Thursday, November 13, 2025

Latest Posts

ಮಾರುತಿಯಿಂದ ಆಡಿವರೆಗೆ ಕಾರುಗಳಲ್ಲಿ ಲಕ್ಷ ಲಕ್ಷ ಬೆಲೆ ಇಳಿಕೆ!

- Advertisement -

ಸರ್ಕಾರದ ನಿರ್ಧಾರದಂತೆ, ಸೆಪ್ಟೆಂಬರ್ 22ರಿಂದ ವಾಹನಗಳು ಹಾಗೂ ಬಿಡಿಭಾಗಗಳ ಮೇಲೆ ಜಿಎಸ್ಟಿ ಶೇ. 28 ಇಳಿಕೆಯಾಗಲಿದೆ. ಈ ಇಳಿಕೆಯನ್ನು ಗ್ರಾಹಕರಿಗೆ ನೇರ ಲಾಭವಾಗುವಂತೆ ಎಲ್ಲಾ ಆಟೋಮೊಬೈಲ್ ಕಂಪನಿಗಳು ಕಾರ್ಯನಿರ್ವಹಿಸುತ್ತಿದ್ದಾರೆ. ಮಾರುತಿ ಸುಜುಕಿಯ ಕಾರುಗಳ ಬೆಲೆ 1.29 ಲಕ್ಷ ರೂವರೆಗೆ ಇಳಿಕೆಯಾಗಲಿದೆ. ಆಡಿ ಕಾರುಗಳ ಬೆಲೆ 10 ಲಕ್ಷ ರೂವರೆಗೆ ಇಳಿಯಲಿದೆ. ಮರ್ಸಿಡೆಸ್ ಬೆಂಜ್ ಮತ್ತು ಲ್ಯಾಂಡ್ ರೋವರ್ ಬ್ರ್ಯಾಂಡ್‌ನ ಕೆಲ ಕಾರುಗಳ ಬೆಲೆ 30 ಲಕ್ಷ ರೂವರೆಗೂ ಕಡಿಮೆಯಾಗಲಿದೆ.

ಮಾರುತಿ ಸುಜುಕಿಯ ಪ್ರಚಲಿತ ಮಾದರಿಗಳಲ್ಲಿ, ಎಸ್ ಪ್ರೆಸ್ಸೋ ಕಾರಿನ ಬೆಲೆ 4 ಲಕ್ಷ ರೂಗಳಿಂದ 1.29 ಲಕ್ಷ ರೂ ಇಳಿಕೆ ಆಗಲಿದೆ. ಆಲ್ಟೋ ಕೆ10 ಮತ್ತು ಸ್ವಿಫ್ಟ್ ಕಾರುಗಳ ಬೆಲೆಗಳು ಕ್ರಮೇಣ ಕಡಿಮೆಯಾಗುತ್ತವೆ. ಟಾಟಾ ಮೋಟಾರ್ಸ್‌ನ ನೆಕ್ಸಾನ್, ಹ್ಯಾರಿಯರ್, ಸಫಾರಿ ಮೊದಲಾದ 1,200 ಸಿಸಿಗಳಿಗಿಂತ ಹೆಚ್ಚಿನ ಎಂಜಿನ್ ಹೊಂದಿರುವ ಕಾರುಗಳ ಬೆಲೆ ಒಂದು ಲಕ್ಷ ರೂಗೂ ಹೆಚ್ಚು ಕಡಿಮೆಯಾಗಲಿದೆ. ಸಣ್ಣ ಕಾರುಗಳು ಆಲ್ಟ್ರೋಜ್, ಟಿಯಾಗೋ, ಟೈಗೋರ್, ಪಂಚ್ ಇತ್ಯಾದಿಗಳ ಬೆಲೆ 85,000 ರೂಗಳವರೆಗೆ ಇಳಿಕೆಯಾಗಿದೆ.

ಮಹೀಂದ್ರ ಕಂಪನಿಯ ಥಾರ್, ಸ್ಕಾರ್ಪಿಯೋ, ಬೊಲೆರೋ, ಎಕ್ಸ್ಯುವಿ ಕಾರುಗಳ ಬೆಲೆ ಕಡಿಮೆಯಾಗುತ್ತಿವೆ. ಕೊರಿಯಾದ ಹ್ಯೂಂಡಾಯ್ ಕಂಪನಿಯ ಐ10, ಔರಾ, ಕ್ರೆಟಾ, ಆಲ್ಕಜಾರ್ ಕಾರುಗಳ ಬೆಲೆ 70,000 ರೂಗಿಂತ ಹೆಚ್ಚಿನ ಮೊತ್ತದಷ್ಟು ಇಳಿಕೆ ಆಗಿದೆ. ಕಿಯಾ, ರೆನೋ, ನಿಸ್ಸಾನ್, ಟೊಯೋಟಾ, ಹೊಂಡಾ, ಎಂಜಿ, ವೋಲ್ಸ್ವ್ಯಾಗನ್, ಸ್ಕೋಡಾ, ಜೀಪ್, ಸಿಟ್ರೋಯನ್, ಮರ್ಸಿಡೆಸ್ ಬೆಂಜ್, ಬಿಎಂಡಬ್ಲ್ಯು, ಆಡಿ, ಜಾಗ್ವರ್ ಲ್ಯಾಂಡ್ ರೋವರ್ ಬ್ರ್ಯಾಂಡ್‌ಗಳ ಕಾರುಗಳ ಬೆಲೆಗಳು ಕೂಡ ಸಾಕಷ್ಟು ಕಡಿಮೆ ಆಗಲಿದೆ.

ಟಾಟಾ ಒಡೆತನದ ಲ್ಯಾಂಡ್ ರೋವರ್ ಕಾರುಗಳ ಬೆಲೆ 30 ಲಕ್ಷ ರೂವರೆಗೂ ಇಳಿಕೆಯಾಗಲಿದೆ. ಆಡಿ ಮತ್ತು ಬೆಂಜ್ ಕಾರುಗಳ ಬೆಲೆಯೂ 30 ಲಕ್ಷ ರೂವರೆಗೂ ಕಡಿಮೆ ಆಗಲಿದೆ. ಸೆಪ್ಟೆಂಬರ್ 22ರಿಂದ ಈ ಹೊಸ ಬೆಲೆಗಳು ಜಾರಿಗೆ ಬರುವುದರಿಂದ, ಆಗಸ್ಟ್ನಿಂದಲೇ ಭಾರತದಲ್ಲಿ ಕಾರು ಮಾರಾಟದಲ್ಲಿ ಭಾರೀ ಕುಸಿತ ಕಂಡುಬಂದಿದೆ. ಅಕ್ಟೋಬರ್ ತಿಂಗಳಲ್ಲಿ, ಈ ಇಳಿಕೆಯ ಪ್ರಯೋಜನದಿಂದ ವಾಹನಗಳ ಮಾರಾಟ ದಾಖಲೆ ಮಟ್ಟಕ್ಕೆ ಏರಿಕೆಯ ನಿರೀಕ್ಷೆಯಿದೆ.

ವರದಿ: ರಂಜಿತ ರೇವಣ್ಣ ನಾಟನಹಳ್ಳಿ

- Advertisement -

Latest Posts

Don't Miss