ಹಾಸನ: ಶ್ರೀನಗರಕ್ಕೆ ರಾತ್ರಿ ವೇಳೆ ಶಾಸಕ ಪ್ರೀತಂಗೌಡ ಭೇಟಿ ನೀಡಿದ್ದು, ಸ್ಥಳೀಯರನ್ನು ಉದ್ದೇಶಿಸಿ ಭಾಷಣ ಮಾಡಿದ್ದಾರೆ. ಮುಸ್ಲಿಂರು ಹೆಚ್ಚಿರುವ ಶ್ರೀನಗರ ಬಡಾವಣೆಯಲ್ಲಿ ನನಗೆ ಮತ ಹಾಕುವಂತೆ ಪರೋಕ್ಷವಾಗಿ ಬೆದರಿಕೆ ಹಾಕಿದ್ದಾರೆ. ಯಾರು ಕೆಲಸ ಮಾಡಿರ್ತಾರೆ ಅವರಿಗೆ ಓಟು ಹಾಕಬೇಕು. ಬಾಯಲ್ಲಿ ಅಣ್ಣಾ ಅಂತ ಹೇಳಿ ಕೊನೆಗೆ ನಾವು ಬಿಜೆಪಿಗೆ ಓಟು ಹಾಕಲ್ಲ ಅಂತ ಹೇಳಿದರೆ ಕೆಲಸ ಮಾಡಿರೋರಿಗೆ ಕೋಪ ಬರುತ್ತೆ. ನೀವು ಬೆಳಿಗ್ಗೆಯಿಂದಲೂ ಕೂಲಿ ಹೋಗೋರು ಅಂತಿರಾ, ಸಂಜೆ ಕೂಲಿ ಕೊಡದಿದ್ದರೆ ಸುಮ್ಮನೆ ಬಿಡ್ತಿರಾ? ಹಾಗೇ ನಾನು ಕೆಲಸ ಮಾಡಿ ಓಟು ಕೇಳುತ್ತಿದ್ದೇನೆ ನೀವು ನನಗೆ ಓಟು ಹಾಕದೇ ಬೇರೆಯವರಿಗೆ ಹಾಕುತ್ತೇನೆ ಎಂದರೆ ನಾನು ಸುಮ್ಮನಿರುವುದಿಲ್ಲ ಎಂದು ಪರೋಕ್ಷವಾಗಿ ಬೆದರಿಕೆ ಹಾಕಿದ್ದಾರೆ.
ರಮ್ಯಾ ಬರ್ತಡೇ ಸೆಲೆಬ್ರಿಟಿಗಳ ಸ್ಪೆಷಲ್..
ನಾನು ಅರ್ಥ ಆಗುವ ರೀತಿಯಲ್ಲಿ ಎಲ್ಲರಿಗೂ ಹೇಳುತ್ತಿದ್ದೇನೆ ನಮ್ಮ ಮಸ್ಲಿಂ ಸಹೋದರರನ್ನು ಯಾವಗಲೂ ಪ್ರಾಮಾಣಿಕವಾಗಿ, ಪ್ರೀತಿಯಿಂದ ಕಾಣುತ್ತೇನೆ. ಆದರೆ ನಾನು ಕೆಲಸ ಮಾಡಿದಾಗಲೂ ನೀವು ಸಹಾಯ ಮಾಡಿಲ್ಲಾ ಅಂದ್ರೆ, ಇವರಿಗೆ ಎಷ್ಟು ಕೆಲಸ ಮಾಡಿದ್ರೂ ಅಷ್ಟೇ ನಮ್ಮ ಹಣೆಬರಹ ಬದಲಾಗಲ್ಲ ಅಂದುಕೊಂಡು ಈ ಕಡೆ ತಿರುಗಿಯೂ ನೋಡಬಾರದು ಎಂಬ ನಿರ್ಧಾರಕ್ಕೆ ಬರುತ್ತೇನೆ. ಹಾಗಾಗದಿರುವಂತೆ ನೋಡಿಕೊಳ್ಳುವ ಜವಾಬ್ದಾರಿ ನಿಮ್ಮದು. ಮೂರು ಸಾರಿ ನನಗೆ ಕೈಕೊಟ್ಟಿದ್ದಿರಿ, ನನ್ನ ಎಂಎಲ್‌ಎ ಚುನಾವಣೆಯಲ್ಲಿ ಓಟು ಹಾಕಿಲ್ಲ, ಕೌನ್ಸಿಲರ್ ಚುನಾವಣೆಯಲ್ಲಿ ಓಟು ಹಾಕಿಲ್ಲ, ಎಂಪಿ ಚುನಾವಣೆಯಲ್ಲಿ ಓಟು ಹಾಕಿಲ್ಲ ಈಗ ಮತ್ತೆ ಐದು ವರ್ಷದ ನಂತರ ನನ್ನ ಚುನಾವಣೆ ಬರುತ್ತಿದೆ ಈ ಸಂದರ್ಭದಲ್ಲಿ ನೀವೇನಾದರೂ ಕೈ ಕೊಟ್ಟರೆ ನಾನು ಕೈ, ಕಾಲು ಕೊಡುತ್ತೇನೆ. ಮನೆಗೆ ಬಂದರೆ ಕಾಫಿ ಕೊಟ್ಟು ಕಳುಹಿಸುತ್ತೇನೆ ಯಾವ ಕೆಲಸವನ್ನೂ ಮಾಡವುದಿಲ್ಲ. ರಸ್ತೆ, ಚರಂಡಿ, ನೀರು ಕೊಡುತ್ತೇನೆ ನನ್ನ ಧರ್ಮ ಅದು, ಒಬ್ಬ ಶಾಸಕನಾಗಿ ಮಾಡಬೇಕು ಮಾಡುತ್ತೇನೆ. ಇನ್ನುಳಿದಂತೆ ಯಾವ ಕೆಲಸವನ್ನು ವೈಯುಕ್ತಿಕವಾಗಿ ಮಾಡುವುದಿಲ್ಲ. ಇವತ್ತೇ ಎಲ್ಲರೂ ತೀರ್ಮಾನ ಮಾಡಿ ಶಾಸಕರಿಗೆ ಒಂದೂವರೆ ಸಾವಿರ ಓಟು ಕೊಡುತ್ತೇನೆ ಅಂದರೆ ಇಲ್ಲಿಂದ ಹೋರಡುತ್ತೇನೆ ಹತ್ತು ನಿಮಿಷ ಚರ್ಚೆ ಮಾಡಿ ಹೇಳಿ ಎಂದು ಪ್ರೀತಂ ಗೌಡ ಹೇಳಿದರು.