ಸಿನಿಮಾ ಸುದ್ದಿ: ಒರು ಅಡಾರ್ ಲವ್ ಎನ್ನುವ ಮಲಯಾಳಂ ಸಿನಿಮಾದ ಹಾಡಿನ ದೃಶ್ಯಕ್ಕೆ ಕಣ್ಣು ಮಿಟುಕಿಸಿ, ರಾತ್ರಿ ಕಳೆದು ಬೆಳಗಾಗುವಷ್ಟರಲ್ಲಿ ವಿಶ್ವ ಪ್ರಸಿದ್ದಿ ಪಡೆದವರು ಪ್ರಿಯಾ ವಾರಿಯರ್. ಆದರೆ..ಕಣ್ಸನ್ನೆಯಿಂದ ಪ್ರಿಯಾಗೆ ಪ್ರಯೋಜನವಾಯಿತೇ ಹೊರತು ಸಿನಿಮಾಗೆ ನಯಾ ಪೈಸೆ ಲಾಭ ಆಗಲಿಲ್ಲ. ಸಿನಿಮಾ ಅಡ್ಡಡ್ಡ ಮಲಗಿತು.
ಪ್ರಿಯಾ ಮೇಲೆ ಕನ್ನಡ ಸೇರಿ ಅನೇಕ ಭಾಷೆಯ ನಿರ್ಮಾಪಕ ಹಾಗೂ ನಿರ್ದೇಶಕರ ಕಣ್ಣು ಬಿತ್ತು. ಒರು ಅಡಾರ್ ಲವ್ ಸಿನಿಮಾ ನಂತರ ಈ ಮೂರು ವರ್ಷಗಳಲ್ಲಿ ಹೆಚ್ಚು ಕಡಿಮೆ ಒಂದು ಡಜನ್ ಸಿನಿಮಾ ಮಾಡಿರುವ ಪ್ರಿಯಾ ವಾರಿಯರ್, ಆರಂಭದಲ್ಲಿ ಮನೆ ಮಗಳಂತೆ ಬಟ್ಟೆ ತೊಟ್ಟು ತೆರೆ ಮೇಲೆ ಕಾಣಿಸಿಕೊಂಡರು. ಆದರೆ.. ತೆರೆಯಾಚೆ.. ಪ್ರಿಯಾ ಹೆಚ್ಚಾಗಿ ಕಾಣಿಸಿಕೊಂಡಿದ್ದು ಗ್ಲ್ಯಾಮರಸ್ ಅವತಾರದಲ್ಲಿಯೇ. ಇದಕ್ಕೆ ಇನ್ನೊಂದು ಉದಾಹರಣೆ ಎನ್ನುವಂತೆ ಪ್ರಿಯಾ ಪ್ರಕಾಶ್ ವಾರಿಯರ್ ಸದ್ಯಕ್ಕೆ ಹೊಚ್ಚ ಹೊಸ ಫೋಟೋಶೂಟ್ ಮಾಡಿಸಿಕೊಂಡಿದ್ದಾರೆ. ಸೀರೆಯುಟ್ಟು ನೀರಿಗಿಳಿದಿದ್ದಾರೆ. ಬಂಗಾರದ ಬಾರ್ಡರ್ ಹೊಂದಿರುವ ಬಿಳಿ ಸೀರೆ ಜೊತೆ ಬಿಳಿ ಬಣ್ಣದ ಬ್ಲೌಸ್ ತೊಟ್ಟು ಮಿಂಚಿದ್ದಾರೆ.
ಪ್ರಿಯಾ ಪ್ರಕಾಶ್ ವಾರಿಯರ್ ಅವರ ಈ ಹಾವ ಭಾವ ಸದ್ಯಕ್ಕೆ ಪಡ್ಡೆಗಳ ಕಣ್ಣನ್ನ ಅರಳಿಸಿದೆ. “ಸೀರೆಯಲ್ಲಿ ಹುಡುಗಿಯ ನೋಡಲೇ ಬಾರದು” ಎಂಬ ರನ್ನ ಸಿನಿಮಾದ ಹಾಡು ಕೂಡ ಅನೇಕರಿಗೆ ನೆನಪಾಗಿದೆ. ಇದಕ್ಕೆ ಕೈಗನ್ನಡಿ ಎಂಬಂತೆ ಪ್ರಿಯಾ ವಾರಿಯರ್ ಅವರ ಇನ್ಸ್ಟಾ ಗ್ರಾಂ ಅಕೌಂಟಿಗೆ ಲಗ್ಗೆ ಇಟ್ಟಿರುವ ಅನೇಕರು ನಾನಾ ತರಹದ ಅಭಿಪ್ರಾಯಗಳನ್ನ ಹಂಚಿಕೊಳ್ತಿದ್ದಾರೆ. ಪ್ರಿಯಾ ನೋಟಕ್ಕೆ ಮರಳಾಗಿದ್ದಾರೆ.ಇನ್ನೂ ಕೆಲವರು ಇದೆಲ್ಲ ಬೇಕಿತ್ತಾ ಎಂದು ಕೊಂಕು ತೆಗೆದಿದ್ದಾರೆ.
Puneeth Rajkumar : ರಾತ್ರಿ ಬೆಳಗಾಗೋದ್ರೊಳಗೆ ಅಪ್ಪು ಪ್ರತಿಮೆ ಅನಾವರಣ…!