Friday, November 28, 2025

Latest Posts

ಪ್ರತಿನಿತ್ಯ ಮನೆಯಲ್ಲಿ ಪೂಜೆ ಮಾಡುವಾಗ ಈ ವಿಷಯಗಳ ಬಗ್ಗೆ ಎಚ್ಚರವಹಿಸಿ..!

- Advertisement -

devotional story:

ಹಿಂದೂ ಧರ್ಮದಲ್ಲಿ ದೇವರ ಪೂಜೆಗೆ ವಿಶೇಷ ಸ್ಥಾನವಿದೆ. ಸಾಮಾನ್ಯವಾಗಿ ಎಲ್ಲರ ಮನೆಯಲ್ಲಿ ಪ್ರತಿ ದಿನ ಮುಂಜಾನೆ ಮತ್ತು ಸಂಜೆ ದೇವರ ಪೂಜೆ ಮಾಡುತ್ತಾರೆ .ಆದರೆ ಪೂಜೆ ಮಾಡುವಾಗ ಪೂಜೆಯಲ್ಲಿ ಮನಸ್ಸು ಸಂಪೂರ್ಣ ಕೇಂದ್ರೀಕೃತಗೊಳಿಸುವುದು ಬಹಳ ಮುಖ್ಯವಾಗಿರುತ್ತದೆ ನಮ್ಮನ್ನು ಭೂಮಿಮೇಲೆ ಮನುಷ್ಯರಾಗಿ ಸೃಷ್ಟಿಸಿದ್ದಕ್ಕಾಗಿ ದೇವರಿಗೆ ಪ್ರತಿದಿನ ಕೃತಜ್ಞತೆಯನ್ನು ಸಲ್ಲಿಸುವ ಒಂದು ಸರಳವಾದ ಪ್ರಕ್ರಿಯೆಯಾಗಿದೆ. ಪೂಜೆಮಾಡಬೇಕಾದರೆ ನೀವು ಕೆಲವು ನಿಯಮಗಳನ್ನು ಅನುಸರಿಸಬೇಕು ನಿಯಮದ ಅನುಸಾರ ಪೂಜೆಮಾಡಿದರೆ ಪೂಜಾ ಫಲಗಳು ಖಂಡಿತವಾಗಿ ಲಭಿಸುತ್ತದೆ. ಪೂಜೆಯ ನಂತರವೂ ನಿಮ್ಮ ಮನಸ್ಸು ಗೊಂದಲದಲ್ಲಿದರೆ ಯಾವುದೋ ಚಿಂತೆ ನಿಮ್ಮನು ಕಾಡುತ್ತಿದೆ ಎಂದರ್ಥ ಅಥವಾ ನೀವು ಪೊಜೆ ಸರಿಯಾದ ಕ್ರಮದಲ್ಲಿ ಮಾಡಿಲ್ಲ ಎಂದಾಗಿದೆ. ಕ್ರಮವಾಗಿ ಶ್ರದ್ದೆ ಭಕ್ತಿ ಇಂದ ಪೂಜೆ ಮಾಡದಿದ್ದರೆ ನೀವು ಅಂದುಕೊಂಡ ಕೆಲಸಗಳಲ್ಲಿ ಸರಿಯಾಗಿ ಯಸ್ಸಸು ಕಾಣುವುದಿಲ್ಲ ಹಾಗು ಹಣ ಕೈಯಲ್ಲಿ ನಿಲ್ಲುವುದಿಲ್ಲ. ಹಾಗಾದರೆ ಪೂಜೆ ಮಾಡುವಾಗ ಎಲ್ಲರು ಸಾಮಾನ್ಯವಾಗಿ ಮಾಡುವ ತಪ್ಪುಗಳು ಯಾವುವು ಹಾಗೂ ಪೂಜೆ ಮಾಡುವ ಸರಿಯಾದ ಕ್ರಮ ಯಾವುದು ಎಂದು ತಿಳಿದು ಕೊಳ್ಳೋಣ ಬನ್ನಿ…

ಮನೆಯಲ್ಲಿ ದೇವರ ಕೋಣೆಯು ಈಶಾನ್ಯ(north-east) ದಿಕ್ಕಿಗಿರಬೇಕು ಈ ದಿಕ್ಕಿನಲ್ಲಿ ಪೂಜಾ ಕೋಣೆ ಇದ್ದಾಗ ಪೂರ್ತಿ ಫಲ ನಿಮಗೆ ದೊರೆಯುತ್ತದೆ ಅಥವಾ ನೈಋತ್ಯ(south-west) ದಿಕ್ಕಿನಲ್ಲಿ ದೇವರ ಕೋಣೆಯಿದ್ದರೆ ಪೂಜಾ ಫಲಗಳು ನೀವು ಅಂದು ಕೊಂಡಿದ್ದ ಹಾಗೆ ಸಿಗುವುದಿಲ್ಲ ಪೂಜಿಸಲು ಆರಂಭಿಸುವ ಮುನ್ನ ನೆಲದಮೇಲೆ ಸ್ವಚ್ಛವಾದ ಮಣೆಯೊಂದನ್ನು ಹಾಕಿಕೊಂಡು ಪೂಜೆಯನ್ನು ಆರಂಭಿಸಬೇಕು ಹಾಗು ಹಣೆಯ ಮೇಲೆ ಕುಂಕುಮವನ್ನು ತಪ್ಪದೆ ಇಡಬೇಕು ಹೆಣ್ಣು ಮಕ್ಕಳಾದರೆ ಕೈಯ್ಯಲ್ಲಿ ಬಳೆಗಳು ಹಾಗು ತಲೆಯಲ್ಲಿ ಹೂವನ್ನು ಮುಡಿದಿರಬೇಕು ಪೂಜಾಸಮಯದಲ್ಲಿ ನಿಮ್ಮ ಎಡಭಾಗದಲ್ಲಿ ಗಂಟೆ, ಶಂಖ ಹಾಗೂ ಧೂಪವನ್ನು ಇರಿಸಬೇಕು ಹಾಗು ಬಲ ಭಾಗದಲ್ಲಿ ನೀರಿನ ಕಮಂಡಲ ಮತ್ತು ಪೂಜಾ ಸಾಮಗ್ರಿಗಳನ್ನು ಇರಿಸಬೇಕು ಪೂಜೆಗೆ ಮೊದಲು ನಿಮ್ಮ ದೇಹ ಮತ್ತು ಮನಸ್ಸನ್ನು ಸಿದ್ಧಪಡಿಸುವುದು ಬಹಳ ಮುಖ್ಯವಾಗಿರುತ್ತದೆ ಪೂಜೆ ಮಾಡುವಾಗ ಮಡಿಯುಟ್ಟ ಬಟ್ಟೆಗಳನ್ನು ಮಾತ್ರ ಧರಿಸಬೇಕು ಪೂಜೆಯಲ್ಲಿ ಪುರುಷರು ಧೋತಿ, ಶಾಲು ಮತ್ತು ಮಹಿಳೆಯರು ಸಾಂಪ್ರದಾಯಿಕ ಬಟ್ಟೆಯನ್ನು ಧರಿಸಬೇಕು ತಲೆಗೆ ಸ್ನಾನ ಮಾಡಿದಾಗ ಕೂದಲಿಂದ ನೀರಿಳಿಯುತ್ತಿರಬಾರದು ಕೂದಲು ಒಣಗಿದ ಬಳಿಕವೇ ಪೂಜೆಮಾಡಬೇಕು.

ಪೂಜೆಯನ್ನು ಆರಂಭಿಸುವ ಮುನ್ನ ಮೊದಲು ವಿಗ್ರಹಗಳನ್ನು ಶುದ್ಧಗೊಳಿಸಿ,ಅರಿಶಿನ ಗಂಧ ಕುಂಕುಮವನ್ನು ಹಚ್ಚಿ ದೇವರಿಗೆ ಹೂವಿನ ಅಲಂಕಾರವನ್ನು ಮಾಡಬೇಕು, ನಂತರ ಜೋಡಿ ದೀಪವನ್ನು ಬೆಳಗಬೇಕು ಮೊದಲು ಗಣೇಶನ ಪ್ರಾರ್ಥನೆ ಮಾಡಿ ಗಣೇಶ ಸ್ತೋತ್ರದೊಂದಿಗೆ ಪೂಜೆಯನ್ನು ಪ್ರಾರಂಭಿಸಬೇಕು ನಂತರ ಮರೆಯದೇ ಪಂಚದೇವರ ಪೂಜೆಯನ್ನು ಮಾಡಬೇಕು ಪೂಜೆಯಲ್ಲಿ ಇದು ಬಹಳ ಮುಖ್ಯವಾಗಿರುತ್ತದೆ. ಪಂಚದೇವರೆದ೦ರೆ ವಿಷ್ಣು,ಗಣೇಶ, ಮಹಾದೇವ, ಸೂರ್ಯದೇವ ಹಾಗೂ ದುರ್ಗಾಮಾತೆಯನ್ನು ಸ್ಮರಿಸಿಕೊಂಡು ಪೂಜೆ ಸಲ್ಲಿಸಬೇಕು .ಬಳಿಕ ತಪ್ಪದೆ ಮೆನೆದೇವರ ಪೂಜೆಯನ್ನು ಪ್ರಾರಂಬಿಸಬೇಕು ಶ್ಲೋಕಗಳೊಂದಿಗೆ ಪೂಜೆಯನ್ನು ಮಾಡಿದ ನಂತರ ಧೂಪ ದ್ರವ್ಯ ನೈವೇದ್ಯವನ್ನು ದೇವರಿಗೆ ಅರ್ಪಿಸಬೇಕು ,ಪೂಜೆಯ ಕೊನೆಯಲ್ಲಿ ನೀವು ದೇವರಿಗೆ ಕರ್ಪುರದ ಆರತಿಯನ್ನು ಮಾಡಿ ಪೂಜೆಯನ್ನು ಮುಕ್ತಾಯಗೊಳಿಸಬೇಕು. ದೇವರ ಮನೆ, ದೀಪಗಳು, ದೇವರ ಪೂಜಾ ಸಾಮಗ್ರಿಗಳು ಎಷ್ಟು ಶುದ್ಧವಾಗಿರುತ್ತವೋ ಅಷ್ಟೂ ಶುಭ ಫಲ ದೊರೆಯುತ್ತದ್ದೆ ಹಾಗು ಒಡೆದಿರುವ ವಿಗ್ರಹಗಳು, ಫೋಟೋಗಳನ್ನು ದೇವರ ಕೋಣೆಯಲ್ಲಿ ಇರದಂತೆ ನೋಡಿಕೊಳ್ಳಬೇಕು ,ದೇವರ ಪೂಜೆ ಮಾಡುವಾಗ ಸೋಂಬೇರಿ ತನ, ಸಿಟ್ಟು ಅತಿಯಾದ ಮಾತು,ಹರಟೆ ಇಲ್ಲದೆ ನಿಷ್ಶಬ್ದವಾಗಿ ಪೂಜೆ ಮಾಡಬೇಕು ಹಾಗು ಸ್ತ್ರೀಯರು ತಪದ್ದೇ ತುಳಸೀ ಪೂಜೆ ಮಾಡಬೇಕು,

ದೇವರ ಕೋಣೆಯನ್ನು ಶುಚಿ ಗೋಳಿಸುವಾಗ ಬಟ್ಟೆಯಿಂದ ಶುಚಿಗೊಳಿಸುವುದು ಸೂಕ್ತವಾಗಿದೆ ಹಾಗು ಅರಿಶಿನ ಹಾಕಿದ ನೀರಿನಿಂದ ಶುಚಿ ಗೊಳಿಸಿದರೆ ಆ ಮನೆಯಲ್ಲಿ ದೈವಕಳೆ ವೃದ್ಧಿಸುತ್ತದೆ ಹಾಗು ಹಣದ ಸಮಸ್ಯೆ ನಿವಾರಣೆಯಾಗುತ್ತದೆ ನಂತರ ನೆಲ ಒಣಗುವವರೆಗೂ ನೆಲ ತುಳಿಯಬಾರದು .ದೇವರ ವಿಗ್ರಹಗಳನ್ನು ಮಂಗಳವಾರ, ಶುಕ್ರವಾರದಂದು ಶುದ್ಧಿ ಮಾಡಬಾರದು ಕೆಲವೊಂದು ಅನಿವಾರ್ಯ ಪರಿಸ್ಥಿತಿಗಳಲ್ಲಿ, ಗ್ರಹಣ ಕಾಲದಲ್ಲಿ ಇತ್ಯಾದಿ ಸಮಯ ಸಂದರ್ಭಗಳಲ್ಲಿ ಮಾತ್ರ ಮಾಡಬಹುದು ಪೂಜೆಗೆ ಆಂಜನೇಯ ಸ್ವಾಮಿ ಇರುವ ಘಂಟೆಯನ್ನೇ ಉಪಯೋಗಿಸಿದರೆ ಸೂಕ್ತ ,ದೇವರ ಪೂಜೆಯನ್ನ ಸಂಕಲ್ಪ ಇಲ್ಲದೇ ಮಾಡಬೇಡಿ ಸಂಕಲ್ಪ ಇದ್ದರೆ ನಿಮ್ಮ ಪ್ರಾರ್ಥನೆ ಬೇಗ ಈಡೇರುತ್ತದೆ ಹಾಗು ಮನೆಯ ಹೊಸ್ತಿಲನ್ನು ಪೊರಕೆಯಿಂದ ಗುಡಿಸಬೇಡಿ ಹೊಸ್ತಿಲಲ್ಲಿ ಮಹಾಲಕ್ಷ್ಮೀ ಸಾನಿಧ್ಯ ಇರುತ್ತದೆ ಜಪ ಮಾಡುವಾಗ ಮನಸ್ಸಿನಲ್ಲೇ ಸ್ಮರಿಸಬೇಕು ಜಪದ ನಂತರ ಭೂಮಿಯನ್ನು ಎರಡೂ ಕೈಗಳಿಂದ ಮುಟ್ಟಿ ಕಣ್ಣಿಗೊತ್ತಿಕೊಳ್ಳಬೇಕು.

ಗಣಪತಿ ಪೂಜೆ ,ಮನೆದೇವರ ಪೂಜೆ, ದೇವಿ ಪೂಜೆಯಿಂದ ಮಾತ್ರ ಪೂರ್ಣ ಪೂಜಾಫಲ ಪ್ರಾಪ್ತಿಯಾಗುತ್ತದೆ ಮನೆದೇವರ ಪೂಜೆ ಇಲ್ಲದಿದ್ದರೆ ಯಾವ ದೇವರು ನಮ್ಮ ಮನೆಯನ್ನು ರಕ್ಷಿಸುವುದಿಲ್ಲ ಆದಕಾರಣ ನಾವು ಮುಖ್ಯವಾಗಿ ನಮ್ಮ ಮನೆ ದೇವರನ್ನು ಪೂಜಿಸಬೇಕು.

 

ಋಷಿ ಪತ್ನಿಯಾದ ಶ್ರೀರಾಮನ ಸೋದರಿ :

ಶ್ರೀ ಕೃಷ್ಣನ ಮಗ ಸಾಂಬನ ಬಗ್ಗೆ ನಿಮಗೆಷ್ಟು ಗೊತ್ತು ?

ಮನುಕುಲಕ್ಕೆ ವರದಾನ ಶ್ರೀ ಲಕ್ಷ್ಮಿಕನಕ ಧಾರಾಸ್ತೋತ್ರ೦:

 

- Advertisement -

Latest Posts

Don't Miss