ಹಾಸನ: ಶ್ರೀನಗರಕ್ಕೆ ರಾತ್ರಿ ವೇಳೆ ಶಾಸಕ ಪ್ರೀತಂಗೌಡ ಭೇಟಿ ನೀಡಿದ್ದು, ಸ್ಥಳೀಯರನ್ನು ಉದ್ದೇಶಿಸಿ ಮಾತನಾಡಿದ್ದಾರೆ. ಶ್ರೀನಗರ ಜನರನ್ನು ಓಟು ಹಾಕುವಂತೆ ಕೇಳುತ್ತಾ ದೊಡ್ಡಗೌಡರ ಕುಟುಂಬದ ವಿರುದ್ಧ ವಾಗ್ದಾಳಿ ನಡೆಸಿದರು. ನನಗೂ ಜನ ಇರ್ತಾರೆ ಇಲ್ಲಿ ಇರುವಂತಹವರು, ಅವರಿಗೆ ಮಾಡಬೇಡಿ ನಾನು ಇದೆಲ್ಲಾ ಮಾಡಿಕೊಡುತ್ತೇನೆ ಅಂತಾರೆ. ಮಾಡಿಕೊಡುತ್ತೇನೆ ಅಂತ ಹೇಳುವವರ ಮನೆಯಲ್ಲಿ ಮೂರು ಸಾರಿ ಮುಖ್ಯಮಂತ್ರಿ ಆಗಿದ್ದರು. ದೊಡ್ಡಗೌಡ್ರು ಒಂದು ಸಾರಿ, ಕುಮಾರಣ್ಣ ಎರಡು ಸಾರಿ ಮುಖ್ಯಮಂತ್ರಿ ಆಗಿದ್ದರು, ರೇವಣ್ಣ ಅವರು ನಾಲ್ಕು ಸಾರಿ ಮಂತ್ರಿಯಾಗಿದ್ದರು. ಯಾವತ್ತಾದರೂ ಶ್ರೀನಗರಕ್ಕೆ ಬಂದಿದರಾ? ಎಂದು ಶಾಸಕ ಜನರಿಗೆ ಪ್ರಶ್ನೆ ಮಾಡಿದರು.
ಹಾಸನದ ಶ್ರೀನಗರಕ್ಕೆ ರಾತ್ರಿ ಶಾಸಕ ಪ್ರೀತಂಗೌಡ ಭೇಟಿ
ಎಲ್ಲವನ್ನೂ ವಿವರವಾಗಿ ಹೇಳಿದ್ದೇನೆ ಅವರು ಬಂದಾಗ ಎಲ್ಲ ವಿಷಯವನ್ನು ಹೇಳಲು ರೆಡಿಯಾಗಿರಿ.ನಾನು ಎಂಎಲ್‌ಎ ಆದ ನಾಲ್ಕು ವರ್ಷದಲ್ಲಿ ನಿಮಗೆ ಎಲ್ಲಾ ಕೆಲಸವನ್ನೂ ಮಾಡಿ ಕೊಟ್ಟಿದ್ದೇನೆ. ಓಟು ಹಾಕದಿದ್ದರೆ ಯುಜಿಡಿ ಕಾಮಗಾರಿ ಮಾಡವುದಿಲ್ಲ ಅಂತ ನೇರವಾಗಿ ಶಾಸಕ ಪ್ರೀತಂಗೌಡ ಹೇಳಿದರು. ನಾನು ಕೆಲಸ ಮಾಡುತ್ತೇನೆ ಎಂದು ಓಟು ಕೇಳಲು ಅವರು ಬರುತ್ತಾರೆ. ಇಲ್ಲಿಯವರೆಗೂಏನ್ ಮಾಡ್ತಿದ್ರು ಪ್ರಧಾನಮಂತ್ರಿ ಆಗಿದ್ದವರು, ಮೂರು ಸಾರಿ ಮುಖ್ಯಮಂತ್ರಿ ಆಗಿದ್ದವರು, ನಾಲ್ಕು ಭಾರಿ ಮಂತ್ರಿಯಾಗಿದ್ದವರು? ಈಗ ಕೆಲಸ ಮಾಡಿ ಕೋಡುತ್ತೇನೆ ಎಂದು ಹೇಳುತ್ತಾರೆ ಅವರಿಗೆ ಯಾವ ಅಧಿಕಾರವೂ ಇಲ್ಲಾ ಎಂದು ಶಾಸಕ ಪ್ರೀತಂಗೌಡ ಗೌಡರ ಕುಟುಂಬದ ವಿರುದ್ಧ ಮಾತನಾಡಿದ್ದಾರೆ.