Wednesday, August 20, 2025

Latest Posts

ಜೆಡಿಎಸ್ ವಿರುದ್ದ ಬಿಜೆಪಿ ಶಾಸಕ ಪ್ರೀತಂಗೌಡ ವಾಗ್ದಾಳಿ

- Advertisement -

political news :

ಹಾಸನದಲ್ಲಿ ಜೆಡಿಎಸ್ ವಿರುದ್ದ ಬಿಜೆಪಿ ಶಾಸಕ ಪ್ರೀತಂಗೌಡ ವಾಗ್ದಾಳಿ ನಡೆಸಿದ್ದಾರೆ. ಕೇಂದ್ರದಲ್ಲಿ ಬಿಜೆಪಿ ಬರುತ್ತೆ, ರಾಜ್ಯದಲ್ಲೂ ಬಿಜೆಪಿ‌ ಬರುತ್ತೆ.  ಎರಡು ಸರ್ಕಾರ ಇದೇ ಇರುತ್ತೆ. ಇದೇ ಹಾಸನ ಎಂಎಲ್‌ಎ ಇರ್ತಾರೆ, ಅದೇ ಮುಖ್ಯಮಂತ್ರಿ, ಅದೇ ಪ್ರಧಾನಮಂತ್ರಿ ಇರ್ತಾರೆಮೂರು ತಿಂಗಳಲ್ಲಿ ಏನು ಬದಲಾವಣೆ ಆಗೋದಿಲ್ಲ, ಆ ಕಲ್ಪನೆಯಿಂದ ಹೊರಗೆ ಬರ್ತಾರೆ. ಜಿಲ್ಲೆಯಲ್ಲಿನೇ ಎಲ್ಲನೂ ಕಿತ್ತೋಗ್ತಿದೆ, ಇನ್ನ ರಾಜ್ಯ, ದೇಶದ ಬಗ್ಗೆ ಯಾಕೆ ಯೋಚನೆ ಮಾಡ್ಬೇಕು. ಫಸ್ಟ್ ಅರಸೀಕೆರೆ, ಹಾಸನ ಸರಿಮಾಡಿಕೊಳ್ಳಲು ಹೇಳಿ, ಆಲೂರು-ಸಕಲೇಶಪುರ, ಬೇಲೂರು ಸರಿಮಾಡಿಕೊಳ್ಳಲು ಹೇಳಿ  ಆಮೇಲೆ ರಾಜ್ಯ ದೇಶ ಎಲ್ಲದೂ ಸರಿಮಾಡಿಕೊಳ್ಳಲ್ಲಿ. ಇದುಏಳಕ್ಕೆ ಆರು ಇತ್ತಲ್ಲ, ಅದರಲ್ಲಿ ಮೂರಾದ್ರು ಉಳುಸಿಕೊಳ್ಳಲಿ, ಆಮೇಲೆ ಉಳಿದಿದ್ದನ್ನು ಮಾತನಾಡಲಿ ಎಂದಿದ್ದಾರೆ.

ಜ.21 ರಂದು ಹಾಸನ ಕಾಂಗ್ರೆಸ್‌ನ ಪ್ರಜಾಧ್ವನಿ ಕಾರ್ಯಕ್ರಮ ವಿಚಾರವಾಗಿ  ಪ್ರೀತಂಗೌಡ ಮಾತನಾಡಿ, ರಾಜಕೀಯ ಪಕ್ಷಗಳು ತಮ್ಮದೇ ಆದ ತಂತ್ರ ಮಾಡಿಕೊಂಡು ಇಡೀ ರಾಜ್ಯವನ್ನು ಪ್ರವಾಸ ಮಾಡ್ತಿದೆ. ಒಂದು ಭಾಗವಾಗಿ ಕಾಂಗ್ರೆಸ್‌ನವರು ಹಾಸನದಲ್ಲಿ ಕಾರ್ಯಕ್ರಮ ಆಯೋಜನೆ ಮಾಡಿದ್ದಾರೆ. ಅವರು ಏನೇನ್ ಮಾಡ್ತಾರೆ ಅದನ್ನು ಮಾಡಲಿ ಎಂದರು.

ಹಾಸನ ಜಿಲ್ಲೆಯಲ್ಲಿ ನೇರವಾದ ಸ್ಪರ್ಧೆ ಜೆಡಿಎಸ್ ಮತ್ತು ಬಿಜೆಪಿ ನಡುವೆ ವಿಚರವಾಗಿ ಪ್ರತಿಕ್ರಿಯಿಸಿದ್ದೂ, ಶಿವಲಿಂಗೇಗೌಡರು ಕಾಂಗ್ರೆಸ್‌ಗೆ ಹೋದರೆ ಅರಸೀಕೆರೆಯಲ್ಲಿ ಕಾಂಗ್ರೆಸ್-ಬಿಜೆಪಿ ನಡುವೆ ನೇರ ಹಣಾಹಣಿ ಆಗಬಹುದು.ಅದನ್ನು ಬಿಟ್ಟು ಉಳಿದ ಎಲ್ಲಾ ಕ್ಷೇತ್ರಗಳಲ್ಲೂ ಜೆಡಿಎಸ್ ಬಿಜೆಪಿ ನಡುವೆ ಹಣಾಹಣಿ ಇದೆ. ಅರಕಲಗೂಡಿನಲ್ಲಿ ತ್ರಿಕೋನ ಸ್ಪರ್ಧೆ ಆಗುವಂತಹ ಅವಕಾಶಯಿದೆ.ಬಿಜೆಪಿ ಅಲ್ಲೂ ಕೂಡ ಉತ್ತಮವಾದಂತಹ ಸಾಧನೆ ಮಾಡುತ್ತೆ. ಅಷ್ಟು ಬಿಟ್ಟು ಇನ್ನು ಉಳಿದ ಎಲ್ಲಾ ಕಡೆ ಬಿಜೆಪಿ ಗೆಲ್ಲೋ ಕಡೆ ಬಿಜೆಪಿ ಮತ್ತು ಜನತಾದಳಕ್ಕೆ ನೇರ ಸ್ಪರ್ಧೆ ಇದೆ ಎಂದಿದ್ದಾರೆ.

ಅಂತಿಮ ಹಂತ ತಲುಪಿದ ವಿಮಾನ ನಿಲ್ದಾಣ ಕಾಮಗಾರಿ!

ಜಿಲ್ಲಾ ಕಾರಾಗೃಹದ ಮೇಲೆ ಪೊಲೀಸರ ದಾಳಿ

ತುಮಕೂರಿನಲ್ಲಿ ಮಹಿಳಾ ಮೋರ್ಚಾ ಸಭೆ

- Advertisement -

Latest Posts

Don't Miss