ಗೋವಿಂದರಾಜನಗರ
ಬೆಂಗಳೂರಿನ ಗೋವಿಂದರಾಜನಗರ ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಹಾಗೂ ಮಾಜಿ ಶಾಸಕ ಪ್ರಿಯಾ ಕೃಷ್ಣ ಪ್ರತಿ ವಾರ್ಡ್ ಗೆ ಭೇಟಿ ನೀಡ್ತಿದ್ದಾರೆ. ಕಾವೇರಿ ಪುರ ವಾರ್ಡ್, ಮೂಡಲಪಾಳ್ಯ ವಾರ್ಡ್, ನಾಗರಬಾವಿ ವಾರ್ಡ್, ಅಗ್ರಹಾರದಾಸರಹಳ್ಳಿ ವಾರ್ಡ್, ಮಾರೇನಹಳ್ಳಿ ವಾರ್ಡ್ ಸೇರಿ ಎಲ್ಲಾ ವಾರ್ಡ್ಗಳ ಮನೆ ಮನೆಗೆ ಭೇಟಿ ನೀಡ್ತಿದ್ದಾರೆ. ಸ್ಥಳೀಯ ಮುಖಂಡರ ಜೊತೆ ಮನೆ ಮನೆಗೆ ಭೇಟಿ ನೀಡಿ, ಕಾರ್ಯಕರ್ತರ ಜೊತೆ ಪ್ರಿಯಾ ಕೃಷ್ಣ ಸಮಾಲೋಚನೆ ನಡೆಸ್ತಿದ್ದಾರೆ. ಈ ನಡುವೆ, ಮಾರೇನಹಳ್ಳಿ ವಾರ್ಡ್ 125ರ ವ್ಯಾಪ್ತಿಯಲ್ಲಿ ಮುನಿರಾಜು ಅವರು ಬಿಜೆಪಿ ಪಕ್ಷವನ್ನು ತೊರೆದು, ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾದರು. ಈ ಸಂದರ್ಭದಲ್ಲಿ ಬಿಜೆಪಿ ತೊರೆದ ಎಲ್ಲಾ ಕಾರ್ಯಕರ್ತರನ್ನು ಆತ್ಮೀಯವಾಗಿ ಪ್ರಿಯಾ ಕೃಷ್ಣ ಅವರ, ಬರಮಾಡಿಕೊಂಡರು. ಸ್ಥಳೀಯ ಮುಖಂಡರು ಪಕ್ಷಕ್ಕೆ ಬಂದಿರೋದ್ರಿಂದ ಕಾಂಗ್ರೆಸ್ ಪಕ್ಷ ಮತ್ತಷ್ಟು ಬಲವರ್ಧನೆ ಆಗಿದೆ ಅಂದ್ರು. ಮನೆ ಮನೆಗೆ ಭೇಟಿ ನೀಡೋದ್ರ ಜೊತೆ ಮಾರೇನಹಳ್ಳಿ ವಾರ್ಡ್ 125ರ ವ್ಯಾಪ್ತಿಯ ನಚ್ಚಿಕೇತ ಉದ್ಯಾನವನದ ಬಳಿಯಲ್ಲಿ ವಾಲಿಬಾಲ್ ಆಟಗಾರರೊಂದಿಗೆ ಸಮಾಲೋಚನೆ ನಡೆಸಿದ ಪ್ರಿಯಾ ಕೃಸ್ಣ, ಕ್ರೀಡಾ ಕಿಟ್ ಗಳನ್ನು ವಿತರಿಸಲಾಯಿತು.
=====

