ಸಿನಿಮಾ ಸುದ್ದಿ: ಅಶ್ವಿನಿ ಪುನಿತ್ ರಾಜ್ ಕುಮಾರ್ ಅವರ ಪಿಆರ್ ಕೆ ಬ್ಯಾನರ್ ನಡಿ ಹೊಸ ಹೊಸ ಪ್ರತಿಭೆಗಳಿಗೆ ಅವಕಾಶ ನೀಡಬೇಕೆಂದು ನಿರ್ಮಾಣವಾದ ಈ ಸಂಸ್ಥೆಯಿಂದ ಸಾಕಷ್ಟು ಹೊಸ ನಟರು ನಟಿಯರು ನಿರ್ದೇಶಕರು ಹೊರ ಪ್ರಪಂಚಕ್ಕೆ ಪರಿಚಯವಾಗುತ್ತಿದ್ದಾರೆ ಅದೇ ರೀತಿ ಈಗ ಕನ್ನಡದ ಹೊಸ ಸಿನಿಮಾ ಸಿದ್ದವಾಗಿದೆ.ಜುಲೈ 28 ರಂದು ತೆರೆಗೆ ಬರಲು ಸಿದ್ದವಾಗಿದೆ.
ಇದು ರೆಟ್ರೋ ಕಾಲದ ಕಥೆ ಹೊಂದಿರುವ ಸಿನಿಮಾ. 1960ರ ಕಾಲಘಟ್ಟದಲ್ಲಿ ಕಥೆ ಸಾಗುತ್ತದೆ. ಒಂದು ಅವಿಭಕ್ತ ಕುಟುಂಬ. ಮನೆ ತುಂಬ ಮಕ್ಕಳು. ಎಲ್ಲ ಮಕ್ಕಳ ಶಿಕ್ಷಣ, ಉದ್ಯೋಗ, ಮದುವೆಯ ಜವಾಬ್ದಾರಿ ವಹಿಸಿಕೊಂಡ ತಂದೆ ಏಕಾಏಕಿ ನಿಧನರಾದಾಗ ಮನೆಯ ಪರಿಸ್ಥಿತಿ ಬದಲಾಗುತ್ತದೆ. ಮಕ್ಕಳ ಹೆಗಲಿಗೆ ಜವಾಬ್ದಾರಿ ವರ್ಗಾವಣೆ ಆಗುತ್ತದೆ. ಆಗ ಕುಟುಂಬದಲ್ಲಿ ಏನೆಲ್ಲ ಬದಲಾವಣೆ ಆಗುತ್ತದೆ ಎಂಬುದನ್ನು ಹಾಸ್ಯದ ದಾಟಿಯಲ್ಲಿ ಪ್ರೇಕ್ಷಕರ ಎದುರು ತೆರೆದಿಟ್ಟಿದ್ದಾರೆ ನಿರ್ದೇಶಕಿ ಸಿಂಧೂ ಶ್ರೀನಿವಾಸಮೂರ್ತಿ.
ಪ್ರಥಮ ಪ್ರಯತ್ನದಲ್ಲೇ ಸಿಂಧೂ ಶ್ರೀನಿವಾಸಮೂರ್ತಿ ಅವರು ಗಮನ ಸೆಳೆಯುವಂತಹ ಸಿನಿಮಾ ನೀಡಿದ್ದಾರೆ. ಈ ತಲೆಮಾರಿನ ಯುವ ನಿರ್ದೇಶಕಿಯೊಬ್ಬರು 1960 ಕಾಲಘಟ್ಟದ ಕಥೆಯನ್ನು ಸಂವೇದನಾಶೀಲವಾಗಿ ತೆರೆಗೆ ತಂದಿರುವುದು ಶ್ಲಾಘನೀಯ. ಹಾಸ್ಯವೇ ಈ ಸಿನಿಮಾದ ಜೀವಾಳ. ಅದರ ಜೊತೆಗೆ ಅನೇಕ ಭಾವಗಳು ತುಂಬಿಕೊಂಡಿವೆ. ‘ಆಚಾರ್ ಆ್ಯಂಡ್ ಕೋ’ ಕಥೆಯಲ್ಲಿ ಲವ್ ಸ್ಟೋರಿ ಇದೆ. ಎಮೋಷನಲ್ ದೃಶ್ಯಗಳೂ ಇವೆ. ಆದರೂ ಅವುಗಳ ನಡುವೆ ಹಾಸ್ಯಕ್ಕೆ ಹೆಚ್ಚು ಮಹತ್ವ ನೀಡಲಾಗಿದೆ. ಇದರಿಂದ ಪೂರ್ತಿ ಸಿನಿಮಾದಲ್ಲಿ ಲವಲವಿಕೆ ತುಂಬಿದೆ.
Amrtha Ayyangar : ಮದುವೆಯಾಗ್ತಾರಾ ಡಾಲಿ-ಅಮೃತಾ..?! ನಟಿ ಸ್ಪಷ್ಟನೆ ಏನು ..!
Dharshan : ದಚ್ಚು ಕಿಚ್ಚನ ಸ್ನೇಹ ಎಂತಹದ್ದು ಗೊತ್ತಾ..?! ಮತ್ತೆ ವೀಡಿಯೋ ವೈರಲ್..!