Private Vehicle : ಸ್ತಬ್ಧವಾದ ಬೆಂಗಳೂರು ಖಾಸಗಿ ವಾಹನ : ಸಚಿವರ ಭರವಸೆ ಬೆನ್ನಲ್ಲೇ ಬಂದ್ ವಾಪಸ್

Banglore News : ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಖಾಸಗಿ ಸಾರಿಗೆ ಒಕ್ಕೂಟಗಳು ಇಂದು ಬೆಂಗಳೂರು ಬಂದ್​ಗೆ ಕರೆ ನೀಡಿದ್ದು ಬೆಂಗಳೂರು ಖಾಸಗೀ ಬಸ್ ಆಟೋಗಳು ಇಂದು ಸ್ತಬ್ಧವಾಗಿದ್ದವು.

ಈ ಪ್ರತಿಭಟನೆ ಕೆಲವೆಡೆ ಶಾಂತಿಯುತವಾಗಿದ್ದರೆ ಇನ್ನೂ ಹಲವೆಡೆ ಇದು ಹಿಂಸಾ ರೂಪವಾಗಿ ಪರಿವರ್ತನೆಯಾಗಿತ್ತು. ಬಂದ್ ಗೆ ಬೆಂಬಲ ನೀಡದೆ ಇದ್ದವರನ್ನು ಒತ್ತಾಯಪೂರ್ವಕವಾಗಿ ಬೆಂಬಲ ನೀಡುವಂತೆ ಹಿಂಸಾರೂಪವಾಗಿ ಉತ್ತೇಜನ ನೀಡಲಾಗಿತ್ತು.

ಹೌದು ಖಾಸಗಿ ಸಾರಿಗೆ ಒಕ್ಕೂಟಗಳ ಬಂದ್ ಕೆಲವೆಡೆ ಹಿಂಸಾಚಾರಕ್ಕೆ ತಿರುಗಿದೆ. ಬಲವಂತವಾಗಿ ಬಂದ್ ಮಾಡ್ತಿರೋರು, ಬಂದ್‌ಗೆ ಬೆಂಬಲ ನೀಡದೇ ಇರೋರ ಜೊತೆ ಗಲಾಟೆ ಮಾಡಿದ್ದಾರೆ.
ವಿಜಯನಗರಲ್ಲಿ ಆಟೋ ಚಾಲಕರ ನಡುವೆ ವಾಗ್ವಾದ ನಡೆಯಿತು. ರಸ್ತೆಗಿಳಿದ ಆಟೋ ಆಟೋ ಚಕ್ರದ ಗಾಳಿ ತೆಗೆದು ಕೆಲವರು ಗಲಾಟೆ ನಡೆಸಿದರು. ಚಕ್ರದ ಗಾಳಿ ಬಿಟ್ಟಿದ್ದಕ್ಕೆ ರೊಚ್ಚಿಗೆದ್ದ ಆಟೋ ಚಾಲಕ, ಪ್ರತಿಭಟನಕಾರರ ವಿರುದ್ಧ ಆಕ್ರೋಶ ಹೊರ ಹಾಕಿದ್ದಾರೆ.

ಗೊರಗುಂಟೆ ಪಾಳ್ಯದ ರಾಜ್‌ಕುಮಾರ್ ರಸ್ತೆಯಲ್ಲೂ ಚಾಲಕರಿಗೆ ಪ್ರತಿಭಟನಾಕಾರರು ತರಾಟೆಗೆ ತೆಗೆದುಕೊಂಡಿದ್ದಾರೆ. ರಸ್ತೆಗಿಳಿದ ಆಟೋ ಚಾಲಕರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ರು. ಆಟೋ ತಡೆದು, ಪಂಕ್ಚರ್ ಮಾಡಿ ಗಲಾಟೆ ಮಾಡಿದ್ದಾರೆ.
ಬಂದ್‌ಗೆ ಬೆಂಬಲಿಸದೇ ಆಟೋಗಳು ರಸ್ತೆಗಿಳಿದಿದ್ದಕ್ಕೆ ರೊಚ್ಚಿಗೆದ್ದ ಕೆಲ ಸಂಘಟನೆಗಳು, ಟೌನ್‌ಹಾಲ್‌, ಜಾಲಹಳ್ಳಿ ಬಳಿ ಆಟೋ ಹಾಗೂ ಕ್ಯಾಬ್ ಚಾಲಕರ ಮೇಲೆ ಹಲ್ಲೆ ಮಾಡಿವೆ. ಕೆಲ ಕಡೆ ಆಟೋಗಳ ಗಾಜುಗಳನ್ನು ಒಡೆದು ಹಾಕಿದ್ದಾರೆ.
ಇನ್ನೊಂದು ಕಡೆ ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ 32ರಲ್ಲಿ 27 ಬೇಡಿಕೆಗಳನ್ನು ಈಡೇರಿಸುವುದಾಗಿ ಭರವಸೆ ನೀಡಿದ ಬೆನ್ನಲ್ಲೇ ಖಾಸಗಿ ಸಾರಿಗೆ ಒಕ್ಕೂಟ ಬೆಂಗಳೂರು ಬಂದ್ ಪಡೆದಿದೆ.

DC Office : ರಾಜ್ಯದಲ್ಲಿ ಬರಗಾಲ ಘೋಷಣೆಗೆ ಒತ್ತಾಯ- ಡಿಸಿ‌ ಕಚೇರಿ ಎದುರು ರೈತ ಪ್ರಾಂತ ಸಂಘದಿಂದ ಪ್ರತಿಭಟನೆ

Kodi Shree : ರಾಜ್ಯ, ರಾಷ್ಟ್ರ ರಾಜಕೀಯದಲ್ಲಿ ಅಸ್ಥಿರತೆ ಕಾಡಲಿದೆ : ಭವಿಷ್ಯ ನುಡಿದ ಕೋಡಿ ಮಠದ ಸ್ವಾಮೀಜಿ

Siddaramaiah : ರಾಷ್ಟ್ರೀಯ ಅರಣ್ಯ ಹುತಾತ್ಮರ ದಿನಾಚರಣೆ : ಹುತಾತ್ಮರಿಗೆ ಶ್ರದ್ಧಾಂಜಲಿ ಸಲ್ಲಿಸಿದ ಸಿಎಂ ಸಿದ್ದರಾಮಯ್ಯ

About The Author