Tuesday, May 21, 2024

Latest Posts

ಬೆಲೆ ಏರಿಕೆಯೇ ಬಿಜೆಪಿಯ ಬಹುದೊಡ್ಡ ಸಾಧನೆ: ವಿನೋದ್ ಅಸೂಟಿ

- Advertisement -

Dharwad News: ಧಾರವಾಡ: ಹೊನ್ನಪೂರದಲ್ಲಿ ಹಮ್ಮಿಕೊಳ್ಳಲಾಗಿದ್ದ ಧಾರವಾಡ ಲೋಕಸಭಾ ಕ್ಷೇತ್ರದ ಕಲಘಟಗಿ ವಿಧಾನಸಭಾ ಕ್ಷೇತ್ರದ ಹೊನ್ನಾಪೂರ ಜಿಲ್ಲಾ ಪಂಚಾಯತ್ ವ್ಯಾಪ್ತಿಯ ಮುಖಂಡರ ಹಾಗೂ ಕಾರ್ಯಕರ್ತರ ಚುನಾವಣಾ ಬಹಿರಂಗ ಪ್ರಚಾರ ಸಭೆ ವಿನೋದ್‌ ಅಸೂಟಿ ಅವರು ಮತಯಾಚಿಸಿದರು.

ಈ ವೇಳೆ ಮಾತನಾಡಿದ ಅವರು, ನಿರುದ್ಯೋಗ, ಬೆಲೆ ಏರಿಕೆ, ರಸಗೊಬ್ಬರ ಹಾಗೂ ಜನರ ದಿನನಿತ್ಯದ ಎಲ್ಲಾ ದಿನಸಿಗಳ ಬೆಲೆ ಹೆಚ್ಚಿಸಿದ್ದೆ ಬಿಜೆಪಿ ಸರಕಾರದ ಅತಿದೊಡ್ಡ ಸಾಧನೆ. ಆದಕಾರಣ ಈ ಬಾರಿ ಜನರ ಸಂಕಷ್ಟ ಪರಿಹರಿಸುವ ಕಾಂಗ್ರೆಸ್ ಬೆಂಬಲಿಸಿ ಮತನೀಡಿ ಎಂದು ಮನವಿ ಮಾಡಿದರು.

ಈ ವೇಳೆ ನೂರಾರು ಕಾರ್ಯಕರ್ತರು ಜೆಡಿಎಸ್ ಹಾಗೂ ಬಿಜೆಪಿ ಪಕ್ಷವನ್ನು ತೊರೆದು ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾದರು. ಈ ಸಂದರ್ಭದಲ್ಲಿ ಕಾರ್ಮಿಕ ಸಚಿವರು ಮತ್ತು ಧಾರವಾಡ ಉಸ್ತುವಾರಿಗಳಾದ ಶ್ರೀ ಸಂತೋಷ ಲಾಡ್, ಸುರೇಶಗೌಡ ಕರಿಗೌಡ್ರ, ಮಲ್ಲನಗೌಡ ಪಾಟೀಲ, ಮೆಹರೋಜ್ ಖಾನ್, ಅಲಿ ಗೊರವನಕೊಳ್ಳ, ಗ್ರಾಮ ಪಂಚಾಯತ ಮಾಜಿ ಹಾಗೂ ಹಾಲಿ ಅಧ್ಯಕ್ಷರು ಮತ್ತು ಸದಸ್ಯರು, ಜಿಲ್ಲಾ ಪಂಚಾಯತ್ ವ್ಯಾಪ್ತಿಯ ಎಲ್ಲಾ ಮುಖಂಡರು, ಪಕ್ಷದ ಅಭಿಮಾನಿಗಳು, ಮಹಿಳೆಯರು ಮತ್ತು ಕಾರ್ಯಕರ್ತರು ಉಪಸ್ಥಿತರಿದ್ದರು.

ದೇಶದ ಜನ ಸ್ವಾವಲಂಬಿಯಾಗಲು ಮೋದಿಯವರು ಅನೇಕ ಸ್ಕೀಮ್ ಕೊಟ್ಟಿದ್ದಾರೆ: ಪ್ರಹ್ಲಾದ್ ಜೋಶಿ

ಪಾಕಿಸ್ತಾನ ಕೂಡ ಹೆದರುವಂತ ಮಹಾನ್ ವ್ಯಕ್ತಿ ಮೋದಿ: ಬಿ.ಎಸ್.ಯಡಿಯೂರಪ್ಪ

ಪ್ರಜ್ವಲ್ ಪೆನ್‌ಡ್ರೈವ್ ಪ್ರಕರಣ: ಸಂತ್ರಸ್ತೆಯ ಅತ್ತೆಯಿಂದ ಸ್ಪೋಟಕ ಹೇಳಿಕೆ..

- Advertisement -

Latest Posts

Don't Miss