Wednesday, July 2, 2025

Latest Posts

ಆರ್ ಸಿ ಕಚೇರಿ ರದ್ದು ಪಡಿಸಿರುವ ಆದೇಶ ಹಿಂಪಡೆಯಲು ಕನ್ನಡ ಪರ ಹೋರಾಟಗಾರರಿಂದ ಆಗ್ರಹ

- Advertisement -

www.karnatakatv.net : ಬೆಳಗಾವಿ: ಬೆಳಗಾವಿ ಸೇರಿದಂತೆ ರಾಜ್ಯ ನಾಲ್ಕು ಪ್ರಾದೇಶಿಕ ಆಯುಕ್ತರ ಕಚೇರಿ ರದ್ದು ಪಡಿಸಲಾಗಿದೆ ಎಂದು ಕಂದಾಯ ಸಚಿವ ಆರ್ ಅಶೋಕ್ ಅವರು ಅದೇಶ ಹೊರಡಿಸಿರುವ ಹಿನ್ನೆಲೆಯಲ್ಲಿ ಬೆಳಗಾವಿಯ ಕನ್ನಡ ಪರ ಹೊರಾಟಗಾರರು ಪ್ರತಿಭಟನೆ ನಡೆಸಿದರು.

ಇಂದು ಬೆಳಗಾವಿಯ ಪ್ರದೇಶಿಕ ಆಯುಕ್ತ ಕಚೇರಿಗೆ ತೇರಳಿದ ಕನ್ನಡಪರ ಹೊರಾಟಗಾರರು ಉಪ ಪ್ರಾದೇಶಿಕ ಆಯುಕ್ತೆ ಗೀತಾ ಕವಲಗಿ ಅವರಿಗೆ ಮನವಿ ಸಲ್ಲಿಸಿದ್ದರು. ಬಳಿಕ ಮಾದ್ಯಮಗಳ ಜೊತೆ ಮಾತನಾಡಿದ ಕನ್ನಡ ಕ್ರಿಯಾ ಸಮಿತಿಯ‌ ಅಧ್ಯಕ್ಷ ಅಶೋಕ ಚಂದರಗಿ ಅವರು, ಬೆಂಗಳೂರಿನಲ್ಲಿರುವ ಹಿರಿಯ ಅಧಿಕಾರಿಗಳ ಹಿತಾಸಕ್ತಿಗಾಗಿ ರಾಜ್ಯದ ನಾಲ್ಕು ಪ್ರಾದೇಶಿಕ ಕಚೇರಿಗಳನ್ನು ರದ್ದು ಪಡಿಸಲಾಗಿದೆ ಎಂದು ಆಕ್ರೋಶ ಹೊರ ಹಾಕಿದರು.

ರಾಜ್ಯದ ಅಧಿಕಾರಿಗಳು ಬೆಂಗಳೂರು ಕಚೇರಿ ಬಿಟ್ಟು ಬೇರೆ ಕಡೆ ಕೆಲಸ ಮಾಡಲು ಆಗುತ್ತಿಲ್ಲ ಅದ್ದರಿಂದ ಕಂದಾಯ ಸಚಿವರು ಈ ನಿರ್ಧಾರ ಕೈ ಗೊಂಡಿದ್ದಾರ. ಒಂದು ವೇಳೆ ಪ್ರಾದೇಶಿಕ ಆಯುಕ್ತರ ಕಚೇರಿ ರದ್ದು ಮಾಡಿದರೆ ಉತ್ತರ ಕರ್ನಾಟಕ ಭಾಗದ ಜನರಿಗೆ ಅನ್ಯಾಯ ಮಾಡಿದಂತೆ ಆಗುತ್ತದೆ. ಅದ್ದರಿಂದ ಈ ಕೂಡಲೇ ಮುಖ್ಯಮಂತ್ರಿಗಳು ಪ್ರಾದೇಶಿಕ ಆಯುಕ್ತ ಕಚೇರಿ ರದ್ದತಿ ಪಡಿಸುತ್ತಿರುವ ನಿರ್ಧಾರ ಕೈ ಬಿಡಬೇಕು ಇಲ್ಲದಿದ್ದರೆ ರಾಜ್ಯಾದ್ಯಂತ ಉಗ್ರವಾದ ಹೋರಾಟ ಮಾಡುತ್ತೇವೆ ಎಂದು ಎಚ್ಚರಿಕೆ ನೀಡಿದರು.

ಈ ವೇಳೆ ದೀಪಕ ಗುಡಗನಟ್ಡಿ, ಬಿ.ಒ.ತಿಪ್ಪೇಸ್ವಾಮಿ ಹಿರಿಯ ಕನ್ನಡ ಹೋರಾಟಗಾರರು ಮಲ್ಲೇಶ ಕುಂದರಗಿ, ಬಸವರಾಜ ನಿರವಾಣಿ, ನಿಂಗಪ್ಪ ಮರಗಟ್ಟಿ, ರಾಜು ಬೋಜಪ್ಪಗೋಳ, ಶಿವಲೀಲಾ ಹಿರೇಮಠ ಸೇರಿದಂತೆ ಮುಂತಾದ ಹೋರಾಟಗಾರರು ಉಪಸ್ಥಿತರಿದ್ದರು

- Advertisement -

Latest Posts

Don't Miss