Sunday, September 8, 2024

Latest Posts

ರಾಜ್ಯ ಪ್ರವಾಸದಲ್ಲಿ ರಾಷ್ಟ್ರಪತಿ..!

- Advertisement -

www.karnatakatv.net: ಕರ್ನಾಟಕ ರಾಜ್ಯ  ಪ್ರವಾಸವನ್ನು ಹಮ್ಮಿಕೊಂಡ ರಾಷ್ಟ್ರಪತಿ ರಾಮನಾಥ್  ಕೋವಿಂದ್  3ದಿನಗಳ ಕಾಲ ಪ್ರವಾಸವನ್ನು ಮಾಡಲಿದ್ದಾರೆ.

ಅ. 7 ರಂದು ಚಾಮರಾಜನಗರಕ್ಕೆ ಆಗಮಿಸಲಿದ್ದು, ಅ.6 ರಿಂದ 8ರವರೆಗೆ ಕರ್ನಾಟಕ ಪ್ರವಾಸದಲ್ಲಿರಲಿದ್ದಾರೆ. ಹಾಗೇ ವಿವಿಧ ಕಾರ್ಯಕ್ರಮದಲ್ಲಿ ಭಾಗಿಯಾಗಿ ದೇಗುಲಗಳಿಗೆ ಭೇಟಿ ನೀಡಲಿದ್ದಾರೆ. ಅ.6 ರಂದು ಸಂಜೆ ಬೆಂಗಳೂರಿನಲ್ಲಿ ರಾಜಭವನದಲ್ಲಿ ಹೈಕೋರ್ಟ್ ನ್ಯಾಯಾಧೀಶರು ಮತ್ತು ಅವರ ಕುಟುಂಬಸ್ಥರೊಂದಿಗೆ ಚಹಾ ಕೂಟ ಏರ್ಪಡಿಸಲಾಗಿದೆ.

ಅ.7 ರ ಬೆಳಗ್ಗೆ 11.40 ಕ್ಕೆ ಚಾಮರಾಜನಗರ ಜಿಲ್ಲೆಯ ಯಳಂದೂರು ತಾಲೂಕಿನ ಬಿಳಿಗಿರಿರಂಗನ ಬೆಟ್ಟಕ್ಕೆ ಭೇಟಿ ನೀಡಿ ದೇವರ ದರ್ಶನ ಪಡೆಯಲಿದ್ದಾರೆ. ನಂತರ ಚಾಮರಾಜನಗರ ಮೆಡಿಕಲ್ ಕಾಲೇಜಿನ ಆಸ್ಪತ್ರೆಯನ್ನು ಉದ್ಘಾಟಿಸಲಿದ್ದಾರೆ.

ಅ.8 ರಂದು ಚಿಕ್ಕಮಗಳೂರು ಜಿಲ್ಲೆಯ  ಶೃಂಗೇರಿ ಮಠಕ್ಕೆ ಭೇಟಿ ನೀಡಲಿದ್ದಾರೆ ಎಂದು ಆಷ್ಟ್ರಪತಿಗಳ ಆಪ್ತ ಕಾರ್ಯದರ್ಶಿ ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿಗೆ ರವಾನಿಸಿದ್ದಾರೆ.

- Advertisement -

Latest Posts

Don't Miss