State News:
ಶಾಸಕ ಪ್ರೀತಮ್ ಗೌಡ ಅವರಿಗೆ ಪ್ರಶಾಂತ್ ನಾಗರಾಜ್ ಮೃತಪಟ್ಟ ಸಂಧರ್ಭದಲ್ಲಿ ಇಲ್ಲದ ಅನುಕಂಪ ಈಗೇಕೆ, ಅವರ ಅನುಕಂಪದ ಹಿಂದೆ ಕೀಳು ಮಟ್ಟದ ದುರುದ್ದೇಶ ಇದೆ ಎಂದು ಜಿಲ್ಲಾ ಪಂಚಾಯಿತಿ ಮಾಜಿ ಉಪಾಧ್ಯಕ್ಷ ಎಚ್. ಪಿ ಸ್ವರೂಪ್ ಹೇಳಿದರು
ನಗರದಲ್ಲಿ ಸುದ್ದಿಗಾರರೊಂದಿಗೆ ಇಂದು ಮಾತನಾಡಿದ ಅವರು, ನಗರಸಭೆ ಉಪ ಚುನಾವಣೆಗೆ ಪ್ರಶಾಂತ್ ನಾಗರಾಜ್ ಕುಟುಂಬದ ಯಾರಾದರೂ ಸ್ಪರ್ಧಿಸಿದರೆ ಬಿಜೆಪಿ ವತಿಯಿಂದ ಸ್ಪರ್ಧಿಯನ್ನು ಹಾಕುವುದಿಲ್ಲ ಎಂಬ ಶಾಸಕ ಪ್ರೀತಂ ಗೌಡ ಅವರ ಹೇಳಿಕೆ ಕೀಳು ಮಟ್ಟದ ರಾಜಕೀಯದ ಪರಮಾವಧಿ ಎಂದರು
ದಿವಂಗತ ಪ್ರಶಾಂತ್ ನಾಗರಾಜ್ ಈ ಹಿಂದೆ ಜೆಡಿಎಸ್ ನಿಂದಾ ಸ್ಪರ್ಧಿಸಿ ನಗರಸಭೆ ಸದಸ್ಯರಾಗಿದ್ದರು ಇದೀಗ ಅವರ ಸಹೋದರ ನವೀನ್ ಅವರನ್ನು ಜೆಡಿಎಸ್ ವತಿಯಿಂದ ಕಣಕ್ಕೆ ಇಳಿಸಲು ತೀರ್ಮಾನಿಸಲಾಗಿದೆ ಎಂದ ಅವರು ಶಾಸಕ ಪ್ರೀತಂ ಗೌಡ ಪ್ರಶಾಂತ್ ನಾಗರಾಜ್ ಅವರ ಕುಟುಂಬದ ಮೇಲೆ ಜನರಿಗೆ ಇರುವ ಅನುಕಂಪವನ್ನು ದುರ್ಬಳಕೆ ಮಾಡಿಕೊಳ್ಳಲು ಹುನ್ನಾರ ನಡೆಸಿದ್ದಾರೆ ಎಂದರು
ಪ್ರಶಾಂತ್ ನಾಗರಾಜ್ ಮೃತಪಟ್ಟ ಸಂಧರ್ಭದಲ್ಲಿ ಕ್ಷೇತ್ರದ ಶಾಸಕರಾಗಿ ಸೌಜನ್ಯಕ್ಕೂ ಅವರ ಕುಟುಂಬಕ್ಕೆ ಭೇಟಿ ನೀಡಿ ಸಾಂತ್ವಾನ ಹೇಳುವ ಕೆಲಸ ಮಾಡಿಲ್ಲ ಸಾವಿನ ವಿಚಾರದಲ್ಲಿಯೂ ರಾಜಕೀಯ ಮಾಡಿದ ಪ್ರೀತಂ ಗೌಡರಿಗೆ ಚುನಾವಣೆ ಹಿನ್ನೆಲೆಯಲ್ಲಿ ಆರ್.ಆರ್ ನಾಗರಾಜ್ ಕುಟುಂಬದ ಮೇಲೆ ಮೂಡಿರುವ ಅನುಕಂಪದ ಹಿಂದೆ ವೈಯಕ್ತಿಕ ಹಿತಾಸಕ್ತಿ ಇದ್ದು, ಬಿಜೆಪಿ ಅಭ್ಯರ್ಥಿ ಸ್ಪರ್ಧಿಸಿದರೆ ಸೋಲುವ ಭೀತಿಯಿಂದ ಈ ರೀತಿಯ ಹೇಳಿಕೆ ನೀಡುತ್ತಿದ್ದಾರೆ ಎಂದು ಆರೋಪಿಸಿದರು
ಶಾಸಕರಿಗೆ ಇದೀಗ ಏಕೀಕಿ ಪ್ರಶಾಂತ್ ಕುಟುಂಬದ ಮೇಲೆ ಅನುಕಂಪ ತೋರುತ್ತಿದ್ದಾರೆ ಆದರೆ, ಈ ಹಿಂದೆ ಪ್ರಶಾಂತ್ ಬದುಕಿದ್ದಾಗ ಅವರ ಮೇಲೆ ಅನೇಕ ಬಾರಿ ಸುಳ್ಳು ಕೇಸುಗಳನ್ನು ದಾಕಲಿಸಿ ಅವರಿಗೆ ಇಲ್ಲದ ಕಿರುಕುಳ ನೀಡಿದ್ದು, ಅವರ ಅಂಗಡಿ ವಿಚಾರವಾಗಿ ಯು ಸಾಕಷ್ಟು ತೊಂದರೆ ನೀಡಿದ್ದು ಶಾಸಕರು ಪ್ರಶ್ನಿಸಿದ್ದಾರೆ ಏ ಎಂದು ಪ್ರಶ್ನಿಸಿದರು.ನಗರಸಭಾ ಸದಸ್ಯ ಮಹೇಶ್, ವಿದ್ಯಾ ನಗರ ಸುಮಂತ್ , ದಯಾನಂದ್ ಇತರರು ಉಪಸ್ಥಿತರಿದ್ದರು.
ಹಾಸನ : ಕಟ್ಟಡ ಕಾರ್ಮಿಕರಿಂದ ಕಾರ್ಮಿಕ ಇಲಾಖೆಗೆ ಮುತ್ತಿಗೆ ಆಕ್ರೋಶ, ಪ್ರತಿಭಟನೆ
ಪರೀಕ್ಷಾರ್ಥಿಗಳ ಕಣ್ಣೀರು…?! ಗೊಂದಲದ ಗೂಡಾಯಿತು ಅರ್ಹತಾ ಪರೀಕ್ಷೆ ಎನ್.ಇ.ಟಿ…!




