ಮಹಾರಾಷ್ಟ್ರದಲ್ಲಿ ರಾಷ್ಟ್ರಪತಿ ಆಡಳಿತಕ್ಕೆ ಕೇಂದ್ರ ಶಿಫಾರಸು

ಮಹಾರಾಷ್ಟ್ರ:ಮಹಾರಾಷ್ಟ್ರದಲ್ಲಿ ರಾಷ್ಟ್ರಪತಿ ಆಡಳಿತವನ್ನು ರಾಜ್ಯಪಾಲರು ಶಿಫಾರಸು ಮಾಡಿದ್ದಾರೆ. ಯಾರಿಂದಲೂ ಹಕ್ಕು ಮಂಡನೆಯಾಗದ ಸ್ಥಿತಿ ನಿರ್ಮಾಣವಾದ ಹಿನ್ನೆಲೆಯಲ್ಲಿ ಮಹಾರಾಷ್ಟ್ರ ರಾಜ್ಯಪಾಲ ಭಗತ್ ಸಿಂಗ್ ಕೋಶಿಯಾರಿ ಅವರು ಹಾಲಿ ವಿಧಾನಸಭೆಯನ್ನು ಅಮಾನತಿನಲ್ಲಿಟ್ಟು  ರಾಷ್ಟ್ರಪತಿಗಳ ಆಡಳಿತಕ್ಕೆ ರಾಜ್ಯಪಾಲರು ಶಿಫಾರಸು ಮಾಡಿದ್ದಾರೆ.

ರಾಷ್ಟಪತಿ ಆಳ್ವಿಕೆಗೆ ರಾಮನಾಥ್ ಕೋವಿಂದ್  ಅವರು ಒಪ್ಪಿಗೆಯನ್ನು ನೀಡಿ ಕೇಂದ್ರ ಸಂಪುಟ ಶಿಫಾರಸ್ಸಿಗೆ ಸಹಿ ಹಾಕಿದರೆ  ಮಹಾರಾಷ್ಟ್ರದಲ್ಲಿ ರಾಷ್ಟ್ರಪತಿ ಆಳ್ವಿಕೆ ಜಾರಿಯಾಗಲಿದೆ. ರಾಷ್ಟ್ರಪತಿ ಆಡಳಿತ ಶಿಫಾರಸ್ಸು ವಿರೋಧಿಸಿ ಶಿವಸೇನೆ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದೆ.

About The Author