ಸರ್ಕಾರಿ ಬಂಗಲೆ ಖಾಲಿ ಮಾಡಲು ಪ್ರಿಯಾಂಕಾ ವಾದ್ರಾಗೆ ಕೇಂದ್ರದಿಂದ ಸೂಚನೆ..!

ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ವಾದ್ರಾಗೆ ಸರ್ಕಾರಿ ಬಂಗಲೆ ತೆರವು ಮಾಡಲು ಒಂದು ತಿಂಗಳು ಕಾಲಾವಕಾಶ ನೀಡಲಾಗಿದ್ದು, ಆಗಸ್ಟ್ 1ರೊಳಗೆ ಸರ್ಕಾರಿ ಬಂಗಲೆ ತೆರವು ಮಾಡಲು ಸೂಚಿಸಿದೆ.

ಪ್ರಿಯಾಂಕಾಗೆ ನೀಡಿದ್ದ ಎಸ್‌ಪಿಜಿ ಭದ್ರತೆಯನ್ನು ಹಿಂಪಡೆಯಲಾಗಿದೆ. ಈ ಕಾರಣಕ್ಕಾಗಿ ಸರ್ಕಾರಿ ಬಂಗಲೆ ಖಾಲಿ ಮಾಡಲು ಪ್ರಿಯಾಂಕಾಗೆ ಸೂಚಿಸಲಾಗಿದೆ. ಒಂದು ವೇಳೆ ಬಂಗಲೆ ಖಾಲಿ ಮಾಡದಿದ್ದಲ್ಲಿ, ಆಗಸ್ಟ್ ಒಂದರಿಂದ ದಂಡದ ಹಣ ಸೇರಿಸಿ ಬಾಡಿಗೆ ಕಟ್ಟಬೇಕಾಗುತ್ತದೆ ಎಂದು ಸೂಚನೆ ನೀಡಲಾಗಿದೆ.

ಎಸ್‌ಪಿಜಿ ಭದ್ರತೆ ಇದ್ದವರಿಗೆ ಮಾತ್ರ ಸರ್ಕಾರಿ ಬಂಗಲೆಯಲ್ಲಿ ಇರಲು ಅವಕಾಶವಿರುತ್ತದೆ. 1997ರಲ್ಲಿ ಹೊಸ ದಿಲ್ಲಿಯ ಲುಟೆನ್ಸ್‌ನಲ್ಲಿರುವ ಲೋಧಿ ಎಸ್ಟೇಟ್‌ನಲ್ಲಿರುವ 35ನೇ ನಂಬರ್ ಬಂಗಲೆಯನ್ನ ಪ್ರಿಯಾಂಕಾ ಗಾಂಧಿಗೆ ನೀಡಲಾಗಿತ್ತು. ಆದ್ರೆ ಇದೀಗ ಎಸ್‌ಪಿಜಿ ಭದ್ರತೆಯನ್ನು ಹಿಂಪಡೆದ ಕಾರಣ, ಬಂಗಲೆಯನ್ನೂ ಖಾಲಿ ಮಾಡುವಂತೆ ಸೂಚಿಸಲಾಗಿದೆ.

https://youtu.be/465Mb5bSplY

ಸಚಿವರು, ನಾಯಕರು ಮಾಜಿಗಳಾದ ಮೇಲೆ ಅವರಿಗೆ 5 ವರ್ಷಗಳವರೆಗೆ ಅವರ ಕುಟುಂಬ ಸದಸ್ಯರಿಗೆ ಸರ್ಕಾರಿ ಬಂಗಲೆಯಲ್ಲಿರಲು ಅವಕಾಶವಿರುತ್ತದೆ. ತಂದನಂತರ ಝಡ್+ ಸೆಕ್ಯೂರಿಟಿ ಹಿಂಪಡೆದು, ಸರ್ಕಾರಿ ಬಂಗಲೆ ತೆರವಿಗೆ ಕೇಂದ್ರ ಸರ್ಕಾರ ಆದೇಶಿಸುತ್ತದೆ.

About The Author