಪನನ್ನು ಭೇಟಿಯಾಗಲು ಪ್ರಥಮ್ ಸಾಕಷ್ಟು ಪ್ರಯತ್ನ ಪಟ್ಟಿದ್ರು. ಆದ್ರೆ ಆತ ಈಗ ಸಿಕ್ತೀನಿ, ಆಗ ಸಿಕ್ತೀನಿ, ಇಲ್ಲಿದ್ದೀನಿ ಅಲ್ಲಿದ್ದೀನಿ ಅಂತ ಹೇಳ್ತಾ ತಪ್ಪಿಸಿಕೊಳ್ತಿದ್ದ ಎನ್ನಲಾಗಿದೆ. ಕಡೆಗೂ ಭಾನುವಾರ ಪ್ರತಾಪ್, ಒಳ್ಳೇ ಹುಡುಗನಿಗೆ ದರ್ಶನ ಭಾಗ್ಯ ನೀಡಿದ್ದಾನೆ, ಇನ್ನು ಈ ವಿಚಾರದೊಂದಿಗೆ ಫೋಟೋಗಳನ್ನೂ ಪ್ರಥಮ್ ಟ್ವಿಟ್ಟರ್ ನಲ್ಲಿ ಹಂಚಿಕೊಂಡಿದ್ದು, ನಾನು ಲೈಫಲ್ಲಿ ಕಷ್ಟಪಟ್ಟು ಭೇಟಿ ಮಾಡಿದ್ದು ಈತನನ್ನೇ. ಇದು ಅಪೂರ್ವಸಂಗಮ ಅಂತ ಬರೆದುಕೊಂಡಿದ್ದಾರೆ.
ಕರ್ನಾಟಕ ಟಿವಿ – ಬೆಂಗಳುರು