Film News:
‘ಕ್ವಾಟ್ಲೆ’ ಸಿನಿಮಾ ಮೂಲಕ ನಿರ್ದೇಶಕಿಯಾಗಿ ಚಿತ್ರರಂಗಕ್ಕೆ ಪರಿಚಿತರಾಗಿದ್ದ ಜೆ ಚಂದ್ರಕಲಾ(JCK) ಸಾರಥ್ಯದಲ್ಲಿ ತಯಾರಾಗಿರುವ ಆಶಿಕಿ ಸಿನಿಮಾ ಬಿಡುಗಡೆ ಹೊಸ್ತಿಲಿನಲ್ಲಿ ನಿಂತಿದೆ. ಈಗಾಗಲೇ ಸೆನ್ಸಾರ್ ಪಾಸಾಗಿರುವ ಈ ಚಿತ್ರದ ಟ್ರೇಲರ್ ಅನಾವರಣಗೊಂಡಿದೆ. ಪ್ರೇಮಕಾವ್ಯ ಹೊತ್ತು ಬಂದಿರುವ ಟ್ರೇಲರ್ ಝಲಕ್ ನಲ್ಲಿ ಅದ್ಭುತ ನಿರೂಪಣೆ, ಕಣ್ಣಿಗೆ ಮುದ ನೀಡುವ ಲೋಕೇಷನ್ಸ್, ತಾರಾಬಳಗದ ಅಭಿನಯ ಎಲ್ಲವೂ ಸೊಗಸಾಗಿ ಮೂಡಿ ಬಂದಿದೆ.
ಇದೇ 14 ಆಶಿಕಿ ಹಾಡುಗಳ ಮೆರವಣಿಗೆ
ಟ್ರೇಲರ್ ಬಿಡುಗಡೆ ಮಾಡುವ ಮೂಲಕ ಪ್ರಚಾರ ಕಾರ್ಯಕ್ಕೆ ಮುನ್ನುಡಿ ಬರೆದಿರುವ ಆಶಿಕಿ ಬಳಗ ಇದೇ 14ರಂದು ಆಡಿಯೋ ಬಿಡುಗಡೆಗೆ ಮಾಡಲು ತಯಾರಿ ನಡೆಸಿದೆ. ಈಗಾಗಲೇ ಚಿತ್ರದ ಹಾಡಿನ ತುಣುಕುಗಳನ್ನು ನೋಡಿ ಥ್ರಿಲ್ ಆಗಿರುವ ಸಂಗೀತ ಪ್ರಿಯರು ಹಾಡುಗಳನ್ನು ಕಣ್ತುಂಬಿಕೊಳ್ಳಲು ಎಕ್ಸೈಟ್ ಆಗಿದ್ದಾರೆ.
ಮ್ಯೂಸಿಕಲ್ ಲವ್ ಸ್ಟೋರಿ ಜೊತೆಗೆ ತ್ರಿಕೋನ ಪ್ರೇಮಕಥೆ ಹೊತ್ತ ‘ಆಶಿಕಿ’ ಚಿತ್ರದಲ್ಲಿ ಸಾಕಷ್ಟು ವರ್ಷ ಮಾಧ್ಯಮ ರಂಗದಲ್ಲಿ ಸಿನಿಮಾ ಪತ್ರಕರ್ತರಾಗಿ ಸೇವೆ ಸಲ್ಲಿಸಿರುವ ಸಂದೀಪ್ ಕುಮಾರ್, ಪ್ರದೀಪ್ ರಾಜ್ ನಾಯಕರಾಗಿ ಅಭಿನಯಿಸಿದ್ದು, ನಾಯಕಿಯಾಗಿ ಐಶ್ವರ್ಯ ಸಿಂಧೋಗಿ ಬಣ್ಣ ಹಚ್ಚಿದ್ದಾರೆ. ಗುರುಪ್ರಸಾದ್, ಸುಚೇಂದ್ರ ಪ್ರಸಾದ್, ತುಳಸಿ ಶಿವಮಣಿ, ಪ್ರಮೋದಿನಿ ಹಿರಿಯ ತಾರಾಬಳಗ ಚಿತ್ರದಲ್ಲಿದೆ. ಚಿತ್ರದಲ್ಲಿ ಒಟ್ಟು ಏಳು ಹಾಡುಗಳಿದ್ದು ಪ್ರತಿ ಹಾಡುಗಳು ಡಿಫ್ರೆಂಟ್ ಆಗಿ ಮೂಡಿಬಂದಿವೆ.
ಕುಲು ಮನಾಲಿ, ಕೇರಳ, ಆಂಧ್ರಪ್ರದೇಶ, ಪಂಜಾಬ್, ಚಂಡೀಗಡ, ಚಿಕ್ಕಮಗಳೂರು, ಆಗ್ರಾ ಸೇರಿದಂತೆ ದೇಶದ ಹಲವು ಭಾಗಗಳಲ್ಲಿ ಚಿತ್ರವನ್ನು ಸೆರೆ ಹಿಡಿಯಲಾಗಿದೆ. ಶ್ರೀ ಲಕ್ಷ್ಮೀ ನರಸಿಂಹ ಮೂವೀನ್ ಬ್ಯಾನರ್ ನಡಿ ನಿರ್ಮಾಣವಾಗಿರುವ ಈ ಚಿತ್ರಕ್ಕೆ ಜಿ. ಚಂದ್ರಶೇಖರ್ ಬಂಡವಾಳ ಹೂಡಿದ್ದು, ರಾಜರತ್ನ, ನಿತಿನ್ ಅಪ್ಪಿ ಛಾಯಾಗ್ರಾಹಣ, ಲಿಯೋ ಸಂಗೀತ ನಾಗೇಂದ್ರ ಅರಸ್ ಸಂಕಲನ ಚಿತ್ರಕ್ಕಿದೆ. ಇತ್ತೀಚೆಗಷ್ಟೇ ಸೆನ್ಸಾರ್ ಪಾಸಾಗಿರುವ ಆಶಿಕಿ ಸಿನಿಮಾ ದಸರಾಗೆ ತೆರೆಗೆ ಬರಲು ಸಜ್ಜಾಗಿದೆ.