- Advertisement -
Political news
ಬೆಂಗಳೂರು: ಬೆಂಗಳೂರಿನ ಅರಮನೆ ಮೈದಾನದಲ್ಲಿ ಕೆಪಿಸಿಸಿ ವತಿಯಿಂದ ಹಮ್ಮಿಕೊಂಡಿರುವ ‘ನಾ ನಾಯಕಿ ಸಮಾವೇಶದಲ್ಲಿ ಪಾಲ್ಗೊಳ್ಳಲು ಎಐಸಿಸಿ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ವಾದ್ರಾ ಇಂದು ಮಧ್ಯಾಹ್ನ ಬೆಂಗಳೂರಿಗೆ ಆಗಮಿಸಿದರು. ಸಮಾವೇಶದಲ್ಲಿ ಭಾಗಿಯಾಗಲು ರಾಜ್ಯದ ಹಲವು ಭಾಗಗಳಿಂದ ಮಹಿಳಾ ನಾಯಕಿಯರು ಆಗಮಿಸಿದ್ದರು. ಮೊದಲ ಬಾರಿ ವೇದಿಕೆಯ ಮೇಲೆ ಮಹಿಳೆಯರು ಆಸೀನರಾದರು. ಸಹಸ್ರ ಸಂಖ್ಯೆಯಲ್ಲಿ ಆಗಮಿಸಿ ಸಮಾವೇಶದಲ್ಲಿ ಮಹಿಳೆಯರು ಭಾಗವಹಿಸಿದರು.
ಇನ್ನು ಸಮಾವೇಶದಲ್ಲಿ ವಿಪಕ್ಷ ನಾಯಕ ಸಿದ್ದರಾಮಯ್ಯನವರು, ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್, ಎಂಬಿ ಪಾಟೀಲ್ ವೇದಿಕೆಗೆ ಆಗಮಿಸಿದರು.
ಸಮಾವೇಶದಲ್ಲಿ ಭಾಗವಹಿಸಿದ ಜಯನಗರ ಶಾಸಕಿ ಸೌಮ್ಯಾ ರೆಡ್ಡಿ ಅವರು ಸಶಕ್ತ ಭಾರತ ಮಹಿಳಾ ಪ್ರಧಾನ ರಾಷ್ಟ್ರ ಮಾಡುತ್ತೇವೆಂದು ಶಪಥ ಮಾಡಿದರು.
- Advertisement -