Thursday, November 21, 2024

Latest Posts

Press Meet; ಹುಬ್ಬಳ್ಳಿಯಲ್ಲಿ ಶಾಸಕ ಅರವಿಂದ್ ಬೆಲ್ಲದ, ಮಹೇಶ್ ಟೆಂಗಿನಕಾಯಿ ಜಂಟಿ ಸುದ್ದಿಗೋಷ್ಠಿ

- Advertisement -

ಹುಬ್ಬಳ್ಳಿ: ಹುಬ್ಬಳ್ಳಿಯ ಚೆನ್ನಮ್ಮ (ಈದ್ಗಾ) ಮೈದಾನದಲ್ಲಿ ಪ್ರತಿಷ್ಠಾಪನೆ ಮಾಡಿರುವ ಗಣೇಶ ವಿಸರ್ಜನೆ ಸೆ.21 ರಂದು ನಡೆಯಲಿದ್ದು, ಪಕ್ಷದ ಹಲವು ನಾಯಕರು ವಿಸರ್ಜನೆಯಲ್ಲಿ ಭಾಗವಹಿಸಲಿದ್ದಾರೆ. ಈ ಮೂಲಕ ಅದ್ದೂರಿ ವಿಸರ್ಜನಾ ಮೆರವಣಿಗೆ ಹಮ್ಮಿಕೊಳ್ಳಲಾಗಿದೆ ಎಂದು ಶಾಸಕ ಮಹೇಶ ತೆಂಗಿನಕಾಯಿ ಹಾಗೂ ಅರವಿಂದ ಬೆಲ್ಲದ ಹೇಳಿದರು.

ನಗರದಲ್ಲಿಂದು ಜಂಟಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಅಂದು ಬೆಳಿಗ್ಗೆ 11.45 ಕ್ಕೆ ಮೆರವಣಿಗೆ ಆರಂಭ ಆಗಲಿದ್ದು, ವಿಜಯಪುರ ಶಾಸಕ ಬಸನಗೌಡ ಪಾಟೀಲ್ ಯತ್ನಾಳ ಹಾಗೂ ಮಾಜಿ ಸಚಿವ ಸಿಟಿ ರವಿ ಸೇರಿದಂತೆ ಇನ್ನಿತರ ನಾಯಕರು ಈ ಮೆರವಣಿಗೆಯಲ್ಲಿ ಭಾಗವಹಿಸಲಿದ್ದಾರೆ ಎಂದರು.

ಮಹಾನಗರ ಪಾಲಿಕೆಯು ಚೆನ್ನಮ್ಮ ಮೈದಾನದಲ್ಲಿ ಮೂರು ದಿನಗಳ ಸೆ.19 ರಿಂದ ಸೆ.21 ರವರೆಗೆ ಮೂರು ದಿನಗಳವರೆಗೆ ಪ್ರತಿಷ್ಠಾಪನೆಗೆ ಅವಕಾಶ ನೀಡಿತ್ತು. ಸೆ. 21 ರ ಮಧ್ಯಾಹ್ನ 12 ಒಳಗಾಗಿ ಗಣೇಶ ವಿಸರ್ಜಿಸುವಂತೆ ಷರತ್ತು ವಿಧಿಸಿದೆ. ಈ ಹಿನ್ನೆಲೆಯಲ್ಲಿ ಮೂರನೇ ದಿನಕ್ಕೆ ವಿಸರ್ಜನಾ ಕಾರ್ಯಕ್ರಮ ಹಮ್ಮಿಕೊಂಡಿದ್ದು ಬಹು ಅದ್ದೂರಿಯಾಗಿ ವಿಸರ್ಜನಾ ಮೆರವಣಿಗೆ ಜರುಗಲಿದೆ. ಅಂದು ಚೆನ್ನಮ್ಮ ಮೈದಾನದಿಂದ ಆರಂಭವಾಗುವ ಮೆರವಣಿಗೆ, ಚೆನ್ನಮ್ಮ ವೃತ್ತ, ಹಳೇ ಬಸ್ ನಿಲ್ದಾಣ, ಬಸವೇಶ್ವರ ವೃತ್ತದ ಬಳಿಯಿಂದ ಇಂದಿರಾ ಗಾಜಿನ ಮನೆಯ ಪಕ್ಕದ ಬಾವಿಯಲ್ಲಿ ವಿಸರ್ಜನೆ ಮಾಡಲಾಗುವುದು ಎಂದು ತಿಳಿಸಿದರು.

ಪಾಲಿಕೆ ಸಾಮಾನ್ಯ ಸಭೆಯಲ್ಲಿ ಕೈಗೊಂಡ ನಿರ್ಣಯವನ್ನು ಆಯುಕ್ತರು ಅನುಷ್ಠಾನಗೊಳಿಸಿದ್ದರೆ ಈ ವೊಂದು ಹೋರಾಟ ಮಾಡುವ ಅವಶ್ಯಕತೆ ಇರಲಿಲ್ಲ. ಅನಗತ್ಯವಾಗಿ ವಿಳಂಬ ಧೋರಣೆಯಿಂದಾಗಿ ಹೋರಾಟ ಅನಿವಾರ್ಯವಾಯಿತು. ಪ್ರತಿಭಟನೆ ಸಂದರ್ಭದಲ್ಲಿ ಆಯುಕ್ತರ ವಿರುದ್ಧ ಯಾವುದೇ ಘೋಷಣೆ ಕೂಗಿಲ್ಲ ಎಂದು ಇದೇ ವೇಳೆ ಶಾಸಕ ಅರವಿಂದ ಬೆಲ್ಲದ ಸಮರ್ಥಿಸಿಕೊಂಡರು.

ಈದ್ಗಾ ಮೈದಾನ ಮಹಾನಗರ ಪಾಲಿಕೆ ಆಸ್ತಿಯಾಗಿದೆ. ಆದರೆ ಅಂಜುಮನ್ ಸಂಸ್ಥೆಯವರು ಇದರಲ್ಲಿ ಹಸ್ತಕ್ಷೇಪ ಮಾಡುತ್ತಿರುವುದು ಏಕೆ? ಗಣೇಶ ಪ್ರತಿಷ್ಠಾಪನೆ ಸುಸೂತ್ರವಾಗಿ ಆಗಬಾರದು ಎನ್ನುವುದು ಅವರ ಉದ್ದೇಶವೇ ಎಂದು ಪ್ರಶ್ನಿಸಿದ ಶಾಸಕ ಮಹೇಶ ತೆಂಗಿನಕಾಯಿ, ನೀವು ಡಿಸ್ಟರ್ಬ್ ಮಾಡಿದ್ರೇ ನಾವು ಡಿಸ್ಟರ್ಬ್ ಮಾಡುತ್ತೇವೆ ಎಂದು ನೇರವಾಗಿ ಎಚ್ಚರಿಕೆ ನೀಡಿದರು.

ಮಹಿಳಾ ಮೀಸಲಾತಿ ವಿಚಾರವಾಗಿ ಪ್ರತಿಕ್ರಿಯೆ ನೀಡಿದ ಶಾಸಕ ಅರವಿಂದ ಬೆಲ್ಲದ, ಕೇಂದ್ರ ಸರ್ಕಾರ ಮಹಿಳಾ ಮೀಸಲಾತಿ ವಿಚಾರಕ್ಕೆ ದಿಟ್ಟ ನಿರ್ಧಾರ ಕೈಗೊಂಡಿದೆ. ಈ ಹಿಂದಿನ ಸರ್ಕಾರಗಳು ಪ್ರಸ್ತಾಪಿಸಿದರು ಕಾರ್ಯಗತಗೊಳಿಸಿರಲಿಲ್ಲ. ಇದೀಗ ನರೇಂದ್ರ ಮೋದಿ ನೇತೃತ್ವದ ಸರ್ಕಾರ ಗಟ್ಟಿ ನಿರ್ಧಾರ ಕೈಗೊಳ್ಳುವ ಮೂಲಕ ಬಹುವರ್ಷಗಳ ಮಹಿಳಾ ಮೀಸಲಾತಿ ವಿಧೇಯಕವನ್ನು ಮಂಡಿಸಿದೆ ಎಂದರು.

ಪತ್ರಿಕಾಗೋಷ್ಠಿಯಲ್ಲಿ ಮೇಯರ್ ವೀಣಾ ಬರದ್ವಾಡ, ಪಾಲಿಕೆ ಸದಸ್ಯ ರಾಜಣ್ಣ ಕೊರವಿ, ತಿಪ್ಪಣ್ಣ ಮಜ್ಜಗಿ ಸೇರಿದಂತೆ ಮುಂತಾದವರು ಉಪಸ್ಥಿತರಿದ್ದರು.

CM in Delhi: ಸಿಎಂ ದೆಹಲಿಗೆ ಹೋಗಿರುವುದು ಸಂಸದರಿಗೆ ಭಾಷಣ ಮಾಡಲಿಕ್ಕಾ? ಕುಮಾರಸ್ವಾಮಿ..!

Special Pooja: ಲೋಕ ಕಲ್ಯಾಣಕ್ಕಾಗಿ ಗಣೇಶನ ಮುಂದೆ ಹೋಮ: ವಿಶೇಷ ಪೂಜೆ ಸಲ್ಲಿಕೆ..!

Farmer Protest: ಜನಪ್ರತಿನಿಧಿಗಳು ಕಾಣೆಯಾಗಿದ್ದಾರೆಂದು ಠಾಣೆಯಲ್ಲಿ ದೂರು ದಾಖಲಿಸಿದೆ ರೈತರು..!

- Advertisement -

Latest Posts

Don't Miss