Friday, July 4, 2025

Latest Posts

ಸಾರ್ವಜನಿಕ ಜೀವನದಲ್ಲಿ ಮಾತನಾಡುವಾಗ ಯೋಚನೆ ಮಾಡಿ ಮಾತನಾಡಬೇಕು : ಶಾಸಕ ಪ್ರೀತಂಗೌಡ

- Advertisement -

ಹಾಸನ: ಬಿಜೆಪಿ ಶಾಸಕ ತಿಪ್ಪಾರೆಡ್ಡಿ ಆಡಿಯೋ ಬಿಡುಗಡೆ ಪ್ರಕರಣಡಾ ಕುರಿತು ಹಾಸನದಲ್ಲಿ ಶಾಸಕ ಪ್ರೀತಂಗೌಡ ಮಾತನಾಡಿದ್ದು, ನಾನು ತಿಪ್ಪಾರೆಡ್ಡಿಯವರ ವಕ್ತಾರ ಅಲ್ಲಾ ಆಡಿಯೋಗಳ ಸತ್ಯಾ ಸತ್ಯತೆ ಬಗ್ಗೆ ಕೂಡ ಸಾಕಷ್ಟು ಪ್ರಶ್ನೆ ಇರುತ್ತವೆ. ಅವರು ಕಮಿಷನ್ ಕೊಡೋಕು ಮೊದಲೇ ಹೇಳಿದ್ದರೆ ಒಪ್ಪಬಹುದಿತ್ತು, ಕಮಿಷನ್ ಪಡೆಯೋದು ಎಷ್ಡು ತಪ್ಪೊ ಕೊಡೋದು ಅಷ್ಟೇ ತಪ್ಪು. ಕೊಟ್ಟವರದ್ದು ಮೊದಲನೆ ತಪ್ಪು ಪಡೆದವರದ್ದು ಎರಡನೆ ತಪ್ಪು. ಹಾಗಂತಾ ಪಡೆದುಕೊಂಡವರು ಸಾಚಾ ಅಂತಲ್ಲ ಸಾರ್ವಜನಿಕ ಜೀವನದಲ್ಲಿ ಮಾತನಾಡುವಾಗ ಯೊಚನೆ ಮಾಡಿ ಮಾತನಾಡಬೇಕು ಎಂದು ಪ್ರೀತಂಗೌಡ ಅವರು ಹೇಳಿದರು.

ಲೆಫ್ಟಿನೆಂಟ್ ಗವರ್ನರ್ ನಮ್ಮ ಮುಖ್ಯೋಪಾಧ್ಯಾಯರಲ್ಲ, ನಮ್ಮ ಕೆಲಸವನ್ನು ಯಾರು ಪರಿಶೀಲಿಸುತ್ತಾರೆ..? : ಸಿಎಂ ಅರವಿಂದ್ ಕೇಜ್ರಿವಾಲ್

ಯಾವುದೇ ಆಡಿಯೋ ಇದ್ದರೆ ಅದರ ನೈಜತೆ ನೋಡಬೇಕಾಗುತ್ತದೆ. ಗುತ್ತಿಗೆದಾರರ ಸಂಘದ ಪದಾದಿಕಾರಿಗಳು ಬಿಡುಗಡೆ ಮಾಡಿರೊ ಆಡಿಯೊ ಬಗ್ಗೆಯೂ ತಿರುಗೇಟು ನೀಡಿದ್ದಾರೆ. ಮತ್ತೆ ಹಲವು ಶಾಸಕರ ಸಚಿವರ ಆಡಿಯೊ ಇದೆ ಎಂಬ ಹೇಳಿಕೆಗೂ ಆಕ್ರೋಶವನ್ನು ವ್ಯಕ್ತಪಡಿಸಿದ್ದಾರೆ. ಅವರ ಮಾಹಿತಿ ಏನಾದರು ಇದ್ದರೆ ಕೊಡೋಕು ಮೊದಲೇ ಮಾಡಬೇಕಿತ್ತು
ಈಗ ಚುನಾವಣೆ ವೇಳೆಯಲ್ಲಿ ಯಾವ ಉದ್ದೇಶದಿಂದ‌ ಮಾಡುತ್ತಿದ್ದಾರೊ ಗೊತ್ತಿಲ್ಲ. ಈ ಬಗ್ಗೆ ಮುಂದಿನ ದಿನಗಳಲ್ಲಿ ಗೊತ್ತಾಗುತ್ತದೆ ಬೇರೆಯವರದ್ದು ಏನಿದೆ, ಐದು ವರ್ಷಗಳ ಹಿಂದಿನದ್ದು ಏನಾದರೂ ವೀಡಿಯೊ ಇದೆಯಾ ಎನ್ನೋದನ್ನು ಜನ ಕಾಯುತ್ತಿರುತ್ತಾರೆ.

ಚಳಿಗಾಲದಲ್ಲಿ ಬಿಸಿ ನೀರು ಕುಡಿಯುವ ಮೊದಲು ಈ ವಿಷಯಗಳನ್ನು ನೆನಪಿಡಿ..!

ಇಂತಹ ಆಡಿಯೊ ವೀಡಿಯೋಗಳಿಗೆ ಹೆಚ್ಚಿನ ಮಹತ್ವ ಕೊಡೋದು ಬೇಡಾ ಅದು ಯಾವ ಸಂದರ್ಭದಲ್ಲಿ ಏನಾಗಿರುತ್ತೊ ಗೊತ್ತಿರುವುದಿಲ್ಲ. ಯಾರಾರ ಹಣೆಬರಹ ಏನು ಎನ್ನೋದು ಜನರಿಗೆ , ಕ್ಷೇತ್ರದ ಜನರಿಗೆ ಗೊತ್ತಿರುತ್ತೆ. ಅವರ ಬಳಿ ದಾಖಲೆ ಇದ್ದರೆ ಅದನ್ನು ಎಲ್ಲಿಗೆ ಕೊಡಬೇಕೊ ಕೊಡಲಿ. ಕೆಲವು ಮಿಮಿಕ್ರಿ ಕಲಾವಿದರ ಆಡಿಯೊ ಕೂಡ ಇರುತ್ತೆ ಹೇಳೋಕೆ‌ ಬರಲ್ಲ. ಆಡಳಿತ ಇದ್ದಾಗ ವಿಪಕ್ಷಗಳ ಆರೋಪ ಸಹಜ ಇದಕ್ಕೆ ಹೆಚ್ಚಿನ ಮಹತ್ವ ಕೊಡಬೇಕೋ ಬೇಡವೋ ತನಿಖಾ ಸಂಸ್ಥೆ ತೀರ್ಮಾನ ಮಾಡುತ್ತದೆ ಎಂದು ಹೇಳಿದರು.

ದಿನಕ್ಕೆ ಎಷ್ಟು ಮೊಟ್ಟೆ ತಿನ್ನಬೇಕು.. ತಜ್ಞರು ಹೇಳೋದೇನು..?

ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಮಹಿಳಾ ಮೀಸಲಾತಿ ಹೆಚ್ಚಳ : ಸಿದ್ದರಾಮಯ್ಯ

- Advertisement -

Latest Posts

Don't Miss