ಯಾದಗಿರಿ : ಬೆಂಗಳೂರಿನಲ್ಲಿ ಮಳೆಯ ಅವಶ್ಯಕತೆ ಇಲ್ಲದಿದ್ದರು ಪ್ರತಿದಿನ ಮಳೆ ಬಂದು ಜನಗಳಿಗೆ ತೊಂದರೆ ಕೊಡುತ್ತಿದೆ ಆದರೆ ಮಳೆಯನ್ನೇ ನಂಬಿರುವ ರೈತಿಗೆ ದಿನೇ ದಿನೇ ನಿರಾಸೆ ಉಂಟಾಗುತ್ತಿದೆ. ಹಾಗಾಗಿ ಮಳೆರಾಯನನ್ನು ಧರೆಗೆ ಉರುಳಿಸಲು ರೈತರು ವಿವಿಧ ರೀತಿಯಲ್ಲಿ ಹರಕೆ ಕಟ್ಟಿಕೊಳ್ಳುತಿದ್ದಾರೆ.ಅದೇ ರೀತಿ ಯಾದಗಿರಿ ಜಿಲ್ಲೆಯ ಬಿ, ಅರಕೆರಾದಲ್ಲಿ ರೈತರು ವಿಭನ್ನವಾಗಿ ಹರಕೆ ಕಟ್ಟಿಕೊಂಡಿದ್ದಾರೆ.
ಯಾದಗಿರಿ ಜಿಲ್ಲೆಯ ಅರಕೆರಾ ಬಿ ಯಲ್ಲಿ ಬೆಟ್ಟದ ಪರಮಾನಂದೀಶ್ವರ ಪೀಠದ ಗುರುಲಿಂಗ ಸ್ವಾಮಿಜಿಗಳ ನೇತೃತ್ವದಲ್ಲಿ ಗ್ರಾಮಸ್ಥರು ಹರಕೆ ನೆರವೇರಿಸಿದರು ಆ ಹರಕೆ ಯಾವುದು ಅಂತೀರಾ ಇಲ್ಲಿದೆ ನೋಡಿ.
ಬೆಟ್ಟದ ಪರಮಾನಂದೀಶ್ವರ ದೇವಸ್ತಾನಕ್ಕೆ ಹಲಗೆ ಡೊಳ್ಳು ಭಜನೆ ಮೇಳದೊಂದಿಗೆ ಪಲ್ಲಕ್ಕಿಯನ್ನು ಮೆರವಣಿಗೆ ಮಾಡಿದರು . ಗ್ರಾಮದ ಮಹಿಳೆಯರು ಹೊಸ ಸೀರೆಯುಟ್ಟು ಬಿದರಿನ ಬುಟ್ಟುಯಲ್ಲಿ ರೊಟ್ಟಟಿ ಚಪಾತಿ ಪುಂಡಿಪಲ್ಯ ಶೇಂಗಾಪುಡಿ ಅನ್ನ ಸಂಭಾರ ಚಿತ್ರಾನ್ನ ಮೊಸರನ್ನು ಸಮೇತ ಕಾಲ್ನಡಿಗೆಯಲ್ಲಿ ಬೆಟ್ಟಕ್ಕೆ ಆಗಮಿಸಿದರು ನಂತರ ಗ್ರಾಮಸ್ಥರೆಲ್ಲ ಸೇರಿಕೊಂಡು ಕೆಲಕಾಲ ಮಳೆಗಾಗಿ ದೇವರಲ್ಲಿ ಪ್ರಾರ್ಥಿಸಿ ಭಜನೆ ಮಾಡಿ ಗ್ರಾಮಸ್ಥರೆಲ್ಲ ಒಟ್ಟಾಗಿ ಊಟ ಮಾಡಿ ಮಹಿಳೆಯರರಿಗೆ ಅರಿಶಿನ ಕುಂಕುಮ ಹಚ್ಚಿದರು
ಸಾಯಂಕಾಲ ಭಜನೆ ಸಮೇತ ಗ್ರಾಮವನ್ನು ಸೇರಿಕೊಂಡರು.
Railway-ಪವರ್‌ಲಿಫ್ಟಿಂಗ್ ಚಾಂಪಿಯನ್‌ಶಿಪ್‌ನಲ್ಲಿ ನೈರುತ್ಯ ರೈಲ್ವೆ ಜಯಶಾಲಿ