National News: ರಾಷ್ಟ್ರಪತಿ ದ್ರೌಪದಿ ಮುರ್ಮು ಇಂದು ಉಜ್ಜಯಿನಿಯ ಮಹಾಕಾಳೇಶ್ವರನ ಸನ್ನಿಧಿಗೆ ಭೇಟಿ ನೀಡಿ, ಮಹಾಕಾಳೇಶ್ವರನಿಗೆ ವಿಶೇಷ ಪೂಜೆ ಸಲ್ಲಿಸಿದರು.
ಮಧ್ಯಪ್ರದೇಶದ ಉಜ್ಜೇಯಿನಿಯಲ್ಲಿರುವ ಮಹಾಕಾಳೇಶ್ವರನ ಸನ್ನಿಧಿಯಲ್ಲಿ ಕೆಲವರಿಗೆ ಮಹಾಕಾಲನ ಅಭಿಷೇಕ ಮಾಡಲು ಅನುಮತಿ ಇದೆ. ಹಾಗಾಗಿ ದ್ರೌಪದಿ ಮುರ್ಮು ಈ ದೇವಸ್ಥಾನಕ್ಕೆ ಭೇಟಿ ನೀಡಿ, ಮಹಾಕಾಲನಿಗೆ ಅಭಿಷೇಕ ಮಾಡಿದ್ದಾರೆ.
ಈ ಸಂದರ್ಭದಲ್ಲಿ ದ್ರೌಪದಿ ಮುರ್ಮು ಅವರಿಗೆ ಮಧ್ಯಪ್ರದೇಶದ ರಾಜ್ಯಪಾಲರಾದ ಮಂಗುಭಾಯ್ ಪಟೇಲ್ ಮತ್ತು ಸಿಎಂ ಡಾ.ಮೋಹನ್ ಯಾದವ್ ಕೂಡ ಸಾಥ್ ಕೊಟ್ಟಿದ್ದಾರೆ.
ಉಜ್ಜೇಯಿನಿ ಮಹಾಕಾಳೇಶ್ವರ ಲಿಂಗ 12 ಜ್ಯೋತಿರ್ಲಿಂಗಗಳಲ್ಲಿ ಒಂದಾಗಿದೆ. ಇಲ್ಲಿ ಹಲವು ಸೆಲೆಬ್ರಿಟಿಗಳು, ಕ್ರಿಕೇಟಿಗರು ಬಂದು ಮಹಾಕಾಲನ ದರ್ಶನ ಪಡೆಯುತ್ತಾರೆ. ವಿಶೇಷ ಪೂಜೆ, ಅಭಿಷೇಕ ಸಲ್ಲಿಸುತ್ತಾರೆ. ವಿರಾಟ್ ಕೊಹ್ಲಿ, ಅನುಷ್ಕಾ ದಂಪತಿ ಇಲ್ಲಿ ಬಂದು ಹಲವು ಬಾಾರಿ ಮಹಾಕಾಲನಿಗೆ ವಿಶೇಷ ಪೂಜೆ ಸಲ್ಲಿಸಿದ್ದಾರೆ.